Advertisement

ಎನ್ ಪಿ ಎಸ್ ನೌಕರರ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯಾಧ್ಯಕ್ಷ ಷಡಕ್ಷರಿ ವಿಫಲ: ಒಕ್ಕೂಟ ಆರೋಪ

09:02 PM Oct 24, 2021 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿಯವರು ತಾವು ಮೊದಲು ನೀಡಿದ ಭರವಸೆಯಂತೆ ಎನ್ ಪಿ ಎಸ್ ನೌಕರರ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಬದ್ಧತೆ ತೋರಿಸುತ್ತಿಲ್ಲ ಎಂದು ಕರ್ನಾಟಕ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ನಟರಾಜ್ ಹೇಳಿದ್ದಾರೆ.

Advertisement

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ಷಡಕ್ಷರಿಯವರು ನೀಡಿದ ಭರವಸೆಯಂತೆ ಎನ್ ಪಿ ಎಸ್ ನೌಕರರ ಸಮಸ್ಯೆ ಬಗ್ಗೆ ಇದುವರೆಗೂ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಲಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಆಪ್ತ ಸಹಾಯಕರಾಗಿ ಕೆಲಸ ನಿರ್ವಹಿಸಿರುವ ಇವರು ಒಂದು ದಿನ ಕೂಡ ಅವರ ಎನ್ ಪಿ ಎಸ್ ನೌಕರರ ಸಮಸ್ಯೆ ಚರ್ಚೆ ನಡೆಸಲಿಲ್ಲ. ಒಂದೆರಡು ಸಣ್ಣ ಪುಟ್ಟ ಯೋಜನೆ ಅನುಷ್ಢಾನಗೊಳಿಸಿದ್ದು ಬಿಟ್ಟರೆ ಬೇರೆ ಕೆಲಸ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದರು.

ಎನ್ ಪಿ ಎಸ್ ನೌಕರರ ಸಮಸ್ಯೆ ಮತ್ತು ಕೇಂದ್ರ ಸರ್ಕಾರದ ನೌಕರರಂತೆ ರಾಜ್ಯ ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಭೂಕುಸಿತ ಪತ್ತೆಗೆ ಹೊಸ ಸ್ವದೇಶಿ ತಂತ್ರಜ್ಞಾನ ಸಿದ್ಧ: ಐಐಟಿ ಮಂಡಿ ರೂಪಿಸಿರುವ ತಂತ್ರಜ್ಞಾನ

ಡಿಸೆಂಬರ್ 11, 12, ಎನ್.ಪಿ.ಎಸ್ ರದ್ದತಿ, ಸಮಾನ ವೇತನ, ನಿವೃತ್ತಿ ನಂತರದ ಸಮಸ್ಯೆಗಳ ನಿವಾರಣೆ ಕುರಿತು ಚರ್ಚೆ ನಡೆಸಲು ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರಕ್ಕೆ ದೇಶದ ವಿವಿಧ ಭಾಗಗಳಿಂದ 200 ನೌಕರರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Advertisement

ಒಕ್ಕೂಟದ ಮಾಜಿ ಅಧ್ಯಕ್ಷ ಮಠಪತಿ ಮಾತನಾಡಿ,  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಅಂತರಿಕವಾಗಿ ಬಿನ್ನಭಿಪ್ರಾಯಗಳು ಇರುವುದು ನಿಜ. ರಾಜ್ಯಾಧ್ಯಕ್ಷರಾಗಿರುವ ಷಡಕ್ಷರಿಯವರಿಗೆ ಯಾವುದೇ ವಿಚಾರ ಕೇಳಿಸಿಕೊಳ್ಳುವ ಸಂಯಮತೆ ಇಲ್ಲವಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next