Advertisement
ಅಷ್ಟೇ ಅಲ್ಲ, ಈ ಮೆಗಾ ಯೋಜನೆಗಳಸ್ಥಿತಿಗತಿಯನ್ನು “ಸಿಎಂ ಡ್ಯಾಶ್ ಬೋರ್ಡ್’ನಲ್ಲಿ ಕೂಡಕಾಣಬಹುದು. ಸ್ವತಃ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಈ ವಿಷಯ ತಿಳಿಸಿದ್ದಾರೆ.ನಗರದ ಕೆಂಗೇರಿ ಬಸ್ ಟರ್ಮಿನಲ್‌ನಲ್ಲಿಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹಮ್ಮಿಕೊಂಡಿದ್ದ “ನಮ್ಮ ಮೆಟ್ರೋ’ ಎರಡನೇಹಂತದ ವಿಸ್ತರಿತ ಮೈಸೂರು ರಸ್ತೆ- ಕೆಂಗೇರಿ ನಡುವಿನಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.”ಮೆಟ್ರೋ ಸೇರಿದಂತೆ ನಗರದಾದ್ಯಂತ ನಡೆಯುವವಿವಿಧ ಮೆಗಾ ಯೋಜನೆಗಳನ್ನು ನಾನು ಪ್ರತಿದಿನಮೇಲುಸ್ತುವಾರಿ ನಡೆಸಲಿದ್ದೇನೆ.
Related Articles
Advertisement
ಈಗಾಗಲೇ ಗುರುತಿಸಿರುವ 12ಅತ್ಯಧಿಕ ಜನದಟ್ಟಣೆ ಕಾರಿಡಾರ್‌ಗಳನ್ನು ಗುರುತಿಸಿದ್ದು, ಅವುಗಳನ್ನು ಪ್ರಸಕ್ತ ಸಾಲಿನಲ್ಲೇ ಅಗತ್ಯ ಮೂಲಸೌಕರ್ಯ ಒದಗಿಸಿ ಸಿದ್ಧಪಡಿಸುವ ಗುರಿಇದೆ ಎಂದ ಅವರು, ಎರಡು ಮತ್ತು ಮೂರನೇ ಹಂತದನಗರಗಳಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿಅಲ್ಲೆಲ್ಲ ಹೊಸ ನಗರ ಕೇಂದ್ರಗಳನ್ನು ಸ್ಥಾಪಿಸಲುಉದ್ದೇಶಿಸಲಾಗಿದೆ ಎಂದು ಹೇಳಿದರು.
ಹೊಸಕೋಟೆ-ತಾವರೆಕೆರೆವರೆಗೆ ವಿಸ್ತರಿಸಿ
ಬೆಂಗಳೂರು: ನಗರದಿಂದ ಹೊಸಕೋಟೆ ದೇಶ ಒಂದುಕಾರ್ಡ್‌ಹಾಗೂ ತಾವರೆಕೆರೆವರೆಗೆ ಮೆಟ್ರೋ ವಿಸ್ತರಿಸುವಹೊಸ ಪ್ರಸ್ತಾವನೆಗಳನ್ನು ಸಚಿವರಿಬ್ಬರುಸರ್ಕಾರದ ಮುಂದಿಟ್ಟಿದ್ದಾರೆ.ಸಚಿವ ಎಂಟಿಬಿ ನಾಗರಾಜ್ ಅವರು,ನಗರದಿಂದ ಹೊಸಕೋಟೆ ಪಟ್ಟಣಕ್ಕೆ ಮೆಟ್ರೋರೈಲು ಸಂಚಾರ ವಿಸ್ತರಿಸುವಂತೆ ಕೇಂದ್ರ ಸಚಿವ ಹರ್ದೀಪ್‌ಸಿಂಗ್ ಪುರಿಗೆ ಮನವಿ ಮಾಡಿ ದರೆ,ಮತ್ತೂಬ್ಬ ಸಚಿವ ಎಸ್.ಟಿ.ಸೋಮಶೇಖರ್‌ತಾವರೆಕೆರೆವರೆಗೂ ವಿಸ್ತರಿಸುವಂತೆ ತಮ್ಮಭಾಷಣದಲ್ಲಿ ಮನವಿ ಮಾಡಿದರು.
