ಬೆಂಗಳೂರು: ಚೆಕ್ ಗಣರಾಜ್ಯದ ಕೇವಲ 15 ವರ್ಷದ ಆಟಗಾರ್ತಿ ಬ್ರೆಂಡಾ ಫ್ರುಹ್ವಿರ್ಟೊವಾ, ಭಾರತದ 30 ವರ್ಷದ ಆಟಗಾರ್ತಿ ಅಂಕಿತಾ ರೈನಾರನ್ನು ಐಟಿಎಫ್ ಟೆನಿಸ್ ಟೂರ್ನಿಯಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದಿದ್ದಾರೆ. ರವಿವಾರ ನಗರದ ಕೆಎಸ್‌ಎಲ್‌ಟಿಎ ಆವರಣದಲ್ಲಿ ನಡೆದ ಮಹಿಳಾ ಸಿಂಗಲ್ಸ್‌ನ ಅಂತಿಮ ಪಂದ್ಯದಲ್ಲಿ ಆಡಿದ ಫ್ರುಹ್ವಿರ್ಟೊವಾ 0-6, 6-4, 6-0 ಅಂಕಗಳಿಂದ ಗೆಲುವು ಸಾಧಿಸಿದರು. ಈ ಪಂದ್ಯದ ಮೊದಲ ಸೆಟ್‌ನಲ್ಲಿ ಫ್ರುಹ್ವಿರ್ಟೊವಾ ಸಾಮಾನ್ಯವಾಗಿ ಆಡಿ ಸೋತರು. ಆದರೆ ಮುಂದಿನೆರಡು ಸೆಟ್‌ಗಳಲ್ಲಿ ಅಂಕಿತಾಗೆ ಉಸಿರೆತ್ತಲು ಅವಕಾಶ ನೀಡದೇ ಗೆಲುವು ಸಾಧಿಸಿದರು.
Advertisement