ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ಕೊರೊನಾ ಪಾಸಿಟಿವಿಟಿ ದರಶೇ.13.5 ಇತ್ತು.ಈಬಾರಿ ಶೇ.1.6ರಷ್ಟಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಿಂದಿನ ವರ್ಷಕ್ಕಿಂತಲ್ಲೂ ಪರೀಕ್ಷಾಕೇಂದ್ರಗಳು, ಸಿಬ್ಬಂದಿಗಳನ್ನು ಹೆಚ್ಚು ಮಾಡಲಾಗಿದೆ.ಇದು ಕೇವಲ ಪರೀಕ್ಷಾ ಕೇಂದ್ರ ಮಾತ್ರವಲ್ಲದೇ ಮಕ್ಕಳಸುರಕ್ಷತಾ ಕೇಂದ್ರವಾಗಿದೆ. ಪರೀಕ್ಷೆಗಳು ಯಶಸ್ವಿಯಾಗಿನಡೆಯುವ ವಿಶ್ವಾಸವಿದೆಎಂದುಪ್ರಾಥಮಿಕ, ಪ್ರೌಢಶಿಕ್ಷಣಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.
ಜು.19 ಹಾಗೂ 22ರಂದು ನಡೆಯುವ2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಪರೀûಾ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲನೆನಡೆಸಿದಅವರುಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಒಟ್ಟು 14,929ಕೇಂದ್ರಗಳಲ್ಲಿ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆಹಾಜರಾಗಲಿದ್ದಾರೆ.
ಕಳೆದ ಸಾಲಿಗಿಂತಈಬಾರಿಪರೀûಾಕೇಂದ್ರಗಳು, ಕೊಠಡಿಗಳ ಸಂಖ್ಯೆ ಹೆಚ್ಚಿಸಲಾಗಿದೆ. ಕಳೆದವರ್ಷ 79 ಸಾವಿರ ಸಿಬ್ಬಂದಿಗಳಿದ್ದು,ಈಬಾರಿ 1.19 ಲಕ್ಷಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಎಲ್ಲಾ ಶಾಸಕರು,ಸಂಘ- ಸಂಸ್ಥೆಗಳು ಪರೀಕ್ಷೆಗಳ ಬಗ್ಗೆ ಆಸಕ್ತಿವಹಿಸಿರುವುದು ಸಂತಸದ ಸಂಗತಿ. ಎಲ್ಲಾ ಶಾಲೆಯವಿಧ್ಯಾರ್ಥಿಗಳ ಪ್ರವೇಶ ಪತ್ರಗಳು ಡೌನ್‌ಲೋಡ್‌ಆಗಿದ್ದು,ಇತರೆ ಸಮಸ್ಯೆಗಳುಏನಾದರುಕಂಡುಬಂದರೆಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿಬಗೆಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಶಾಲೆ ಆರಂಭಕ್ಕೆ ಕಾರ್ಯಪಡೆ ರಚನೆ: ರಾಜ್ಯದಲ್ಲಿ ಭೌತಿಕಶಾಲೆಗಳನ್ನು ಆರಂಭಿಸುವ ಕುರಿತು ಶಿಕ್ಷಣ ಇಲಾಖೆಆಯುಕ್ತರ ನೇತೃತ್ವದಲ್ಲಿ ತಜ್ಞರು, ಪೋಷಕರಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆ ರಚಿಸಿ,ಪೂರ್ವಭಾವಿ ಸಭೆ ನಡೆಸಲಾಗಿದೆ. ಸಮಿತಿಯಲ್ಲಿಖಾಸಗಿ ಶಾಲೆಗಳನ್ನು ಸೇರಿಸಿಕೊಳ್ಳಲಾಗಿದೆ. ಇನ್ನುಒಂದು ವಾರದಲ್ಲಿ ವರದಿ ಕೈ ಸೇರಲಿದೆ. ಇದರೊಂದಿಗೆಆರೋಗ್ಯ ಇಲಾಖೆ ಸಹಮತ ಪಡೆಯಲಾಗುವುದು.ಶಾಲೆಗಳನ್ನು ಯಾವಾಗ ಯಾವ ರೀತಿ ಆರಂಭಿಸಬೇಕು.ಶಾರೀರಿಕ ಅಂತರ ಕಾಪಾಡಿಕೊಳ್ಳುವುದು, ಪಾಳಿಗಳಲ್ಲಿಶಾಲೆಗಳನ್ನು ನಡೆಸುವ ಕುರಿತು ತಜ್ಞರೊಂದಿಗೆ ಚರ್ಚೆನಡೆಸಿ, ಅಕ್ಟೋಬರ್ ಮೊದಲ ವಾರದಲ್ಲಿ ನಿರ್ಧಾರಪ್ರಕಟಿಸಲಾಗುವುದು ಎಂದು ತಿಳಿಸಿದರು.