Advertisement

ಬೇರೆ ಪಕ್ಕದ ವಿಚಾರ ಮಾತನಾಡಲ್ಲ: ಖರ್ಗೆ

05:55 PM Jul 26, 2021 | Team Udayavani |

ದೇವನಹಳ್ಳಿ: ಬಿಜೆಪಿ ಪಕ್ಷದಲ್ಲಿ ದಲಿತರನ್ನುಮುಖ್ಯಮಂತ್ರಿ ಮಾಡುವುದು ಅವರಿಗೆ ಬಿಟ್ಟವಿಚಾರ. ಬೇರೆ ಪಕ್ಷಕ್ಕೆ ಸಂಬಂಧಿಸಿದಂತೆ ನಾನುಮಾತನಾಡುವುದಿಲ್ಲ. ದಲಿತರಿಗೆ ಮುಖ್ಯಮಂತ್ರಿಸ್ಥಾನ ಕೊಡಿ ಎಂದು ಅವರ ಬಳಿ ಭಿಕ್ಷೆ ಬೇಡಲ್ಲ.ಯಾರನ್ನು ತೆಗೆಯಬೇಕು, ಯಾರಿಗೆ ಕೊಡಬೇಕು,ಎನ್ನುವುದನ್ನು ಅವರ ಪಕ್ಷ ಮಾಡಿಕೊಳ್ಳಲಿ. ರಾಜ್ಯದಲ್ಲಿನ ಜನರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನಖರ್ಗೆ ಹೇಳಿದರು.

Advertisement

ತಾಲೂಕಿ ನ ಕೆಂಪೇಗೌಡ ಅಂತಾರಾಷ್ಟ್ರೀಯವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆಮಾತನಾಡಿ, ಧರ್ಮ ಬೇರೆ, ರಾಜಕೀಯವೇಬೇರೆ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಎಲ್ಲಾ ಧರ್ಮದವರು ಇರುತ್ತಾರೆ. ಮಠಾಧೀಶರು ಈವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಮಠಾಧೀಶರು ರಾಜಕಾರಣಕ್ಕೆ ಪ್ರವೇಶಿಸಬಾರದು, ರಾಜಕೀಯಕ್ಕೆ ಧರ್ಮದ ಲೇಪನವಾಗಬಾರದು.ಇದು ಅಪಾಯಕರವಾದ ಬೆಳವಣಿಗೆಯಾಗಲಿದೆ.ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಹೀಗೆ ಎಲ್ಲಾ ಪಕ್ಷಗಳಲ್ಲಿ ಎಲ್ಲಾ ಧರ್ಮಗಳ ಜನರೂ ಇದ್ದಾರೆ.ಮಠಾಧೀಶರು ಒಂದು ಧರ್ಮದ ಪರವಾಗಿನಿಲ್ಲಬಾರದು ಎಂದರು.

ಭರವಸೆ ಸುಳ್ಳು: ಪ್ರಧಾನಿ ಮೋದಿ ಚುನಾವಣೆಗೆಮುನ್ನ ಜನರಿಗೆ ನೀಡಿದ್ದ ಭರವಸೆ ಸುಳ್ಳಾಗಿದ್ದು,ಈಗ ಜನರಿಗೆ ಮೋದಿಯವರಿಂದ ಸಂಕಷ್ಟದದಿನಗಳು ಮಾತ್ರ ಇವೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳು ಜನವಿರೋಧಿ ಆಡಳಿತ ನಡೆಸುತ್ತಿವೆ. ಕೊರೊನಾ ಸಂಕಷ್ಟ ಕಾಲದಲ್ಲಿ ಪೆಟ್ರೋಲ್‌,ಡೀಸೆಲ್‌ ಬೆಲೆ ಏರಿಕೆಯಾಗಿದೆ.

ಪೆಟ್ರೋಲ್‌ 105ಗಡಿ ದಾಟಿದೆ. ಗ್ಯಾಸ್‌ ಈ ಹಿಂದೆ 400ರಿಂದ 500ಇದ್ದ ಗ್ಯಾಸ್‌ ಸಿಲಿಂಡರ್‌ಗಳು 900ರ ಆಸುಪಾಸಿಗೆತಂದಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ಬಿಜೆಪಿಸರ್ಕಾರ ವಿಫ‌ಲವಾಗಿದೆ. ಪ್ರಧಾನಿ ಮೋದಿಅಧಿಕಾರಕ್ಕೆ ಬಂದ ಮೇಲೆ ಬಡತನ, ನಿರುದ್ಯೋಗಹೆಚ್ಚಾಗಿದೆ. ಪ್ರಧಾನಿಯಾಗಿದ್ದ ಡಾ.ಮನಮೋಹನ್‌ ಸಿಂಗ್‌ ಉತ್ತಮ ಆಡಳಿತ ನೀಡಿದ್ದಾರೆಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next