Advertisement

ಜಿಲ್ಲೆಯಲ್ಲಿ 7.75 ಲಕ್ಷ ಸಸಿ ನೆಡುವ ಗುರಿ

05:32 PM Jun 05, 2021 | Team Udayavani |

ದೇವನಹಳ್ಳಿ: ಬೆಂ.ಗ್ರಾ ಜಿಲ್ಲೆಯಲ್ಲಿ ಪ್ರತಿ ವರ್ಷವೂಅರಣ್ಯ ಸಂಪತ್ತಿನ ಪ್ರಮಾಣ ಕಡಿಮೆಯಾಗುತ್ತಿದೆ.ಪ್ರತಿ ವರ್ಷ ಆಚರಿಸುವ ವಿಶ್ವ ಪರಿಸರದಿನಾಚರಣೆಯಂದು ಕೇವಲ ಒಂದೆರಡು ಸಸಿಗಳನ್ನುನೆಡುವ ಕಾರ್ಯಕ್ಕೆ ಸೀಮಿತವಾಗದೆ, ಪ್ರತಿ ಮನೆಯಮುಂಭಾಗ ಮರಗಿಡಗಳನ್ನು ಬೆಳೆಸಬೇಕಾಗಿದೆ.

Advertisement

ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ 7.75 ಲಕ್ಷ ಸಸಿನೆಡುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದೆ.ಜಿಲ್ಲೆಯಲ್ಲಿ 7.75 ಲಕ್ಷ ಸಸಿ ನೆಡುವ ಗುರಿಹೊಂದಿರುವ ಅರಣ್ಯ ಇಲಾಖೆ ಈಗಾಗಲೇ 4.70 ಲಕ್ಷಸಸಿಗಳನ್ನು ವಿವಿಧ ಸಂಘ-ಸಂಸ್ಥೆಗಳ ಮೂಲಕಸಂಗ್ರಹಿಸಿದೆ. ಅಲ್ಲದೆ, 3.6 ಲಕ್ಷ ಸಸಿಗಳನ್ನು ರೈತರಿಗೆರಿಯಾಯಿತಿ ಬೆಲೆಯನ್ನು ನೀಡಲಿದೆ.ನಡು ತೋಪು ನಿರ್ಮಾಣ: ದೊಡ್ಡಬಳ್ಳಾಪುರದಲ್ಲಿ6423.986 ಹೆಕ್ಟೇರ್‌, ದೇವನಹಳ್ಳಿಯಲ್ಲಿ 2382.214ಹೆಕ್ಟೇರ್‌, ನೆಲಮಂಗಲದಲ್ಲಿ 3201.75 ಹೆಕ್ಟೇರ್‌,ಹೊಸಕೋಟೆಯಲ್ಲಿ 2655.615 ಹೆಕ್ಟೇರ್‌ ಸೇರಿದಂತೆಒಟ್ಟು 14663.565 ಹೆಕ್ಟೇರ್‌ ಜಿಲ್ಲೆಯಲ್ಲಿ ಅರಣ್ಯಪ್ರದೇಶವಿದೆ. ಇದರಲ್ಲಿ ದೊಡ್ಡಬಳ್ಳಾಪುರ ಹೆಚ್ಚಿನಅರಣ್ಯ ಪ್ರದೇಶ ಹೊಂದಿದೆ.

ಜಿಲ್ಲೆಯ ವಿವಿಧೆಡೆ ಅರಣ್ಯ ವೃದ್ಧಿಗಾಗಿ ನಡುತೋಪು ಮಾಡಲಾಗುತ್ತಿದೆ. ದೊಡ್ಡಬಳ್ಳಾಪುರತಾಲೂಕಿನ ಆರೋಡಿ, ಘಾಟಿ ಸುಬ್ರಹ್ಮಣ್ಯ, ದೇವನಹಳ್ಳಿತಾಲೂಕಿನ ದಿಬ್ಬಗಿರಿ ಹಾಗೂ ಬಿ.ಎಸ್‌.ಕಾಲ್‌,ನೆಲಮಂಗಲ ತಾಲೂಕಿನಲ್ಲಿ ನಿಜಗಲ್‌, ಬೆಟ್‌ಹೊಸಹಳ್ಳಿ, ಕೃಷ್ಣರಾಜಪುರ, ಹೋಸಕೋಟೆ ತಾಲೂಕಿನಮುತ್ತಸಂದ್ರ ನಡು ತೋಪು ನಿರ್ಮಾಣವಾಗುತ್ತಿದೆ. ಜಿಲ್ಲೆಯಲ್ಲಿ ಶೇ.8.9ರಷ್ಟು ಅರಣ್ಯ ಪ್ರವೇಶವಿದೆ.

