ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಶನಿವಾರ ಅತಿ ಹೆಚ್ಚು 2.42 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ರಾಜ್ಯದಲ್ಲಿ ಸುಮಾರು ಒಂದೂವರೆ ವರ್ಷದ ನಂತರ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಈ ಗರಿಷ್ಠ ಪ್ರಮಾಣದ ಪ್ರಯಾಣಿಕರ ಸಂಖ್ಯೆ ದಾಖಲಾಗಿದೆ!
ಕೊರೊನಾ ಹಾವಳಿ ಹಾಗೂ ಅದರಿಂದಜಾರಿಯಾದ ಲಾಕ್‌ಡೌನ್‌ನಿಂದ ಪ್ರಯಾಣಿಕರ ಸಂಖ್ಯೆಬಹುತೇಕ ಇಳಿಮುಖವಾಗಿತ್ತು. ಎರಡು ಲಕ್ಷ ಕೂಡ ತಲುಪಿರಲಿಲ್ಲ. ಈಚೆಗೆ ಎರಡು ವಿಸ್ತರಿಸಿದ ಮಾರ್ಗಗಳಸೇರ್ಪಡೆ ನಂತರ ಕೊಂಚ ಏರಿಕೆ ಕಂಡುಬಂದಿತ್ತು. ಈಮಧ್ಯೆ ಸೋಂಕಿನ ಹಾವಳಿ ತಗ್ಗಿದ್ದು, ಬೆನ್ನಲ್ಲೇ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಸೇವೆಯ ಅವಧಿ ವಿಸ್ತರಿಸಿತ್ತು.
ಪರಿಣಾಮಪ್ರಯಾಣಿಕರ ಸಂಖ್ಯೆ 2.42 ಲಕ್ಷ ದಾಟಿದ್ದು, ಸುಮಾರು44 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.2020ರ ಮಾರ್ಚ್‌ನಲ್ಲಿ ಬೆಂಗಳೂರು ಸೇರಿದಂತೆರಾಜ್ಯದಲ್ಲಿ ಮೊದಲ ಲಾಕ್‌ಡೌನ್ ಜಾರಿಯಾಗಿತ್ತು.ಇದಾದ ನಂತರ 2020ರ ಸೆಪ್ಟೆಂಬರ್‌ನಿಂದ 7ರಿಂದಪುನಾರಂಭಗೊಂಡಿತ್ತು. ಆದರೆ, ಒಟ್ಟಾರೆ ಆಸನಗಳಸಾಮರ್ಥ್ಯದ ಶೇ. 50ರಷ್ಟು ಪ್ರಯಾಣಿಕರಿಗೆಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇನ್ನೇನು ಸಹಜಸ್ಥಿತಿಗೆ ಬರುವಷ್ಟರಲ್ಲಿ ಮತ್ತೆ 2021ರ ಏಪ್ರಿಲ್27ರಿಂದ ಲಾಕ್‌ಡೌನ್ ಜಾರಿಯಾಯಿತು.
ಹಾಗಾಗಿ, ಸಮೂಹ ಸಾರಿಗೆ ಸ್ಥಗಿತಗೊಂಡಿತು.ದೀರ್ಘಾವಧಿ ಬಳಿಕ ಜೂನ್ 21ಕ್ಕೆ “ನಮ್ಮಮೆಟ್ರೋ’ ಮತ್ತೆ ಹಳಿಗೆ ಬಂದಿತು. ತಿಂಗಳಅಂತರದಲ್ಲಿ ಅಂದರೆ ಜುಲೈ ಮೊದಲ ವಾರದಲ್ಲೇಒಟ್ಟು ಆಸನಗಳ ಸಾಮರ್ಥ್ಯದ ಶೇ. 100ರಷ್ಟುಪ್ರಯಾಣಿಕರನ್ನು ಹೊತ್ತೂಯ್ಯಲು ಕೂಡಅನುಮತಿ ದೊರೆಯಿತು.
ಇದರಿಂದ ಬಿಎಂಆರ್‌ಸಿಎಲ್‌ಗೆ ಹಾಗೂ ಪ್ರಯಾಣಿಕರಿಗೆ ನಿಟ್ಟುಸಿರುಬಿಡುವಂತಾಯಿತು.ಹೀಗೆ ಒಟ್ಟು ಆಸನಗಳ ಸಾಮರ್ಥ್ಯದ ಶೇ.100ರಷ್ಟು ಪ್ರಯಾಣಿಕರೊಂದಿಗೆ ಕಾರ್ಯಾಚರಣೆಶುರುವಾದಾಗಿನಿಂದ ಸರಾಸರಿ 1.80 ಲಕ್ಷಆಸುಪಾಸು ಪ್ರಯಾಣಿಕರು ಸಂಚರಿಸುತ್ತಿದ್ದರು.ಇದರಿಂದ 35-40 ಲಕ್ಷ ಆದಾಯ ಬರುತ್ತಿತ್ತು.ಹಸಿರು ಮಾರ್ಗದಲ್ಲಿ ಯಲಚೇನಹಳ್ಳಿ- ರಾಷ್ಟ್ರೀಯರೇಷ್ಮೆ ಸಂಸ್ಥೆ ಹಾಗೂ ನೇರಳೆ ಮಾರ್ಗದಲ್ಲಿ ಮೈಸೂರುರಸ್ತೆ- ಕೆಂಗೇರಿವರೆಗೆ ವಿಸ್ತರಣೆಯಾದ ನಂತರಪ್ರಯಾಣಿಕರ ಸಂಖ್ಯೆ ಎರಡು ಲಕ್ಷದ ಗಡಿ ದಾಟಿದ್ದು,ಆದಾಯ ಪ್ರಮಾಣ ಅಂದಾಜು 45-50 ಲಕ್ಷ ರೂ.ತಲುಪಿದೆ.
ಈ ಮಧ್ಯೆ ಎರಡೂವರೆ ತಾಸು ಸೇವೆಅವಧಿ ವಿಸ್ತರಿಸಿದ್ದರಿಂದ ವಾರಾಂತ್ಯದ ನಡುವೆಯೂನಿತ್ಯ 2.30-2.40 ಲಕ್ಷ ಪ್ರಯಾಣಿಕರು ಸಂಚರಿಸಿದ್ದು,ಆದಾಯ 55-57 ಲಕ್ಷ ರೂ. ಬರುತ್ತಿದೆ ಎಂದುಹೆಸರು ಹೇಳಲಿಚ್ಛಿಸದ ನಿಗಮದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ವಿಜಯಕುಮಾರ್ ಚಂದರಗಿ