Advertisement
ಬೆಂಗಳೂರು ಹಾಲು ಒಕ್ಕೂಟ ರೈತರಿಂದ ಖರೀದಿ ಮಾಡುವ ಪ್ರತಿ ಲೀಟರ್ ಹಾಲಿಗೆ ಅ.31ರವರೆಗೆ ಶೇ.4 ಫ್ಯಾಟ್, 8.5 ಸಾಂಧ್ರತೆ ಇದ್ದಲ್ಲಿ 34.15 ರೂ. ಬೆಲೆ ನಿಗದಿ ಮಾಡಿತ್ತು. ಇದೀಗ ನ.1 ರಿಂದ ಈ ಗುಣಮಟ್ಟದ ಹಾಲಿಗೆ ಒಕ್ಕೂಟ 32.15 ರೂ. ಬೆಲೆ ನಿಗದಿಮಾಡಿದೆ. ಬೆಂಗಳೂರು ಹಾಲು ಒಕ್ಕೂಟದ ಈ ನಿರ್ಧಾರದಿಂದ ಬೆಂಗ ಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ 1.10 ಲಕ್ಷ ಹಾಲು ಉತ್ಪಾದಕರಿಗೆ ಸಂಕಷ್ಟ ಎದುರಾಗಿದೆ.
Related Articles
Advertisement
ನಷ್ಟ ಸರಿದೂಗಿಸಲು ಬಮೂಲ್‌ನಿಂದ ಬರೆ?: ಬಮೂಲ್‌ನ ಕೆಲ ಅಧಿಕಾರಿಗಳ ಮಾಹಿತಿ ಪ್ರಕಾರ ಒಕ್ಕೂಟಕ್ಕೆ ಪ್ರತಿದಿನ ಸುಮಾರು 15 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಲ್ಲಿ 12 ಲಕ್ಷ ಲೀಟರ್ ಹಾಲು ಮಾತ್ರ ನೇರವಾಗಿ ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಹಾಲಿನ ಪುಡಿ ಹಾಗೂ ಇನ್ನಿತರ ಉತ್ಪನ್ನ ತಯಾರಿಕೆಗೆ ಬಳಸಲಾಗುತ್ತಿದೆ. ಇದರಿಂದಾಗಿ ಒಕ್ಕೂಟಕ್ಕೆ ತೀವ್ರ ನಷ್ಟವಾಗಿದ್ದು, ಇದುವರೆಗೆ 65 ಕೋಟಿ ರೂ. ನಷ್ಟ ಅನುಭವಿಸಿದೆ. ಹಾಲು ಖರೀದಿ, ಮಾರಾಟ ಪ್ರಕ್ರಿಯೆಯಲ್ಲಿ ಬೆಂಗಳೂರು ಒಕ್ಕೂಟ ಪ್ರತಿ ಲೀಟರ್‌ಗೆ 1.85 ರೂ. ಸರಾಸರಿ ನಷ್ಟ ಅನುಭವಿಸುತ್ತಿದ್ದು, ಇದನ್ನು ಸರಿದೂಗಿಸುವ ಉದ್ದೇಶದಿಂದ ರೈತರಿಗೆ ನಷ್ಟದ ಹೊರೆ ಹೊರಿಸಲು ಮುಂದಾಗಿದೆ ಎಂದು ಹೇಳಲಾಗಿದೆ.
ಪಶು ಆಹಾರದ ಬೆಲೆಯೂ ಹೆಚ್ಚಳ: ಒಂದೆಡೆ ಹಾಲಿನ ಬೆಲೆ ಇಳಿಕೆ ಮಾಡಿರುವ ಬಮೂಲ್, ಇತ್ತ ರೈತರಿಗೆ ಒಕ್ಕೂಟದ ವತಿ ಯಿಂದ ನೀಡುವ ಪಶು ಆಹಾರದ ಬೆಲೆಯನ್ನೂ ಹೆಚ್ಚಳ ಮಾಡಿದೆ. ಈ ಹಿಂದೆ ಪ್ರತಿ 50 ಕೆ.ಜಿ. ಪಶು ಆಹಾರಕ್ಕೆ 1,165 ರೂ. ಬೆಲೆ ನೀಡಲಾಗುತ್ತಿತ್ತು. ಇದೀಗ 1,250 ರೂ. ಬೆಲೆ ನಿಗದಿಮಾಡಿದ್ದು, ಇದು ರೈತರಿಗೆ ಮತ್ತೂಂದು ಬರೆ ಎಳೆದಂತಾಗಿದೆ.
ಪ್ರತಿಕ್ರಿಯೆ ನೀಡಲ್ಲ ಎಂದ ಎಂಡಿ: ಹಾಲಿನ ದರ ಕಡಿತ ಮಾಡಿರುವ ಬಗ್ಗೆ ಬೆಂಗಳೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಟಿ.ಸುರೇಶ್ ಅವರ ಪ್ರತಿಕ್ರಿಯೆಗಾಗಿ “ಉದಯವಾಣಿ’ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ದರ ಕಡಿತದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕರಿಸಿದರು.
ಬರದಿಂದ ಮೇವಿನ ಸಮಸ್ಯೆ, ಪಶು ಆಹಾರದ ಬೆಲೆ ಹೆಚ್ಚಳ, ಪಶು ವೈದ್ಯಕೀಯ ಸೇವೆ ದುಬಾರಿಯಿಂದಾಗಿ ರೈತರಿಗೆ ಹೈನುಗಾರಿಕೆ ಹೊರೆಯಾಗಿದೆ. ಈಗಾಗಲೇ ಸಾಕಷ್ಟು ಮಂದಿ ಹೈನುಗಾರಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಬಮೂಲ್ ಬೆಲೆ ಇಳಿಕೆ ಮಾಡಿರುವುದನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. –ಯೋಗೀಶ್ ರಾಂಪುರ, ರೈತ
– ಸು.ನಾ.ನಂದಕುಮಾರ್