Advertisement

ಪ್ರಮಾಣಪತ್ರ ಪಡೆಯಲು ಬೆಂಗಳೂರು ವಿವಿ ಕರೆ

12:49 PM Sep 16, 2017 | Team Udayavani |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 53ನೇ ಘಟಿಕೋತ್ಸವಕ್ಕೆ ಸಂಬಂಧ 2017ರ ಮೇ ಅಥವಾ ಜೂನ್‌ನಲ್ಲಿ ವಿವಿಧ ಪದವಿಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಹಾಗೂ ಪ್ರಮಾಣ ಪತ್ರ ಪಡೆಯದೆ ಇರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

Advertisement

ಪರೀಕ್ಞಾ ಶುಲ್ಕದ ಜತೆಗೆ ಘಟಿಕೋತ್ಸವದ ಶುಲ್ಕ ಪಾವತಿಸಿದ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ನಮೂನೆಗಳು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿರುವ ಕಾಲೇಜುಗಳಲ್ಲಿ ಲಭ್ಯವಿದೆ ಹಾಗೂ ವಿಶ್ವವಿದ್ಯಾಲಯದ ವೆಬ್‌ಸೈಟ್‌ www.bangaloreuniversity.ac.in, //www.bangaloreuniversity.ac.in ನಲ್ಲೂ ಪಡೆಯಬಹುದು.

ಅಭ್ಯರ್ಥಿಯು ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ಕಾಲೇಜು ಪ್ರಾಂಶುಪಾಲರಿಗೆ ಅಕ್ಟೋಬರ್‌ 25ರೊಳಗೆ ಸಲ್ಲಿಸಬೇಕು. 200ರೂ.ದಂಡ ಸಹಿತ ಅ.30ರೊಳಗೆ ಸಲ್ಲಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರು, ಡಿಡಿ ರಶೀದಿ ಸಮೇತ ವಿಶ್ವವಿದ್ಯಾಲಯಕ್ಕೆ ನ.1ರೊಳಗೆ ಸಲ್ಲಿಸಲು ಮೌಲ್ಯಮಾಪನ ಕುಲಸಚಿವರು ತಿಳಿಸಿದ್ದಾರೆ.

ಶುಲ್ಕ ವಿವರ: ಭಾರತೀಯ ಪ್ರಜೆಗೆ  970 ರೂ., ವಿದೇಶಿಯರಿಗೆ 3730 ರೂ., ಪಿಎಚ್‌.ಡಿ ಪ್ರಮಾಣ ಪತ್ರ ಭಾರತೀಯ ಪ್ರಜೆಗೆ 1,210 ರೂ. ಹಾಗೂ ವಿದೇಶಿ ಪ್ರಜೆಗೆ 4,840 ರೂ., ಸ್ವಾಯತ್ತ ಕಾಲೇಜುಗಳ ಭಾರತೀಯ ಪ್ರಜೆಗೆ 1,940 ರೂ., ವಿದೇಶಿಯರಿಗೆ 7,260ರೂ.. ಅಭ್ಯರ್ಥಿಗಳು ಇದುವರೆಗೂ ಪದವಿ ಪ್ರಮಾಣ ಪತ್ರಗಳಿಗೆ ನಿಗದಿತ ಶುಲ್ಕದ ಜತೆಗೆ ಅರ್ಜಿ ಸಲ್ಲಿಸದೆ ಇದ್ದಲ್ಲಿ  2ರಿಂದ 5ವರ್ಷಗಳ ಒಳಗೆ 365 ರೂ., 5ರಿಂದ 10 ವರ್ಷದ ಒಳಗೆ 735 ರೂ., 10ರಿಂದ 15ವರ್ಷದ ಒಳಗೆ 1070 ರೂ., 15ರಿಂದ 20 ವರ್ಷದ ಒಳಗೆ 1470 ರೂ. ಹಾಗೂ 20ರಿಂದ 25ವರ್ಷದ ಒಳಗೆ 1800 ರೂ. ಪಾವತಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next