Advertisement

ಮೇ 30ರಂದು ಬೆಂಗಳೂರಿನಲ್ಲಿ ಹೋಟೆಲ್, ಲಾಡ್ಜ್ ಸಂಪೂರ್ಣ ಬಂದ್

05:45 PM May 27, 2017 | Sharanya Alva |

ಬೆಂಗಳೂರು: ಕೇಂದ್ರ ಸರ್ಕಾರವು ಜುಲೈ 1ರಿಂದ ಜಾರಿಗೆ ತರಲಿರುವ ಸರಕು ಮತ್ತು ಸೇವಾ ತೆರಿಗೆಯಲ್ಲಿ(ಜಿಎಸ್‌ಟಿ) ಸಾಮಾನ್ಯ ಹೋಟೆಲ್‌ಗ‌ಳಿಗೆ ದುಬಾರಿ ತೆರಿಗೆ ವಿಧಿಸಿರುವುದನ್ನು ಖಂಡಿಸಿ ಮೇ 30ರಂದು ಬೃಹತ್‌ ಬೆಂಗಳೂರು ಹೋಟೆಲ್‌ಗ‌ಳ ಸಂಘವು ಹೋಟೆಲ್‌ ಉದ್ಯಮ ಬಂದ್‌ ಮಾಡಿ ಪ್ರತಿಭಟಿಸಲು ಕರೆ ನೀಡಿದೆ.

Advertisement

ಬೆಂಗಳೂರು ಹೋಟೆಲ್‌ ಸಂಘದ ಸದಸ್ಯತ್ವ ಪಡೆದಿರುವ ಸುಮಾರು 2500ರಿಂದ 3000 ಹೋಟೆಲ್‌, ಲಾಡ್ಜ್ ಹಾಗೂ ರೆಸ್ಟೋರೆಂಟ್‌ಗಳು ಸಂಘದ ಕಾರ್ಯಕಾರಿ ಸಭೆಯ ನಿರ್ಧಾರದಂತೆ ಮೇ 30ರ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11ರ ತನಕ ಬಂದ್‌ ಆಗಲಿದೆ.

ಒಂದು ದಿನದ ಮಟ್ಟಿಗೆ  ಹೋಟೆಲ್‌ಗ‌ಳನ್ನು ಬಂದ್‌ ಮಾಡುವ ಮೂಲಕ ಜಿಎಸ್‌ಟಿಯಲ್ಲಿ ಎಸಿ ಹೋಟೆಲ್‌ಗೆ ಶೇ.18ರಷ್ಟು ಮತ್ತು ನಾನ್‌ ಎಸಿ ಹೋಟೆಲ್‌ಗ‌ಳಿಗೆ ಶೇ.12ರಷ್ಟು ದುಬಾರಿ ತೆರಿಗೆ ಅಳವಡಿಸಿರುವುದನ್ನು ವಿರೋಧಿಸಲಿದ್ದಾರೆ. ಬಂದ್‌ಗೆ ಸಂಬಂಧಿಸಿದಂತೆ “ಉದಯವಾಣಿ’ಯೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಹೆಬ್ಟಾರ್‌, 50 ಲಕ್ಷಕ್ಕಿಂತ ಕಡಿಮೆ ವಹಿವಾಟಿನ ಹೋಟೆಲ್‌ಗೆ ಶೇ.5ರಷ್ಟು,-ಅದಕ್ಕಿಂತ ಜಾಸ್ತಿ ವಹಿವಾಟು ಮಾಡುವ ನಾನ್‌ ಎಸಿ ಹೋಟೆಲ್‌ಗೆ ಶೇ.12ರಷ್ಟು ಮತ್ತು ಎಸಿ ಹೋಟೆಲ್‌ಗೆ ಶೇ.18ರಷ್ಟು ತೆರಿಗೆ ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದೆ. ಇದರಿಂದ ಒಂದು ಊಟಕ್ಕೆ 12ರಿಂದ 18 ರೂ. ಹೆಚ್ಚು ಮಾಡಬೇಕಾಗುತ್ತದೆ. ಆಗ ಸಾಮಾನ್ಯ ಹೋಟೆಲ್‌ಗೆ ಬರುವ ಗ್ರಾಹಕರ ಸಂಖ್ಯೆ ಇಳಿಮುಖವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next