Advertisement

ಗೋತ್ರಗಳ ಆಧಾರದ ಮೇಲೆ ಬ್ರೀಡಿಂಗ್‌ಗೆ ಕ್ರಮ: ಚವ್ಹಾಣ್‌

05:50 PM Jun 23, 2021 | Team Udayavani |

ಬೆಂಗಳೂರು: ಗೋವುಗಳ ತಳಿ ಸಂರಕ್ಷಣೆಯಲ್ಲಿ ರವಿಶಂಕರ್‌ ಗುರೂಜಿ ಅವರಗೋಶಾಲೆ ಅತ್ಯಂತ ವಿಶೇಷವಾದಬ್ರಿàಡಿಂಗ್‌ ರೀತಿ ಅಳವಡಿಸಿಕೊಂಡಿರುವುದನ್ನು ಕಂಡ ಪಶುಸಂಗೋಪನೆ ಸಚಿವಪ್ರಭು ಚವ್ಹಾಣ್‌ ಅಚ್ಚರಿ ವ್ಯಕ್ತಪಡಿಸಿದರು.

Advertisement

ಕನಕಪುರ ರಸ್ತೆಯಲ್ಲಿರುವ ಆರ್ಟ್‌ಆಫ್ ಲಿವಿಂಗ್‌ನ ರವಿಶಂಕರ್‌ ಗುರೂಜಿಅವರ ಗೋಶಾಲೆಗೆ ಮಂಗಳವಾರ ಭೇಟಿನೀಡಿ ಗೋವುಗಳ ಸಂರಕ್ಷಣೆ ಬಗ್ಗೆ ಚರ್ಚೆನಡೆಸಿದರು.ಗೋತ್ರಗಳಆಧಾರದ ಮೇಲೆ ಬ್ರಿàಡಿಂಗ್‌ ಮಾಡಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಈಸಂದರ್ಭದಲ್ಲಿ ತಿಳಿಸಿದರುಗೋತ್ರಗಳ ಆಧಾರದ ಮೇಲೆ ಗೋವುಗಳನ್ನು ಬ್ರಿàಡಿಂಗ್‌ ಮಾಡಿಸುವುದರಿಂದ ಅತ್ಯಂತ ಉತ್ಕೃಷ್ಟವಾದ ತಳಿ ಲಭ್ಯವಾಗುತ್ತದೆ.

ಆ ತಳಿಗಳಲ್ಲಿ ಗೋವುಗಳು ಹಾಲುನೀಡುವ ಸಾಮರ್ಥ್ಯ ಹೆಚ್ಚು ಎಂದುಗೋಶಾಲೆ ನಿರ್ವಹಣೆ ಉಸ್ತುವಾರಿ ಹೊತ್ತಚಂದ್ರುವಿವರಿಸಿದರು.ಅಲ್ಲದೇ ಆರೋಗ್ಯಸಮಸ್ಯೆಎದುರಾಗದಿರುವುದು,ಆರೋಗ್ಯಯುತ ಕರು ಹುಟ್ಟುವುದು ಗೋತ್ರಗಳಆಧಾರದ ಮೇಲೆ ಗೋವುಗಳನ್ನುಬ್ರಿàಡಿಂಗ್‌ ಮಾಡಿಸುವುದರ ವಿಶೇಷತೆಎಂದು ಅವರು ಹೇಳಿದರು.

ಇದೇಮಾದರಿಯನ್ನು ನಾವೂ ಗೋಶಾಲೆಗಳಲ್ಲಿಅಳವಡಿಸಿಕೊಳ್ಳಬಹುದು ಎಂದುಸಚಿವರು ಅಭಿಪ್ರಾಯಪಟ್ಟರು.ಶ್ರೀ ರವಿಶಂಕರ್‌ ಗುರೂಜಿಯವರನ್ನುಭೇಟಿ ಮಾಡಿದ ಸಚಿವರು ಗೋಶಾಲೆನಿರ್ವಹಣೆ ಕುರಿತು ಚರ್ಚೆ ನಡೆಸಿದರು.ಈ ಸಂದರ್ಭದಲ್ಲಿ ರವಿಶಂಕರ್‌ ಗುರೂಜಿಅವರು ರಾಜ್ಯದಲ್ಲಿ ಗೋಹತ್ಯೆ ನಿಷೇಧಜಾರಿಯಾಗಿದ್ದಕ್ಕೆ ಸಚಿವರಿಗೆ ಅಭಿನಂದನೆಸಲ್ಲಿಸಿದರು.ದೇಶದಲ್ಲಿ ಗೋವುಗಳ ಸಂತತಿ ಕಡಿಮೆಆಗುತ್ತಿರುವ ಸಮಯದಲ್ಲಿ ರವಿಶಂಕರ್‌ಗುರೂಜಿಯವರು ಗೋವುಗಳ ಸಂರಕ್ಷಣೆಯಲ್ಲಿ ತೊಡಗಿರುವುದು ನಿಜಕ್ಕೂ ಸಂತಸತಂದಿದೆ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next