Advertisement
ಮೂರು ದಿನಗಳ “ಬೆಂಗಳೂರು ಟೆಕ್ ಸಮಿಟ್-2021’ಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು, “ತಂತ್ರಜ್ಞಾನಗಳು ಸಾಮಾನ್ಯರ ಬದುಕಿನಲ್ಲಿ ಬದಲಾವಣೆಗೆ ಕಾರಣ ವಾಗಬೇಕು. ಅದರಲ್ಲೂ ನಮ್ಮದು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಆ ಕ್ಷೇತ್ರದ ಸುಧಾರಣೆಗೆ ಪೂರಕವಾದ ತಂತ್ರಜ್ಞಾನಗಳು ಅಭಿವೃದ್ಧಿಗೊಳ್ಳಬೇಕು. ಹಾಗೂ ಅವುಗಳು ರೈತರಿಗೆ ತಲುಪುವಂತಾಗಬೇಕು’ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, “ಟೆಕ್ ಸಮಿಟ್ ವರ್ಷದಿಂದ ವರ್ಷಕ್ಕೆ ದೊಡ್ಡ ಮಟ್ಟದಲ್ಲಿ ನಡೆಯುವುದರ ಜತೆಗೆ ಯಶಸ್ವಿಯಾಗಿಯೂ ಆಗು ತ್ತಿದೆ. ಇಲ್ಲಿ ಅನಾವರಣಗೊಳ್ಳುವ ತಂತ್ರ ಜ್ಞಾನಗಳು ಮತ್ತು ಆವಿಷ್ಕಾರಗಳು ರೈತರು, ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯುವ ಮೂಲಕ ಇದ ರಲ್ಲಿ ಮತ್ತಷ್ಟು ಹೊಣೆಗಾರಿಕೆ ತರುವ ಅಗತ್ಯವಿದೆ ಎಂದರು.
Related Articles
Advertisement
ಇದನ್ನೂ ಓದಿ:ರಾಜ್ಯದಲ್ಲಿ ಶೀಘ್ರ ಬರಲಿದೆ “ಆರ್ ಆಂಡ್ ಡಿ ನೀತಿ’: ಸಿಎಂ
ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಐಟಿ-ಬಿಟಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಐಟಿ, ಬಿಟಿ ಮತ್ತು ಸ್ಟಾರ್ಟಪ್ ವಿಷನ್ ಗ್ರೂಪ್ ಗಳ ಮುಖ್ಯಸ್ಥರಾದ ಕ್ರಮವಾಗಿ ಕ್ರಿಸ್ ಗೋಪಾಲಕೃಷ್ಣನ್, ಕಿರಣ್ ಮಜುಂ ದಾರ್ ಷಾ ಮತ್ತು ಪ್ರಶಾಂತ್ ಪ್ರಕಾಶ್ ಮತ್ತಿತರರಿದ್ದರು. ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ಕಿಂಡ್ರೆಲ್ ಸಿಇಒ ಮಾರ್ಟಿನ್ ಶ್ರೋಟರ್ ವರ್ಚುವಲ್ ಮೂಲಕ ಮಾತನಾಡಿದರು.
ಬೆಂಗಳೂರಿನಲ್ಲಿ ಆಸ್ಟ್ರೇಲಿಯ ಕಾನ್ಸೊಲೇಟ್ ಕಚೇರಿಬೆಂಗಳೂರಿನಲ್ಲಿ ಶೀಘ್ರ ಆಸ್ಟ್ರೇಲಿಯ ಕಾನ್ಸೋಲೇಟ್ ಜನರಲ್ ಕಚೇರಿ ತೆರೆಯಲಾಗುವುದು ಎಂದು ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮಾರಿಸಸ್ ತಿಳಿಸಿದರು. ಭಾರತದೊಂದಿಗೆ, ಅದರಲ್ಲೂ ವಿಶೇಷವಾಗಿ ಕರ್ನಾಟಕದೊಂದಿಗಿನ ಆಸ್ಟ್ರೇಲಿಯ ಬಾಂಧವ್ಯ ಟೆಕ್ ಸಮಿಟ್‌ನಿಂದ ಗಟ್ಟಿಗೊಳ್ಳುತ್ತಿದೆ. ಶೀಘ್ರದಲ್ಲೇ ಬೆಂಗಳೂರಿನಲ್ಲಿ ಆಸ್ಟ್ರೇಲಿಯ ಕಾನ್ಸೊಲೇಟ್ ಜನರಲ್ ಕಚೇರಿಯನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಪುನೀತ್‌ಗೆ ನಾಯ್ಡು ಕಂಬನಿ
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಕಂಬನಿ ಮಿಡಿದರು. ಕನ್ನಡ ಚಿತ್ರರಂಗದ ಜನಪ್ರಿಯ ಮತ್ತು ಸಮಾಜಮುಖೀ ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ಅಗಲಿಕೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದರು. ಟೆಕ್ ಸಮಿಟ್‌ಗೆ ಮೊದಲ ದಿನವೇ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬುಧವಾರ ಸುಮಾರು 25 ಸಾವಿರ ಜನ ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದಾರೆ .
-ಡಾ|ಅಶ್ವತ್ಥನಾರಾಯಣ
ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