Advertisement

ಪ್ಲಾಸ್ಟಿಕ್‌ ಮುಕ್ತಿಗೆ ಬೆಂಗಳೂರು ಪ್ಲಾಗ್‌ ರನ್‌

12:25 PM Sep 20, 2018 | Team Udayavani |

ಬೆಂಗಳೂರು: ಗಾಂಧಿ ಜಯಂತಿ ಅಂಗವಾಗಿ ಅಕ್ಟೋಬರ್‌ 2ರಂದು ಪ್ಲಾಸ್ಟಿಕ್‌ ತ್ಯಾಜ್ಯ ಮುಕ್ತ ನಗರಕ್ಕಾಗಿ ಬಿಬಿಎಂಪಿ ವ್ಯಾಪ್ತಿಯ 50 ಪ್ರದೇಶಗಳಲ್ಲಿ ಪ್ಲಾಸ್ಟಿಕ್‌ ಉತ್ಪನ್ನಗಳ ಸಂಗ್ರಹಕ್ಕಾಗಿ “ಬೆಂಗಳೂರು ಪ್ಲಾಗ್‌ ರನ್‌’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

Advertisement

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ನಗರದ ಉದ್ಯಾನ, ಕೆರೆಗಳ ಆವರಣ, ಬಸ್‌ ಹಾಗೂ ರೈಲು ನಿಲ್ದಾಣಗಳು ಸೇರಿ ಪ್ರಮುಖ ಭಾಗಗಳನ್ನು ಪ್ಲಾಸ್ಟಿಕ್‌ ತ್ಯಾಜ್ಯ ಮುಕ್ತಗೊಳಿಸುವ ಉದ್ದೇಶದಿಂದ ಅಭಿಯಾನ ಹಮ್ಮಿಕೊಂಡಿದ್ದು, 50 ಪ್ರದೇಶಗಳಲ್ಲಿ 5 ಸಾವಿರ ಮಂದಿ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಸಂಗ್ರಹಿಸಲಿದ್ದಾರೆ ಎಂದರು. 

ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹ ಅಭಿಯಾನಕ್ಕೆ ಗೋ ನೇಟಿವ್‌, ಯುನೈಟೆಡ್‌ ವೇ ಬೆಂಗಳೂರು, ನಮ್ಮ ನಿಮ್ಮ ಸೈಕಲ್‌ ಫೌಂಡೇಷನ್‌, ಲೆಟ್ಸ್‌ ಬಿ ದಿ ಚೇಂಜ್‌ ಸೇರಿದಂತೆ ಹಲವಾರು ಸಂಸ್ಥೆಗಳು ಕೈಜೋಡಿಸಿದ್ದು, 10 ಸಾವಿರಕ್ಕೂ ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ. ಪ್ರಮುಖವಾಗಿ ವಾಯುವಿಹಾರ, ಜಾಗಿಂಗ್‌ಗೆ ಬರುವವರು ಸಹ ಅಭಿಯಾನದಲ್ಲಿ ಭಾಗಿಯಾಗಲಿದ್ದು, ಈ ಅಭಿಯಾನ ಗಿನ್ನಿಸ್‌ ಬುಕ್‌ ಆಫ್ ರೆಕಾರ್ಡ್‌ಗೆ ಸೇರುವ ಸಾಧ್ಯತೆಯಿದೆ ಎಂದು ಹೇಳಿದರು.

ನಾಗರಿಕರು ಪ್ಲಾಸ್ಟಿಕ್‌ ಬಳಕೆ ಮಾಡಲೇಬಾರದು ಎಂಬುದು ಪಾಲಿಕೆ ಉದ್ದೇಶ. ಆ ನಿಟ್ಟಿನಲ್ಲಿ ಈಗಾಗಲೇ ಪಾಲಿಕೆ
ವ್ಯಾಪ್ತಿಯಲ್ಲಿನ ಪ್ಲಾಸ್ಟಿಕ್‌ ಉತ್ಪಾದನಾ ಘಟಕಗಳನ್ನು ಮುಚ್ಚಲು ಹಾಗೂ ಕಲ್ಯಾಣ ಮಂಟಪ, ಮದುವೆ, ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್‌ ವಸ್ತು ಬಳಸದಂತೆ ಆದೇಶ ಹೊರಡಿಸಲಾಗಿದೆ ಎಂದು ಮಂಜುನಾಥ ಪ್ರಸಾದ್‌ ಮಾಹಿತಿ ನೀಡಿದರು.

ನಮ್ಮ ನಿಮ್ಮ ಸೈಕಲ್‌ ಫೌಂಡೇಷನ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುರಳಿ ಮಾತನಾಡಿ, ನಗರದಲ್ಲಿ
ಪ್ಲಾಸ್ಟಿಕ್‌ ಕವರ್‌ ಬಳಕೆ ಸಂಪೂರ್ಣ ನಿಷೇಧವಾಗಿಬೇಕು. ಬಟ್ಟೆ ಬ್ಯಾಗ್‌ ಹಾಗೂ ವಸ್ತುಗಳನ್ನು ಬಳಸಲು ಸಾರ್ವಜನಿಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಭಿಯಾನ ಹಮ್ಮಿಕೊಂಡಿದ್ದು, ಪ್ಲಾಸ್ಟಿಕ್‌ ಉತ್ಪನ್ನಗಳಿಂದಲೇ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿ ಪರಿಗಣಮಿಸಿದೆ ಎಂದರು.

Advertisement

ಜಾಗೃತಿ ಓಟದಲ್ಲಿ ನಗರದ ವಿವಿಧ ಸ್ವಯಂ ಸೇವಕ ಸಂಘಟನೆಯ ಕಾರ್ಯಕರ್ತರು, 20ಕ್ಕೂ ಹೆಚ್ಚು ಶಾಲೆ, ಕಾಲೇಜು ವಿದ್ಯಾರ್ಥಿಗಳು, ಸೇನೆ ಹಾಗೂ ಅರೆ ಸೇನಾ ಪಡೆಗಳು ಭಾಗವಹಿಸಲಿವೆ. ಅಭಿಯಾನದಲ್ಲಿ ಭಾಗವಹಿಸಲು
ಇಚ್ಚಿಸುವವರು www.bangaluru.plog.run ವೆಬ್‌ಸೈಟ್‌ ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.

ಅಂತಹವರಿಗೆ ಗ್ಲೌಸ್‌, ಮಾಸ್ಕ್ ಹಗೂ ಏಪ್ರನ್‌ ನೀಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ
ಲೆಟ್ಸ್‌ ಬಿ ದಿ ಚೇಂಜ್‌ನ ಅನಿರುಧ್‌, ಗೋ ನೇಟಿವ್‌ ಸಂಸ್ಥೆ ಮುಖ್ಯಸ್ಥ ಪ್ರಶಾಂತ್‌ ಪ್ರಕಾಶ್‌, ಸಲಹೆಗಾರ ರಾಮಕೃಷ್ಣ
ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next