Advertisement

ಆದಷ್ಟು ಬೇಗ ಬೆಂಗಳೂರು ಸ್ವಚ್ಛವಾಗಬೇಕು

11:15 AM Oct 27, 2018 | Team Udayavani |

ಬೆಂಗಳೂರು: ಪಾಲಿಕೆ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೋ ಗೊತ್ತಿಲ್ಲ. ಆದಷ್ಟು ಶೀಘ್ರ ಬೆಂಗಳೂರು ಸ್ವಚ್ಛವಾಗಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್‌ ಶುಕ್ರವಾರ ಮೌಖೀಕ ಸೂಚನೆ ನೀಡಿತು.

Advertisement

ನಗರದಲ್ಲಿ ಅನಧಿಕೃತ ಫ್ಲೆಕ್ಸ್‌, ಜಾಹೀರಾತು ಫ‌ಲಕಗಳ ತೆರವುಗೊಳಿಸುವಂತೆ ಕೋ ರಿ ಮಾಯಿಗೆಗೌಡ ಸೇರಿ ಮತ್ತಿರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರಿದ್ದ ವಿಭಾಗೀಯ ಪೀಠ, ವಿಚಾರಣೆ ವೇಳೆ ಈ ಸೂಚನೆ ನೀಡಿದೆ. ಬೆಂಗಳೂರು ಸ್ವಚ್ಛ  ನಗರವಾಗಿಸುವಲ್ಲಿ ಪಾಲಿಕೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಜಾಹೀರಾತು ಫ‌ಲಕಗಳ ತೆರವಿಗೆ ಪಾಲಿಕೆ ಅಧಿಕಾರಿಗಳು ಡಬಲ್‌ ಡ್ನೂಟಿ ಮಾಡಲಿ ಎಂದು ಸಲಹೆ ನೀಡಿತು.

ಬಿಬಿಎಂಪಿ ರೂಪಿಸಿರುವ ಹೊಸ ಜಾಹೀರಾತು ನೀತಿಗೆ ಸಂಬಂಧಿಸಿದಂತೆ ಈವರೆವಿಗೆ ಸಾರ್ವಜನಿಕರಿಂದ 704 ಆಕ್ಷೇಪಣೆ ಸಲ್ಲಿಕೆಯಾಗಿದ್ದು ಪರಿಶೀಲಿಸಲಾಗುತ್ತಿದೆ ಎಂದು ವರದಿ ಆಲಿಸಿದ ನ್ಯಾಯಪೀಠ, ಆದಷ್ಟು ಬೇಗ ಜಾಹೀರಾತು ನೀತಿ ಜಾರಿಗೆ ಬರಲು ಕ್ರಮ ವಹಿಸಿ.ಜತೆಗೆ, ಜಾಹೀರಾತು ಫ‌ಲಕಗಳ ತೆರವಿಗೆ ಸಂಬಂಧಿಸಿದಂತೆ ಬೆಂಗಳೂರು ನಗರದ ಆಸುಪಾಸಿನಲ್ಲಿ ಇರುವ ಗ್ರಾಮ ಪಂಚಾಯ್ತಿಗಳಿಗೂ ಈ ವಿಷಯದಲ್ಲಿ ಸ್ಪಷ್ಟ ನಿರ್ದೇಶನ ನೀಡಬೇಕು’ ಎಂದು  ರಾಜ್ಯಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿದೆ.

ನಗರದಲ್ಲಿ ಬಿಎಂಟಿಸಿ ಬಸ್‌, ಆಟೊ ರಿûಾ ಮತ್ತು ಸ್ಕೆç ವಾಕ್‌ಗಳ ಮೇಲೆ ಜಾಹೀರಾತುಗಳ ಫ‌ಲಕಗಳನ್ನು ಅಂಟಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಜಿ.ಆರ್‌ ಮೋಹನ್‌ ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ,  ವಾಹನಗಳ ಮೇಲೆ  ಜಾಹೀರಾತು ಫ‌ಲಕಗಳನ್ನು ಅಂಟಿಸುವುದಕ್ಕೆ ಲೈಸೆನ್ಸ್‌ ಇದೆಯೋ ಇಲ್ಲವೇ ಎಂಬುದನ್ನು ಪರಿಶೀಲಿಸಿ ಮಾಹಿತಿ ನೀಡಿ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿದೆ. ವಿಚಾರಣೆಯನ್ನು ನವೆಂಬರ್‌ 3ಕ್ಕೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next