ಹೊಸಕೋಟೆ ಪಟ್ಟಣಬೆಂಗಳೂರು ಹೊರವಲಯದಲ್ಲಿ ಅಂದರೆ ಬಿಬಿಎಂಪಿ ವ್ಯಾಪ್ತಿಯಿಂದ 10ಕಿ.ಮೀ.ದೂರದಲ್ಲಿದೆಅಷ್ಟೇ.ಭಾರತದಸಿಲಿಕಾನ್‌ವ್ಯಾಲಿವೈಟ್‌ಫೀಲ್ಡ…ಐಟಿಪಾರ್ಕ್‌ಗೆಹೊಸಕೋಟೆಪಟ್ಟಣ ತೀರ ಹತ್ತಿರದಲ್ಲಿದೆ. ವೈಟ್‌ಫೀಲ್ಡ… ಸುತ್ತನೂರಾರು ಐಟಿ ಕಂಪನಿಗಳು ಬೀಡುಬಿಟ್ಟಿವೆ.ವಾಣಿಜ್ಯ ಕಟ್ಟಡಗಳು, ಬೃಹತ್ ಕಟ್ಟಡಗಳೂಇದ್ದು, ಲಕ್ಷಾಂತರ ಅಪಾರ್ಟ್‌ಮೆಂಟ್‌ಗಳು ಇವೆ.
ಪರಿಣಾಮ ಹೊಸಕೋಟೆ ಪಟ್ಟಣದ ಸುತ್ತ ತೀವ್ರಸಂಚಾರದ ಒತ್ತಡ ನಿರ್ಮಾ ಣವಾಗಿದೆ. ಈಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಲು ಮೆಟ್ರೋರೈಲು ಸಂಚಾರ ಕಲ್ಪಿಸಿದರೆ, ರಸ್ತೆ ಮಾರ್ಗದಮೇಲಿನ ಒತ್ತಡ ತಗ್ಗಿಸಬಹುದು ಎಂದು ಎಂಟಿಬಿಮನವಿ ಮಾಡಿದರು
ನಮ್ಮ ಮೆಟ್ರೋದಲ್ಲಿ ಕನ್ನಡವಿಲ್ಲ!
ಬೆಂಗಳೂರು: ಅದು ಹೆಸರಿಗೆ “ನಮ್ಮ ಮೆಟ್ರೋ’. ಆದರೆ, ಅಲ್ಲಿ ನಮ್ಮಕನ್ನಡಕ್ಕೇ ಸ್ಥಾನ ಇರಲಿಲ್ಲ! ಕೆಂಗೇರಿ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮೆಟ್ರೋ ವಿಸ್ತರಿತ ಮಾರ್ಗದ ಪೂರ್ಣ ವಿವರ ಹಾಗೂ ಉದ್ಘಾಟಿಸುವಗಣ್ಯರ ಹೆಸರು ಎದ್ದುಕಾಣುತ್ತಿತ್ತು. ಆದರೆ, ಎಲ್ಲವೂ ಇಂಗ್ಲಿಷ್‌ಮಾಯವಾಗಿತ್ತು.ಕೇಂದ್ರ ಸರ್ಕಾರದ ಪ್ರತಿನಿಧಿಗಳು ಭಾಗವಹಿಸುವ ಕಾರ್ಯ ಕ್ರಮ ಗಳಲ್ಲಿ ಪದೇ ಪದೆಕನ್ನಡವನ್ನು ಕಡೆಗಣಿಸಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಹೇರ ಲಾಗುತ್ತಿದೆ. ಈಗಮುಂದುವರಿದು ಬಿಎಂಆರ್‌ಸಿಎಲ್ ಕೂಡ ಕನ್ನಡವನ್ನು ಕಡೆಗಣಿಸುತ್ತಿದೆ ಎಂದು ಕನ್ನಡಪರಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.
“ದೊಡ್ಡ ಸಮಾರಂ ಭಗಳಲ್ಲಿ ಕೆಲವು ತಪ್ಪುಗಳು ಆಗುವುದುಸಹಜ. ಆದರೆ, ಕನ್ನಡ ಕಾಣದಿರುವುದು ಉದ್ದೇಶ ಪೂರ್ವಕವಾಗಿ ನಡೆದ ತಪ್ಪಲ್ಲ. ಮುಂದೆಹೀಗಾಗದಂತೆ ಸರಿಪಡಿಸಲಾಗುವುದು’ ಎಂದು ಅಂಜುಂ ಪರ್ವೇಜ್ ಸಮಜಾಯಿಷಿ ನೀಡಿದರು.