ಬೆಂಗಳೂರು:ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಜೆಡಿಎಸ್ ಮುಂದಾಗಿದ್ದು, ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರವಾರು ಮುಖಂಡರ ಸಭೆ ನಡೆಸಲು ತೀರ್ಮಾನಿಸಿದೆ.
ಬುಧವಾರ ಜೆಪಿ ಭವನದಲ್ಲಿ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು, ಮುಖಂಡರ ಜತೆ ಸಮಾಲೋಚನೆ ನಡೆಸಿದರು.
ಕೊರೊನಾ ಹಿನ್ನೆಲೆಯಲ್ಲಿ 4 ತಿಂಗಳಿನಿಂದ ಪಕ್ಷದ ಕಚೇರಿಗೆಬರಲು ಆಗಿರಲಿಲ್ಲ. ಪಕ್ಷ ಸಂಘಟನೆ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ನಿರಂತರ ಸಭೆ ನಡೆಸಿ ತಾಲೂಕುಮಟ್ಟದಿಂದ ರಾಜ್ಯ ಮಟ್ಟದವರೆಗೆ ಪದಾಧಿಕಾರಿಗಳ ನೇಮಕ,ಸದಸ್ಯತ್ವ ಅಭಿಯಾನ, ಕೇಂದ್ರ ಹಾಗೂ ರಾಜ್ಯ ಸರ್ಕಾರದವೈಫಲ್ಯಗಳ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್.ಡಿ.ದೇವೇಗೌಡರು ತಿಳಿಸಿದರು.
ಸಭೆಯ ನಂತರ ಸುದ್ದಿಗಾರರು ಸುಮಲತಾಹಾಗೂಎಚ್.ಡಿ.ಕುಮಾರಸ್ವಾಮಿ ನಡುವಿನಮಾತಿನಸಮರ ಕುರಿತು ಕೇಳಿದಾಗ, ನನಗೆ ಎಲ್ಲ ವಿಷಯಗೊತ್ತಿದೆ. ಆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ.
ಮಧ್ಯಪ್ರವೇಶಿಸುವುದೂ ಇಲ್ಲ. ಇಡೀ ಮಂಡ್ಯ 2023 ಹಾಗು2024 ಕ್ಕೆ ಏನಾಗಲಿದೆ, ಮುಂದೆ ಕರ್ನಾಟಕದಲ್ಲಿ ಏನಾಗಲಿದೆಎಂಬುದು ನಾನು ಇಲ್ಲಿ ಕುಳಿತು ಹೇಳಲು ಸಾಧ್ಯವಿಲ್ಲ ಎಂದುತಿಳಿಸಿದರು. ಪ್ರಜ್ವಲ್ ನೋಡಿ ಕಲಿಯಿರಿ ಎಂಬ ಮಾತಿಗೆ ಸಿಟ್ಟಾದಅವರು, ಸುಮಲತಾ ಜ್ಯೋತಿಷಿಯೇ, ಆಯಮ್ಮನ ಬಗ್ಗೆ ನನ್ನ ಬಳಿಯಾಕೆ ಮಾತನಾಡುತ್ತೀರಿ ಎಂದು ನಿರ್ಗಮಿಸಿದರು.