Advertisement

Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್‌ಗೆ ಲಂಕಾ

01:08 AM Jul 27, 2024 | Team Udayavani |

ಡಂಬುಲ: ರೋಚಕ ಹೋರಾಟ ಕಂಡ ದ್ವಿತೀಯ ಸೆಮಿಫೈನಲ್‌ನಲ್ಲಿ ಪಾಕಿಸ್ಥಾನವನ್ನು 3 ವಿಕೆಟ್‌ಗಳಿಂದ ಮಣಿಸಿದ ಶ್ರೀಲಂಕಾ ಪ್ರಶಸ್ತಿ ಸುತ್ತನ್ನು ಪ್ರವೇಶಿಸಿದೆ. ರವಿವಾರದ ಪ್ರಶಸ್ತಿ ಸಮರದಲ್ಲಿ ಭಾರತ ತಂಡವನ್ನು ಎದುರಿಸಲಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 4 ವಿಕೆಟಿಗೆ 140 ರನ್‌ ಗಳಿಸಿದರೆ, ಶ್ರೀಲಂಕಾ 19.5 ಓವರ್‌ಗಳಲ್ಲಿ 7 ವಿಕೆಟಿಗೆ 141 ರನ್‌ ಮಾಡಿ ಗೆಲುವು ಸಾಧಿಸಿತು.

ಚೇಸಿಂಗ್‌ ವೇಳೆ ಶ್ರೀಲಂಕಾ ಸಾಕಷ್ಟು ಆತಂಕದ ಕ್ಷಣಗಳನ್ನು ಎದುರಿಸಿತು. ಆದರೆ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ನಿಂತ ಚಾಮರಿ ಅತ್ತಪಟ್ಟು ನಾಯಕಿಯ ಆಟದ ಮೂಲಕ ತಂಡವನ್ನು ಮೇಲೆತ್ತಿದರು. ಚಾಮರಿ ಗಳಿಕೆ 48 ಎಸೆತಗಳಿಂದ 63 ರನ್‌ (9 ಬೌಂಡರಿ, 1 ಸಿಕ್ಸರ್‌).

ಪಾಕ್‌ ಬ್ಯಾಟಿಂಗ್‌ ವೇಳೆ ಎಲ್ಲರೂ ಉತ್ತಮ ಕೊಡುಗೆ ಸಲ್ಲಿಸಿದರು. ಆರಂಭಿಕ ಆಟಗಾರ್ತಿಯರಾದ ಮುನೀಬಾ ಅಲಿ ಸರ್ವಾಧಿಕ 37 ಹಾಗೂ ಗುಲ್‌ ಫಿರೋಜಾ 25 ರನ್‌ ಮಾಡಿದರು. ಮೊದಲ ವಿಕೆಟಿಗೆ 61 ರನ್‌ ಒಟ್ಟುಗೂಡಿತು.

Advertisement

Udayavani is now on Telegram. Click here to join our channel and stay updated with the latest news.

Next