Advertisement

ಹೈ ಜತೆ ಚರ್ಚಿಸಲು ದೆಹಲಿಗೆ?

07:02 PM Jun 22, 2021 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿಇತ್ತೀಚೆಗೆ ನಡೆದ ಬೆಳವಣಿಗೆಗಳ ಕುರಿತುಪಕ್ಷದ ಹೈಕಮಾಂಡ್‌ಗೆ ಮಾಹಿತಿ ನೀಡಲು ಸಿಎಂಯಡಿಯೂರಪ್ಪ ಮುಂದಾಗಿದ್ದಾರೆ.

Advertisement

ಈಕುರಿತು ಭೇಟಿಗೆಸಮಯನೀಡುವಂತೆಪಕ್ಷದ ಹೈಕಮಾಂಡ್‌ಗೆ ಸಮಯ ಕೇಳಿದ್ದಾರೆ.ಪಕ್ಷದ ಹೈಕಮಾಂಡ್‌ಸಮಯನೀಡಿದರೆಬುಧವಾರಅಥವಾ ಗುರುವಾರ ದೆಹಲಿಗೆತೆರಳಲು ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ.ರಾಜ್ಯಬಿಜೆಪಿಯಲ್ಲಿ ನಾಯಕತ್ವಬದಲಾವಣೆಯಗೊಂದಲ ಉಂಟಾಗಿದ್ದರಿಂದ ರಾಜ್ಯ ಬಿಜೆಪಿಉಸ್ತುವಾರಿ ಅರುಣ್‌ ಸಿಂಗ್‌ ಜೂ.16ರಿಂದ ಮೂರು ದಿನ ರಾಜ್ಯಕ್ಕೆ ಆಗಮಿಸಿ ಶಾಸಕರು ಹಾಗೂ ಸಚಿವರ ಅಭಿಪ್ರಾಯಪಡೆದುಕೊಂಡಿದ್ದರು.

ಅಲ್ಲದೇ, ಶಾಸಕರಅಭಿಪ್ರಾಯಗಳ ವರದಿಯನ್ನು ಪಕ್ಷದರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.ಅರುಣ್‌ ಸಿಂಗ್‌ ವರದಿಯಲ್ಲಿ ಕೇವಲಇಬ್ಬರು ಶಾಸಕರು ಹಾಗೂ ಒಬ್ಬರುಸಚಿವರು ಮಾತ್ರ ಸಿಎಂ ಬದಲಾವಣೆಗೆಆಗ್ರಹಿಸಿದ್ದು ಉಳಿದವರು ಯಡಿಯೂರಪ್ಪ ಕಾರ್ಯ ವೈಖರಿಯ ಬಗ್ಗೆಸಮಾಧಾನ ಹೊಂದಿದ್ದಾರೆ.ಆದರೆ, ಆಡಳಿತದಲ್ಲಿಕೆಲವರ ಹಸ್ತಕ್ಷೇಪದ ಬಗ್ಗೆ ಶಾಸಕರಲ್ಲಿಬೇಸರವಿದೆ ಎಂದು ವರದಿಯಲ್ಲಿ ಉಲ್ಲೇಖೀಸಿದ್ದಾರೆಎಂಬ ಮಾಹಿತಿ ಲಭ್ಯವಾಗಿದೆ.

ಈ ಬೆಳವಣಿಗೆಗಳ ಕುರಿತುಪಕ್ಷದ ಹೈಕಮಾಂಡ್‌ ನಾಯಕರೊಂದಿಗೆಚರ್ಚಿಸಿ ಎಲ್ಲ ಗೊಂದಲಗಳಿಗೆ ತೆರೆಎಳೆಯಲು ಸಿಎಂ ನಿರ್ಧರಿಸಿದ್ದಾರೆಂದುತಿಳಿದು ಬಂದಿದೆ. ಆದರೆ, ಪಕ್ಷದ ಹೈಕಮಾಂಡ್‌ನಿಂದ ಇನ್ನೂ ಸಮಯನೀಡುವ ಬಗ್ಗೆ ಯಾವುದೇ ಪ್ರತಿಕ್ರಿಯೆಬಂದಿಲ್ಲ ಎಂದು ತಿಳಿದು ಬಂದಿದೆ

Advertisement

Udayavani is now on Telegram. Click here to join our channel and stay updated with the latest news.

Next