Advertisement

Customs Officers: ಶೌಚಾಲಯದ ವಾಶ್‌ ಬೇಸಿನ್‌ನಲ್ಲಿ ಬಚ್ಚಿಟ್ಟಿದ್ದ 3.2 ಕೆ.ಜಿ. ಚಿನ್ನ ವಶ

12:59 PM Oct 18, 2023 | Team Udayavani |

ಬೆಂಗಳೂರು: ವಿಮಾನದ ಶೌಚಾಲಯದ ವಾಶ್‌ ಬೇಸಿನ್‌ನಲ್ಲಿ ಅಡಗಿಸಿ ಇಟ್ಟು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಕರಣವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬೇಧಿಸಿದ್ದಾರೆ.

Advertisement

ಅ.7 ರಂದು ಮಾಲ್ಡೀವ್ಸ್‌ನ ಮಾಲೆಯಿಂದ ದೇವನ ಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೋ ವಿಮಾನದ ಶೌಚಾಲಯ ದಲ್ಲಿ ಅಕ್ರಮವಾಗಿ ಸಾಗಿಸಲು ಬಚ್ಚಿಡಲಾಗಿತ್ತು. ಈ ಮಾಹಿತಿ ಮೇರೆಗೆ ಶೌಚಾ ಲಯದ ವಾಶ್‌ ಬೇಸಿನ್‌ ಒಡೆದಾಗ 3.2 ಕೆ.ಜಿ. ತೂಕದ 1.8 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಿಮಾನವನ್ನು ತಪಾಸಣೆ ನಡೆಸಿದಾಗ ವಿಮಾನದ ಶೌಚಾಲಯದ ವಾಶ್‌ ಬೇಸಿನ್‌ನಲ್ಲಿ ಅಡಗಿಸಿಟ್ಟಿದ ಬ್ಯಾಗ್‌ ಪತ್ತೆ ಯಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next