Advertisement

ಬೆಂಗಳೂರು ಸ್ವರ್ಗ; ಆದರೆ ನೀರಿನ ಬಳಕೆ ಮಾತ್ರ ಅಸಮರ್ಪಕ

12:22 PM Aug 10, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರು ಸ್ವರ್ಗದ ಹಿರಿಯಣ್ಣ ಎಂದು ಜಲ ತಜ್ಞ ರಾಜೇಂದ್ರಸಿಂಗ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದೆ. ಆದರೆ, ಸರಿಯಾದ ಹಾಗೂ ವ್ಯವಸ್ಥಿತ ಬಳಕೆಯಾಗುತ್ತಿಲ್ಲ. ಸ್ಥಳೀಯ ಕೆರೆಗಳನ್ನು ಸದುಪ ಯೋಗಪಡೆಸಿಕೊಳ್ಳದೆ ಹಾಳು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.  ನೀರಿನ ಮರು ಬಳಕೆಗೆ
ಹೆಚ್ಚಿನ ಆದ್ಯತೆ ನೀಡದೆ ಕಾವೇರಿ ಕಣಿವೆಯಿಂದ ನೀರು ತರುವ ಪ್ರಯತ್ನ ಮಾಡಲಾಗುತ್ತಿದೆ. ಜಲಮೂಲ ಸಂರಕ್ಷಿಸಿ ನೀರಿನ
ಮರುಬಳಕೆಗೆ ಹೆಚ್ಚು ಒತ್ತು ನೀಡಬೇಕು ಎಂದರು. ಆಡಳಿತ ನಡೆಸುವವರು ಇರುವ ನೀರಿನ ಬಳಕೆಯಲ್ಲಿ ಶಿಸ್ತು ತರಬೇಕು. ನಗರದ ಅನೇಕ ಕೆರೆಗಳು ಕಲುಷಿತಗೊಂಡು ಮಾಲಿನ್ಯಕ್ಕೆ ಕಾರಣವಾಗಿವೆ. ಅವುಗಳ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕು. ಆದರೆ, ರಾಜಕೀಯ ನಾಯಕರು ನೀರಿನ ವ್ಯವಸ್ಥಿತ ಬಳಕೆಗೆ ಆದ್ಯತೆ ನೀಡುತ್ತಿಲ್ಲ. ಹೀಗಾಗಿ ನೀರಿನ ಬರ ಕಾಡುತ್ತಿದೆ ಎಂದು ಹೇಳಿದರು. ರಾಜ್ಯದಲ್ಲಿ ಹಸಿರು ವಲಯ ಕಡಿಮೆಯಾಗಿ ತಾಪಮಾನ ಪ್ರಮಾಣ ಹೆಚ್ಚಾಗಿರುವುದು ಹವಾಮಾನ ವೈಪರಿತ್ಯಕ್ಕೆ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next