Advertisement

ಇಂದ್ರಜಿತ್‌ ವಿರುದ್ದ ದರ್ಶನ್‌ ಅಭಿಮಾನಿಗಳ ದೂರು

05:33 PM Jul 23, 2021 | Team Udayavani |

ದೊಡ್ಡಬಳ್ಳಾಪುರ: ನಟ ದರ್ಶನ್‌ ಅವರು ಹೋಟೆಲ್‌ವೊಂದರ ದಲಿತ ಸಪ್ಲೆಯರ್‌ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಆರೋಪ ಸ್ವಾರ್ಥದಿಂದ ಕೂಡಿದ್ದು, ಪ್ರಕರಣದಲ್ಲಿ ದಲಿತ ಎಂಬಪದ ಬಳಸಿ, ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವುದಕ್ಕೆ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ ದರ್ಶನ್‌ ಅಭಿಮಾನಿಗಳು ನಗರ ಪೊಲೀಸ್‌ಠಾಣೆಗೆ ದೂರು ನೀಡಿದ್ದಾರೆ.

Advertisement

ಕರುನಾಡ ಚಕ್ರವರ್ತಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತೂಗುದೀಪಅಭಿಮಾನಿಗಳ ಸಂಘ, ಡಿ.ಕಂಪನಿ ವತಿಯಿಂದ ನಗರ ಪೊಲೀಸ್‌ ಠಾಣೆ ಸಬ್‌ಇನ್ಸೆ ³ಕ್ಟರ್‌ ಗೋವಿಂದ್‌ ಅವರಿಗೆ ಇಂದ್ರಜಿತ್‌ ಲಂಕೇಶ್‌ ವಿರುದ್ಧ ಕ್ರಿಮಿನಲ್‌ಮೊಕದ್ದಮೆ ಹೂಡುವಂತೆ ಲಿಖೀತ ದೂರಿನ ಮೂಲಕ ಮನವಿಮಾಡಲಾಗಿದೆ.ದೂರಿನ ಅನ್ವಯ ಇಂದ್ರಜಿತ್‌ ಲಂಕೇಶ್‌ ಸ್ವಾರ್ಥಕ್ಕೆ ಮಾಧ್ಯಮಗಳನ್ನುಬಳಸಿಕೊಂಡಿದ್ದು, ಮೈಸೂರಿನ ಹೋಟೆಲ್‌ ಒಂದರಲ್ಲಿ ದಲಿತ ದಲಿತಸಪ್ಲೆçಯರ್‌ಗೆಹೊಡೆದಿದ್ದಾರೆಎಂದು ಪದೇಪದೆ ಹೇಳಿ ನಟ ದರ್ಶನ್‌ವಿರುದ್ಧದಲಿತ ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಅಶಾಂತಿ ನಿರ್ಮಾಣಮಾಡಲು ಪ್ರಯತ್ನಿಸಿದ್ದಾರೆ.

ಸಹಸ್ರಾರು ಅಭಿಮಾನಿಗಳನ್ನುಹೊಂದಿರುವನಟನವಿರುದ್ಧಮಾಧ್ಯಮಗಳಮುಂದೆ ಅವಹೇಳನ ಪದ ಬಳಕೆ ಮಾಡಿದ್ದು, ದರ್ಶನ್‌ ಅಭಿಮಾನಿಗಳಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅಲ್ಲದೆ, ಕಲಾವಿದರೆಲ್ಲರೂ ಅವಿದ್ಯಾವಂತರುಎಂದು ಕಲಾವಿದರನ್ನುಅವಮಾನಿಸಿದ್ದಾರೆ.

ಹಿಂದುಳಿದ ಜನಾಂಗದ ಹೆಸರನ್ನುದುರ್ಬಳಕೆಮಾಡಿಕೊಂಡಿರುವ ಕಾರಣಕ್ರಿಮಿನಲ್‌ ಮೊಕದ್ದಮೆಹೂಡಿ ಕ್ರಮಕೈಗೊಳ್ಳಬೇಕು ಎಂದು ಅಭಿಮಾನಿಗಳು ದೂರಿನಲ್ಲಿ ಒತ್ತಾಯಿಸಿದ್ದಾರೆ. ಕರುನಾಡ ಚಕ್ರವರ್ತಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತೂಗುದೀಪಅಭಿಮಾನಿಗಳ ‌ ಸಂಘ,ಡಿ.ಕಂಪನಿಅಧ್ಯಕ್ಷದೀಪಕ್‌, ಗೌರವಅಧ್ಯಕ್ಷ ನಾಗೇಶ್‌,ಉಪಾಧ್ಯಕ್ಷ ಹೇಮಂತ್‌, ಕಾರ್ಯ¨ರ್ಶಿಗ ‌ ‌ಳಾದ ಚೇತನ್‌, ಶಾಂತಿನಗರಚೇತನ್‌, ಸದಸ್ಯರಾದ ಲಿಖೀತ್‌, ಶರತ್‌, ಪ್ರಶಾಂತ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next