Advertisement

Bangalore: ಮಾಲ್‌ನಲ್ಲಿ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ: ವಿಡಿಯೋ ವೈರಲ್‌ 

10:56 AM Oct 31, 2023 | Team Udayavani |

ಬೆಂಗಳೂರು: ನಗರದ ಪ್ರತಿಷ್ಠಿತ ಮಾಲ್‌ವೊಂದರಲ್ಲಿ ವ್ಯಕ್ತಿಯೊಬ್ಬ ಮಹಿಳೆಯರನ್ನು ಆಕ್ಷೇಪಾರ್ಹ ರೀತಿಯಲ್ಲಿ ಖಾಸಗಿ ಭಾಗ ಸ್ಪರ್ಶಿಸಿ ವಿಕೃತಿ ಮೆರೆದಿದ್ದು, ವಿಡಿಯೋ ವೈರಲ್‌ ಆಗಿದೆ. ಬೆಂಗಳೂರಿನ ಪ್ರತಿಷ್ಠಿತ ಮಾಲ್‌ವೊಂದರಲ್ಲಿ ಭಾನುವಾರ ಸಂಜೆ 6.30ಕ್ಕೆ ಜನ ಜಂಗುಳಿ ನಡುವೆ ವ್ಯಕ್ತಿಯೊಬ್ಬ ಮಹಿಳೆಯರು, ಯುವತಿಯರನ್ನು ಸ್ಪರ್ಶಿಸಿ ವಿಕೃತವಾಗಿ ವರ್ತಿ ಸುತ್ತಿದ್ದ. ಇದನ್ನು ಗಮನಿಸಿದ ಮಾಲ್‌ಗೆ ಬಂದಿದ್ದ ಮತ್ತೋರ್ವ ವ್ಯಕ್ತಿಯು ಮೊಬೈಲ್‌ನಲ್ಲಿ ಆತನ ವಿಕೃತಿ ಸೆರೆ ಹಿಡಿದಿದ್ದಾನೆ. ಆತನನ್ನು ಹಿಂಬಾಲಿಸಿಕೊಂಡು ಹೋಗಿ ಪರಿಶೀಲಿಸಿದಾಗ ಆರೋಪಿಯು ನಿರಂತರ ಕಿರುಕುಳ ನೀಡುತ್ತಾ ಓಡಾಡುತ್ತಿ ರುವುದು ಪತ್ತೆಯಾಗಿದೆ.

Advertisement

ಆರೋಪಿಯ ಅಸಭ್ಯ ವರ್ತನೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡ ಯುವಕ ಮಾಲ್‌ ಭದ್ರತಾ ಸಿಬ್ಬಂದಿ ಗಮನಕ್ಕೂ ತಂದಿದ್ದ. ಮಾಲ್‌ ಸಿಬ್ಬಂದಿ ಆರೋಪಿಗೆ ಹುಡುಕಾಟ ನಡೆಸಿದಾಗ ಆತ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಇದುವರೆಗೆ ಯಾರೂ ಲಿಖಿತ ದೂರು ಕೊಡಲಿಲ್ಲ. ಆರೋಪಿಯ ಕೃತ್ಯದ ಬಗ್ಗೆ  ವಿಡಿಯೋ ಚಿತ್ರೀಕರಿಸಿ ಕೊಂಡಿದ್ದ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಈ ಸಂಗತಿ ಹಂಚಿಕೊಂಡಿದ್ದು, ಮಾಗಡಿ ರಸ್ತೆ ಠಾಣಾ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next