ಬೆಂಗಳೂರು: ಕಾರ್ಪೆಂಂಟರ್‌ನನ್ನು ಅಪಹರಿಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುವ ಜ್ಞಾನಭಾರತಿ ಠಾಣೆ ಪೊಲೀಸರು, ಇದೇ ವೇಳೆ ರಾಮನಗರದ ಕೂಟಗಲ್ ತಿಮ್ಮಪ್ಪಸ್ವಾಮಿ ಬೆಟ್ಟದ ತಪ್ಪಲಲ್ಲಿ ನಡೆದಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ವನ್ನೂ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಪೆಂಂಟರ್ ನನ್ನು ಅಪಹರಿಸಿ ಕೊಲೆ ಯತ್ನ ನಡೆಸಿದ್ದ ಆರೋಪಿಗಳೇ ರಾಮನಗರದ ಕೂಟಗಲ್ ತಿಮ್ಮಪ್ಪಸ್ವಾಮಿ ಬೆಟ್ಟದ ತಪ್ಪಲಲ್ಲಿ ನಡೆದಿದ್ದ ಅಪರಚಿತ ವ್ಯಕ್ತಿ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಅನ್ನುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬೆಂ. ಗ್ರಾಮಾಂತರ ಜಿಲ್ಲೆಯ ರಾಮಸಂದ್ರದ ಗಾಯತ್ರಿ ಲೇಔಟ್‌ನ ಸಂಜಯ್(29) ನಗರದ ಎಸ್‌ಎಂವಿ ಲೇಔಟ್ 5ನೇ ಬ್ಲಾಕ್ ನಿವಾಸಿ ಆನಂದ(30) ಹಾಗೂ ನಾಗದೇವಹಳ್ಳಿಯ ಹನುಮಂತು(30) ಬಂಧಿತರು.
ಮತ್ತೂಬ್ಬ ಆರೋಪಿ ನಾಪತ್ತೆಯಾಗಿದ್ದು, ಶೋಧ ನಡೆದಿದೆ. ಬಂಧಿತರಿಂದ 2.40 ಲಕ್ಷ ರೂ. ನಗದು, ಚಿನ್ನದ ಸರ, ಕೃತ್ಯಕ್ಕೆ ಉಪಯೋಗಿಸಿದ್ದ ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು 2023ರ ಡಿ.25ರಂದು ಕೆಂಗೇರಿ ನಿವಾಸಿ ಕಿಶನ್ ಕುಮಾರ್ ಎಂಬ ಕಾರ್ಪೆಂಂಟರ್ ನನ್ನು ಅಪಹರಿಸಿ, ಕೊಲೆಗೆ ಯತ್ನಿಸಿದ್ದರು. ಅಲ್ಲದೆ, ಡಿ.30ರಂದು ಜ್ಞಾನಭಾರತಿ ನಿವಾಸಿ ಗುರುಸಿದ್ದಪ್ಪ ಎಂಬವರವನ್ನು ಅಪಹರಿಸಿ, ರಾಮನಗರದ ತಿಮ್ಮಪ್ಪಸ್ವಾಮಿ ಬೆಟ್ಟದಲ್ಲಿ ಕೊಲೆಗೈದಿದ್ದರು. ಆರೋಪಿಗಳ ಪೈಕಿ ಸಂಜಯ್ ನಗರದ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಗ್ಯಾರೆಜ್ ನಡೆಸುತ್ತಿದ್ದ. ಆನಂದ್ ತರಕಾರಿ ಡೆಲಿವರಿ ನೌಕರ. ಇನ್ನು ಹನು ಮಂತು, ರಾಯಚೂರಿನ ದೇವದುರ್ಗದ ಮೂಲ ದವನಾಗಿದ್ದಾನೆ. ಯಾವುದೇ ಕೆಲಸಕ್ಕೆ ಹೋಗುತ್ತಿ ರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪಹರಣ; ತಪ್ಪಿಸಿಕೊಂಡ ಕಾರ್ಪೆಂಂಟರ್: ಅಪಹರಣಕ್ಕೊಳಗಾದ ಕಿಶನ್ ಕುಮಾರ್, ಸಂಜಯ್ ಕುಮಾರ್ ಪಂಡಿತ್ ಎಂಬವರ ಇಂಟಿ ರಿಯರ್ ಕಂಪನಿಯಲ್ಲಿ ಕಾಪೆìಂಟರ್ ಕೆಲಸ ಮಾಡಿಕೊಂಡಿದ್ದ. ಮತ್ತೂಂದೆಡೆ ಆರೋಪಿಗಳ ಪೈಕಿ ಸಂಜಯ್, ಸಂಜಯ್ ಕುಮಾರ್ ಪಂಡಿತ್ ರನ್ನು ಅಪಹರಿಸಲು ಸಂಚು ರೂಪಿಸಿ, ಕೆಲಸದ ನಿಮಿತ್ತ ಬರುವಂತೆ ಕರೆ ಮಾಡಿದ್ದ. ಆದರೆ, ಕುಂದಾಪುರದಲ್ಲಿದ್ದ ಸಂಜಯ್ ಕುಮಾರ್ ಪಂಡಿತ್, ಸಹಾಯಕ ಕಿಶನ್ ಕುಮಾರ್‌ನನ್ನು ಕಳುಹಿಸಿದ್ದರು. ಆದರೆ, ಆರೋಪಿಗಳು ಕಿಶನ್ ಕುಮಾರ್ ಇಂಟಿಯರ್ ಕಂಪನಿ ಮಾಲೀಕ ಎಂದು ತಿಳಿದು ಅಪಹರಿಸಿದ್ದಾರೆ. ಬಳಿಕ ಆತ ಕೆಲಸಗಾರ ಎಂದು ತಿಳಿದು, 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಕಿಶನ್ ಬಳಿ ಹಣವಿಲ್ಲ ಎಂದು ಗೊತ್ತಾಗಿ, ಬಳಿಕ ಮಾಲೀಕ ಸಂಜಯ್ ಕುಮಾರ್ ಪಂಡಿತ್‌ಗೆ ಕರೆ ಮಾಡಿಸಿ 1 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಬಳಿಕ ಮಾಲೀಕ ಕುಂದಾಪುರಕ್ಕೆ ಹೋಗಿದ್ದಾರೆ ಎಂದು ತಿಳಿದು, ಕಿಶನ್ ಮೇಲೆ ಹಲ್ಲೆ ನಡೆಸಿ ಕುಂದಾಪುರಕ್ಕೆ ಕರೆದೊಯ್ದಿದ್ದರು. ಮಾರ್ಗಮಧ್ಯೆ ಆರೋಪಿಗಳು ಊಟಕ್ಕೆಂದು ನಿಲ್ಲಿಸಿದಾಗ, ಕಿಶನ್ ಕುಮಾರ್ ತಪ್ಪಿಸಿಕೊಂಡು, ಸ್ಥಳೀಯರ ನೆರವಿನಿಂದ ಮಾಲೀಕರಿಗೆ ಕರೆ ಮಾಡಿ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಬಂದಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದರು.
ಹೊಸವರ್ಷದ ಪಾರ್ಟಿ ಹಣಕ್ಕೆ ಕೃತ್ಯ : ಆರೋಪಿಗಳ ವಿಚಾರOಯಲ್ಲಿ ಹೊಸ ವರ್ಷದ ಪಾರ್ಟಿಗೆ ಗೋವಾಕ್ಕೆ ಹೋಗಲು ನಿರ್ಧರಿಸಿದ್ದರು. ಆದರೆ, ಯಾರ ಬಳಿಯೂ ಹಣ ಇರಲಿಲ್ಲ. ಹೀಗಾಗಿ ಕಿಶನ್ ಕುಮಾರ್ ಅಪ ಹರಿಸಿ ಹಣ ಸುಲಿಗೆಗೆ ಯತ್ನಿಸಿ ದ್ದರು. ಆದರೆ, ಅದು ವಿಫಲವಾದಾಗ, ಗುರುಸಿದ್ದಪ್ಪನನ್ನು ಅಪಹರಿಸಿ, ಕೊಲೆಗೈದಿದ್ದಾರೆ. ಈ ವೇಳೆ ಸುಲಿಗೆ ಮಾಡಿದ 4 ಲಕ್ಷ ರೂ.ನಲ್ಲಿ ಎಲ್ಲರೂ ಗೋವಾಕ್ಕೆ ಹೋಗಿ ಹೊಸ ವರ್ಷ ಆಚರಿಸಿಕೊಂಡು, ಮೋಜು-ಮಸ್ತಿ ಮಾಡಿದ್ದಾರೆ. ಬಳಿಕ ಧರ್ಮಸ್ಥಳಕ್ಕೆ ಹೋಗಿ, ಸಂಜಯ್ ಮತ್ತು ಆನಂದ್ ಮುಡಿ ಕೊಟ್ಟಿದ್ದಾರೆ. ಆನಂತರ ಬೆಂಗಳೂರಿಗೆ ಬಂದಾಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.