ಹುಬ್ಬಳ್ಳಿ: ಇಂಡಿಗೋ ವಿಮಾನಯಾನ ಕಂಪನಿಯು ನ. 7ರಿಂದ ಪ್ರತಿದಿನ ಸಂಜೆ ಬೆಂಗಳೂರು-ಹುಬ್ಬಳ್ಳಿ ನಡುವೆ ಮತ್ತೂಂದು ಎಟಿಆರ್ ವಿಮಾನ ಆರಂಭಿಸುತ್ತಿದೆ. ಪ್ರತಿದಿನ ಸಂಜೆ 6:15 ಗಂಟೆಗೆ ಬೆಂಗಳೂರಿನಿಂದ ಹೊರಡುವ (6ಇ-7114) ವಿಮಾನವು 7:40 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ನಂತರ ರಾತ್ರಿ 8:10 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ (6ಇ-7115) ವಿಮಾನವು 9:25 ಗಂಟೆಗೆ ಬೆಂಗಳೂರು ತಲುಪಲಿದೆ.
ಈಗಾಗಲೇ ಇಂಡಿಗೋ ಕಂಪನಿಯು ಬೆಂಗಳೂರು-ಹುಬ್ಬಳ್ಳಿ-ಬೆಂಗಳೂರು ನಡುವೆ ರವಿವಾರ, ಮಂಗಳವಾರ ಹೊರತುಪಡಿಸಿ ವಾರದಲ್ಲಿ ಐದುದಿನಗಳ ಕಾಲ ಎಟಿಆರ್ ವಿಮಾನಯಾನ ಆರಂಭಿಸಿದೆ. ಈ ವಿಮಾನವು ಬೆಂಗಳೂರಿನಿಂದ (6ಇ-7162)
ಮಧ್ಯಾಹ್ನ 1:35 ಗಂಟೆಗೆ ಹೊರಟು ಹುಬ್ಬಳ್ಳಿಗೆ 3:00 ಗಂಟೆಗೆ ತಲುಪಲಿದೆ.
ನಂತರ ಹುಬ್ಬಳ್ಳಿಯಿಂದ (6ಇ-7161) ಮಧ್ಯಾಹ್ನ 3:30 ಗಂಟೆಗೆ ಹೊರಟು ಸಂಜೆ 4:35 ಗಂಟೆಗೆ ಬೆಂಗಳೂರು ತಲುಪಲಿದೆ. ಈಗ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ಮುತುವರ್ಜಿ ಮೇರೆಗೆ ಕಂಪನಿಯು ಬೆಂಗಳೂರು-ಹುಬ್ಬಳ್ಳಿ-ಬೆಂಗಳೂರು ನಡುವೆ ಮತ್ತೂಂದು ಎಟಿಆರ್ ವಿಮಾನಯಾನ ಆರಂಭಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.