Advertisement

ಆಯುಕ್ತರಿಂದ ದೂರು ಸ್ವೀಕಾರ

07:44 PM Jun 27, 2021 | Team Udayavani |

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ವಾಹನ ಕಳವು ಪ್ರಕರಣಗಳ ಬಗ್ಗೆಕಠಿಣ ಕ್ರಮವಹಿಸುವುದಾಗಿ ಪೊಲೀಸ್‌ ಆಯುಕ್ತಕಮಲ್‌ ಪಂತ್‌ ತಿಳಿಸಿದ್ದಾರೆ.ಕೋವಿಡ್‌ ಹಿನ್ನೆಲೆಯಲ್ಲಿ ಟ್ವಿಟರ್‌ ಮೂಲಕ ಶನಿವಾರ ಬೆಳಗ್ಗೆ 11.30ರಿಂದಮಧ್ಯಾಹ್ನ1 ಗಂಟೆವರೆಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

Advertisement

ಈ ವೇಳೆಬಹುತೇಕ ದೂರುಗಳು ವಾಹನ ಕಳವು, ಸಂಚಾರ ದಟ್ಟಣೆ, ಪೊಲೀಸರದೌರ್ಜನ್ಯ, ಪಾರ್ಕಿಂಗ್‌ ಬಗ್ಗೆಯೇ ಬಂದಿದ್ದವು.ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ರಾತ್ರಿವೇಳೆ ಮನೆ ಮುಂದೆ ನಿಲ್ಲಿಸಿದವಾಹನಗಳನ್ನು ಕಳವುಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆ. ಜತೆಗೆಸಿಸಿ ಕ್ಯಾಮೆರಾಗಳ ಅಳವಡಿಕೆ ಬಗ್ಗೆ ಆದ್ಯತೆ ಕೊಡಲಾಗುತ್ತದೆ ಎಂದರು.ಸಾರ್ವಜನಿಕರೊಬ್ಬರು ಕಳೆದ ಎರಡು-ಮೂರುವರ್ಷಗಳಿಂದ ಬೆಂಗಳೂರು ಸೇರಿ ಕರ್ನಾಟಕದಲ್ಲಿ ಬಾಂಗ್ಲಾದೇಶ, ನೈಜಿರಿಯಾ,ದಕ್ಷಿಣ ಸೂಡಾನ್‌, ಪಾಕಿಸ್ತಾನ, ಶ್ರೀಲಂಕಾ, ಅರಬ್‌ ದೇಶಗಳಿಂದ ಬಂದಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗಿದೆಎಂದು ಗಮನ ಸೆಳೆ ದಾಗ, ಅಕ್ರಮವಲಸೆಯನ್ನು ಪೊಲೀ ಸರುಗಂಭೀರವಾಗಿ ಪರಿಗಣಿಸಿದ್ದಾರೆ.

ಅಂತಹವರು ಕಂಡು ಬಂದರೆ ತಕ್ಷಣಕ್ರಮ ಜರುಗಿಸುತ್ತೇವೆ ಎಂದರು.ಇನ್ನೂ ಕೆಲವರು ತಮಿಳುನಾಡಿನಕೃಷ್ಣಗಿರಿಯಲ್ಲಿ ಅಲ್ಲಿನ ಜಿಲ್ಲಾ ಪೊಲೀಸರಿಂದ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ದೂರುಗಳು ಹೇಳಿಕೊಂಡರು. ಶಾಂತಲಾ ಎಂಬ ಮಹಿಳೆ ಅಮಾಯಕ ಕನ್ನಡಿಗರ ಮೇಲೆ ಕಾನೂನಾತ್ಮಕ ದೌರ್ಜನ್ಯ ನಡೆಸುತ್ತಿದ್ದಾರೆ. ಈಬಗ್ಗೆ ತಮ್ಮ ಬಳಿ ಸಾಕ್ಷ ವಿದೆ ಎಂದು ದೂರಿದರು.

ಈ ದೂರನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದರು.ರವಿ ಎಂಬುವರು ಬಹಳಷ್ಟು ಮಂದಿಗಂಡಸರು ವರದಕ್ಷಿಣೆ ಕುರಿತಂತೆ ಸುಳ್ಳುಪ್ರಕರಣದಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಯಾವುದೇ ಸಾಕ್ಷ Âಗಳಿಲ್ಲದೆದಾಖಲಿಸುವ ಪೂರ್ವಾಗ್ರಹ ಪೀಡಿತ ಪ್ರಕರಣದಲ್ಲಿ ಮನೆ ಮಂದಿಯನ್ನೆಲ್ಲಾಸೇರಿಸಲಾಗುತ್ತಿದೆ ಎಂದಾಗ, ಇದು ಸೂಕ್ಷ ¾ವಾದ ವಿಷಯ. ಪೊಲೀಸರು ಎಲ್ಲಾ ದೃಷ್ಟಿಕೋನಗಳಿಂದಲೂ ಪರಿಶೀಲನೆ ನಡೆಸುತ್ತಾರೆ. ಏಕಮುಖವಾಗಿ ನಿರ್ಧಾರತೆಗೆದುಕೊಳ್ಳುವುದಿಲ್ಲ ಎಂದರು.ಮಹಿಳೆಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದು, ನಾನು ಒಂಟಿಮಹಿಳೆ. ರೇರಾ ಆದೇಶದ ಹೊರತಾಗಿಯೂ ಖಾಸಗಿ ಬಿಲ್ಡರ್‌ ಒಂದು ನಮ್ಮಹಣವನ್ನು ವಾಪಾಸ್‌ ನೀಡದೆ 2018ರಿಂದ ಕಿರುಕುಳ ನೀಡುತ್ತಿದ್ದಾನೆ. ನನ್ನತಂದೆ ಇದೇ ವ್ಯಥೆಯಲ್ಲಿ ಮೃತಪಟ್ಟರು ಎಂದು ಹೇಳಿಕೊಂಡಿದ್ದಾರೆ. ಆದರೆಅದಕ್ಕೆ ಪರಿಹಾರವನ್ನು ರೇರಾ ಪ್ರಾಧಿಕಾರವೇ ನೀಡಬೇಕು. ಇಂತಹ ಪ್ರಕರಣಗಳಿಗೆ ಸಕ್ಷಮ ಪ್ರಾಧಿಕಾರ ರೇರಾ ಮಾತ್ರ ಎಂದು ಆಯುಕ್ತರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next