ದೇವನಹಳ್ಳಿ: ಚುನಾವಣಾ ಆಯೋಗ ಜನಗಣತಿ ಆಧಾರದಮೇಲೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ 5 ಜಿಪಂ ಕ್ಷೇತ್ರದಯಾವುದಾದರೂ 1 ಜಿಪಂ ಕ್ಷೇತ್ರವನ್ನು ಅನುಸೂಚಿತ ಪಂಗಡ(ಎಸ್.ಟಿ) ನಿಗದಿಪಡಿಸಬೇಕು ಎಂದು ತಾಲೂಕು ಸೊಸೈಟಿ ನಿರ್ದೇಶಕ ಹಾಗೂ ತಾಲೂಕು ವಾಲ್ಮೀಕಿ ನಾಯಕ ಸಂಘದಅಧ್ಯಕ್ಷ ಡೇರಿ ನಾಗೇಶ್ ಬಾಬು ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದೇವನಹಳ್ಳಿ ವಿಧಾನಸಭಾಕ್ಷೇತ್ರದ ಜೆಡಿಎಸ್ ಎಸ್‌ಟಿ ವಿಭಾಗದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಪಂ 12 ಕ್ಷೇತ್ರಗಳ ಪೈಕಿ ಒಂದುಕ್ಷೇತ್ರವನ್ನು ನಿಗದಿಪಡಿಸಿದ್ದು, ಅದರಲ್ಲಿ ಪರಿಶಿಷ್ಟ ಪಂಗಡದಜನಗಣತಿ ಅನುಗುಣವಾಗಿ ಹೆಚ್ಚುವರಿಯಾಗಿ ಮತ್ತೂಂದುಕ್ಷೇತ್ರವನ್ನು ಎಸ್.ಟಿ.ಗೆ ಮಾಡಿ ಅಧಿಸೂಚನೆ ಹೊರಡಿಸಬೇಕು.
ಜಿಲ್ಲೆಯ 4 ತಾಲೂಕಿನಲ್ಲಿ ದೇವನಹಳ್ಳಿ ತಾಲೂಕು ವಿಧಾನಸಭಾವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡದ ಮತದಾರರು ಜನಗಣತಿಯಸಮೀಕ್ಷೆಯಂತೆ 28 ಸಾವಿರ ಮತದಾರರನ್ನು ಹೊಂದಿದೆ.ಹೊಸಕೋಟೆ ತಾಲೂಕಿನಲ್ಲಿ 7-8 ಸಾವಿರ ಜನಸಂಖ್ಯೆಹೊಂದಿದ್ದು, ಹೊಸಕೋಟೆ ಕ್ಷೇತ್ರಕ್ಕೆ ಎಸ್.ಟಿ. ಕ್ಷೇತ್ರವನ್ನುನೀಡಿದ್ದಾರೆ ಎಂದು ಹೇಳಿದರು.
ಅವೈಜ್ಞಾನಿಕ ಮೀಸಲಾತಿ: ರಾಜ್ಯ ಜೆಡಿಎಸ್ ಮುಖಂಡರವೀಂದ್ರ ಮಾತನಾಡಿ, ಚುನಾವಣಾ ಆಯೋಗ ಮತ್ತುಸರ್ಕಾರಗಳು ಅವೈಜ್ಞಾನಿಕವಾಗಿ ಮೀಸಲಾತಿ ಪ್ರಕಟಿಸಿದೆ.2001ರಲ್ಲಿಯೇ ದೇವನಹಳ್ಳಿ ತಾಲೂಕು 20 ಸಾವಿರಮತದಾರರನ್ನು ಪರಿಶಿಷ್ಟ ಪಂಗಡ ಹೊಂದಿತ್ತು ಎಂದರು.ಮೀಸಲಾತಿ ವಿರುದ್ಧ ಆಕ್ಷೇಪಣೆ: ತಾಲೂಕು ಜೆಡಿಎಸ್ ಎಸ್‌ಟಿವಿಭಾಗದ ಅಧ್ಯಕ್ಷ ಯರ್ತಿಗಾನಹಳ್ಳಿ ಶಿವಣ್ಣ ಮಾತನಾಡಿ, ಕಳೆದ3ಅವಧಿಯಲ್ಲಿ ತಾಲೂಕಿಗೆ ಎಸ್‌ಟಿ ಮೀಸಲಾತಿ ನೀಡಲಾಗಿತ್ತು.ಜಿಪಂಗೆ ಪರಿಶಿಷ್ಟ ಪಂಗಡಕ್ಕೆ ಒಂದು ಸ್ಥಾನವೂ ನಿಗದಿಪಡಿಸಿಲ್ಲ.
ಜಿಪಂ, ತಾಪಂ ಮೀಸಲಾತಿಗಳ ಬಗ್ಗೆ ಶಾಸಕರು ಧ್ವನಿಗೂಡಿಸಬೇಕು. ಚುನಾವಣಾ ಆಯೋಗಕ್ಕೆ ಮಾಡಿರುವ ಮೀಸಲಾತಿವಿರುದ್ಧ ಆಕ್ಷೇಪಣೆಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು. ಮಾಳಿಗೇನಹಳ್ಳಿ ಎಂಪಿಸಿಎಸ್ ಮಾಜಿ ಅಧ್ಯಕ್ಷ ವೆಂಕಟೇಶಮೂರ್ತಿ, ಮುಖಂಡರಾದ ರಾಮಣ್ಣ, ದಿನ್ನೆಸೋಲೂರು ಶ್ರೀನಿವಾಸ್,ವೆಂಕಟೇಶ್,ಕೃಷ್ಣಮೂರ್ತಿ,ವೀರಭದ್ರಪ್ಪ,ಚಂದ್ರಶೇಖರ್,ಚನ್ನಕೃಷ್ಣಪ್ಪ, ನರಸಿಂಹಮೂರ್ತಿ, ವೆಂಕಟೇಶ್ ಹಾಜರಿದ್ದರು.