ಬೆಂಗಳೂರು ಲಿಟರೇಚರ್ ಫೆಸ್ಟಿವಲ್‌ನ 8ನೇ ಆವೃತ್ತಿಯು ಈ ವಾರಾಂತ್ಯ ನಡೆಯಲಿದೆ. ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ 230ಕ್ಕೂ ಹೆಚ್ಚು ಬರಹಗಾರರು, ಉಪನ್ಯಾಸಕರು ಭಾಗವಹಿಸಲಿದ್ದಾರೆ. ಮೂರು ಕಾರ್ಯಕ್ರಮ ವೇದಿಕೆಗಳು, ಮೂರು ಮಕ್ಕಳ ಕಾರ್ಯಕ್ರಮಗಳು, 2000 ಚದರ ಅಡಿಯ ಬುಕ್‌ಸ್ಟೋರ್, ಫಿಕ್ಷನ್, ನಾನ್‌ಫಿಕ್ಷನ್, ಭಾರತೀಯ ಇತಿಹಾಸ, ಹವಾಮಾನ ವೈಪರೀತ್ಯ, ಮಾನಸಿಕ ಆರೋಗ್ಯ, ಆರ್ಥಿಕತೆ, ಕಲೆ, ಪ್ರೀತಿ ಹಾಗೂ ಸಂಬಂಧ, ಕ್ರೀಡೆ, ಕಾವ್ಯ, ಸೈನ್ಸ್ ಫಿಕ್ಷನ್ ಕುರಿತು ಚರ್ಚೆಗಳು ಈ ಹಬ್ಬದಲ್ಲಿ ಇರಲಿವೆ. ಜಯಂತ ಕಾಯ್ಕಿಣಿ, ಬಿ ಜಯಶ್ರೀ ಹಾಗೂ ಕೆ ಮರುಳಸಿದ್ದಪ್ಪ ಅವರಿಂದ ಗಿರೀಶ್ ಕಾರ್ನಾಡರ ಕಾರ್ಯ ಹಾಗೂ ಜೀವನಚರಿತ್ರೆ ಬಗ್ಗೆ ಸ್ಮರಣೆ ನಡೆಯಲಿದೆ.
ಮಕ್ಕಳ ಹಬ್ಬ: 4 ವರ್ಷ ಮೇಲ್ಪಟ್ಟವರಿಗಾಗಿ ಅಬ್ರಕದಬ್ರ, ಎಂಟು ವರ್ಷ ಮೇಲ್ಪಟ್ಟವರಿಗಾಗಿ ಖುಲ್ ಜಾ ಸಿಮ್ ಸಿಮ್ ಹಾಗೂ 12 ಹಾಗೂ ಮೇಲ್ಪಟ್ಟವರಿಗಾಗಿ ಶಾಝಮ್ ಹೀಗೆ ಮೂರು ವಿಭಾಗಗಳಲ್ಲಿ ಮಕ್ಕಳ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ, ಮಕ್ಕಳ ಪುಸ್ತಕಗಳ ಮಳಿಗೆ, ಕಥೆ, ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಯಾವಾಗ?: ನ.9 -10
ಎಲ್ಲಿ?: ಹೋಟೆಲ್ ಲಲಿತ್ ಅಶೋಕ್, ಕುಮಾರಕೃಪಾ ಹೈಗ್ರೌಂಡ್ಸ್
ಪ್ರವೇಶ: ಉಚಿತ (ನೋಂದಣಿ ಮಾಡಿಕೊಳ್ಳಬೇಕು)
ಹೆಚ್ಚಿನ ಮಾಹಿತಿಗೆ: www.bangaloreliteraturefestival.org