ಸಸಿ ರಕ್ಷಣೆ ಅನಿವಾರ್ಯ: ಪರಿಸರ ದಿನಾಚರಣೆಯಂದು ಸಸಿಗಳನ್ನು ನೆಟ್ಟರೆ ಸಾಲದು, ಅದನ್ನುಪೋಷಣೆ ಮಾಡಬೇಕಾಗಿದೆ. ಸಾಮಾಜಿಕ ಮತ್ತುಮೀಸಲು ಅರಣ್ಯ ವಿಭಾಗವು ಕಳೆದ ಹತ್ತಾರು ವರ್ಷದಿಂದ ಜಿಲ್ಲೆಯಲ್ಲಿ 7-8 ಲಕ್ಷ ವಿವಿಧ ಜಾತಿ ಸಸಿಗಳನ್ನುನೆಡುತ್ತಲ್ಲೇ ಬಂದಿದೆ. ಆದರೆ, ಬೆರಳೆಣಿಕೆಯ ಮರಗಳುಕಾಣುತ್ತಿಲ್ಲ. ಅರಣ್ಯ ಇಲಾಖೆಯಿಂದ ನೆಡುವ ಸಸಿಗಳಿಗೆಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರುಣಿಸಿ, ಸಂರಕ್ಷಣೆಮಾಡಬೇಕಾದ ಅನಿವಾರ್ಯವಿದೆ ಎಂಬ ಅಭಿಪ್ರಾಯಪರಿಸರ ಪ್ರೇಮಿಗಳಿಂದ ಕೇಳಿ ಬರುತ್ತಿದೆ.

ರಸ್ತೆ ಅಭಿವೃದ್ಧಿಗಾಗಿ ಮರಗಳ ನಾಶ: ದೇವನಹಳ್ಳಿಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಅರಣ್ಯಇಲಾಖೆಯಿಂದ ಸುಮಾರು 540 ಎಕರೆ ಜಾಗವನ್ನುವಶಪಡಿಸಿಕೊಳ್ಳಲಾಗಿತ್ತು. ಇದರ ಬದಲಿಗೆ ಕಾಡುಬೆಳೆಸಲು ದೊಡ್ಡಬಳ್ಳಾಪುರದ ಸಮೀಪ 540 ಎಕರೆಜಾಗವನ್ನು ಸರ್ಕಾರ ನೀಡಿದೆ. ಆದರೆ, ವಿಮಾನನಿಲ್ದಾಣ ಪ್ರಾರಂಭವಾದ ಮೇಲೆ ಭೂಮಿಗೆ ಹೆಚ್ಚಿನಬೆಲೆ ಬಂದಿದ್ದರಿಂದ ರಸ್ತೆ ಅಭಿವೃದ್ಧಿಗಾಗಿಬೆಂಗಳೂರು-ದೇವನಹಳ್ಳಿ ರಸ್ತೆಯಲ್ಲಿದ್ದ ಮರಗಳನ್ನುನಾಶ ಮಾಡಿದ್ದಾರೆ. ಲೇಔಟ್‌ ಮತ್ತು ಬಡಾವಣೆಗಳುಅಭಿವೃದ್ಧಿಯಾಗುತ್ತಿರುವುದರಿಂದ ಮರಗಳ ಸಂಖ್ಯೆಕಡಿಮೆಯಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆವಿವಿಧ ಯೋಜನೆಯಡಿ ರೈತರಿಗೆ ರಿಯಾಯಿತಿಬೆಲೆಯಲ್ಲಿ ವಿವಿಧ ತಳಿಯ ಸಸಿಗಳನ್ನು ನೀಡುತ್ತಿದೆ.

Advertisement

ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next