Advertisement

ಬೆಂಗಳೂರು ಉಪನಗರ ರೈಲು ಯೋಜನೆ ಹಂತ-1ಗೆ ಸಚಿವ ಸಂಪುಟ ಅನುಮೋದನೆ

12:20 PM Feb 16, 2017 | Team Udayavani |

ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆಯ “ಹಂತ-1 ಎ’ ಅಡಿ 10 ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ “ಹಂತ-1 ಎ’ ಅನುಷ್ಠಾನಕ್ಕೆ ಬೇಕಾದ 345 ಕೋಟಿ ರೂ. ಅನುದಾನ ಒದಗಿಸಲೂ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿತು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಟ್ಟು 10,929 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ರೈಟ್ಸ್‌ ಸಂಸ್ಥೆ ನೀಡಿದ ವರದಿ ಆಧರಿಸಿ ಈ ಯೋಜನೆ ರೂಪಿಸಲಾಗಿದೆ.

ಇದಲ್ಲದೆ, ಮಾಗಡಿ ರಸ್ತೆಯ ಭಿಕ್ಷುಕರ ಕೇಂದ್ರದ ಐದು ಎಕರೆ ಜಾಗದಲ್ಲಿ ಬಾಬು ಜಗಜೀವನರಾಂ ಸಂಶೋಧನಾ ಕೇಂದ್ರವನ್ನು 62 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವ ಬಗ್ಗೆಯೂ ಸಂಪುಟ ಸಬೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಯಾವ ಮಾರ್ಗಗಳಲ್ಲಿ ರೈಲು 
ಬೆಂಗಳೂರು-ಮಂಡ್ಯ, ಬೆಂಗಳೂರು- ಯಶವಂತಪುರ, ಯಶವಂತಪುರ- ತುಮಕೂರು, ಯಶವಂತ ಪುರ- ಯಲಹಂಕ, ಯಲಹಂಕ- ಬೈಯಪ್ಪನಹಳ್ಳಿ, ಯಲಹಂಕ- ಚಿಕ್ಕಬಳ್ಳಾಪುರ, ಯಲಹಂಕ- ದೊಡ್ಡಬಳ್ಳಾಪುರ, ಸೋಲದೇವನಹಳ್ಳಿ- ಕುಣಿಗಲ್‌, ಬೆಂಗಳೂರು- ಬಂಗಾರಪೇಟೆ, ಬೈಯಪ್ಪನ ಹಳ್ಳಿ- ಹೊಸೂರು ಮಧ್ಯೆ ಉಪನಗರ ರೈಲು ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next