Advertisement

Bangalore Crime: ಸಹೋದರನ ಮನೆಯಲ್ಲಿ ಮಲಗಿದ್ದ ಅಣ್ಣನ ಸ್ನೇಹಿತನ ಹತ್ಯೆ

10:26 AM Sep 26, 2023 | Team Udayavani |

ಬೆಂಗಳೂರು: ಸಹೋದರನ ಮನೆಯಲ್ಲಿ ಮಲಗುತ್ತಿದ್ದ ಅಣ್ಣನ ಸ್ನೇಹಿತನನ್ನು ಆಟೋ ಚಾಲಕ ಹತ್ಯೆಗೈದಿರುವ ಘಟನೆ ಸುಬ್ರಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ದೊಡ್ಡಕಲ್ಲಸಂದ್ರ ಮೂಲದ ಗಣೇಶ್‌(43) ಕೊಲೆಯಾದವ. ಸೋಮವಾರ ಮುಂಜಾನೆ 1 ಗಂಟೆ ಸುಮಾರಿಗೆ ಶಾರದಾನಗರದಲ್ಲಿ ಈ ಘಟನೆ ನಡೆದಿದೆ. ಆರೋಪಿ ನಾರಾಯಣ ನಾಯಕ್‌(50) ಎಂಬಾತನನ್ನು ಬಂಧಿಸಲಾಗಿದೆ.

ಕೊಲೆಯಾದ ಗಣೇಶ್‌ ಮತ್ತು ಆರೋಪಿ ನಾರಾಯಣ ನಾಯಕ್‌ ಸಹೋದರ ಮಲ್ಲೇಶ್‌ ನಾಯಕ್‌ ಸ್ನೇಹಿತರಾಗಿದ್ದಾರೆ. ಇಬ್ಬರು ಹೋಂ ನರ್ಸಿಂಗ್‌ ಕೇರ್‌ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ನಾರಾಯಣ ನಾಯಕ್‌ ಮತ್ತು ಮಲ್ಲೇಶ್‌ ನಾಯಕ್‌ಗೆ ಶಾರದಾನಗರದಲ್ಲಿ ಮೂರು ಮಹಡಿಯ ಕಟ್ಟಡ ಹೊಂದಿದ್ದಾರೆ. ಈ ಪೈಕಿ ಒಂದು ಮಹಡಿಯಲ್ಲಿ ಮಲ್ಲೇಶ್‌, ಮತ್ತೂಂದರಲ್ಲಿ ನಾರಾಯಣ ವಾಸವಾಗಿದ್ದರು. ಮತ್ತೂಂದು ಮಹಡಿಯ ಮನೆಯನ್ನು ಬಾಡಿಗೆ ನೀಡಲಾಗಿದೆ.

ಈ ಮಧ್ಯೆ ಮಲ್ಲೇಶ್‌, ಪತ್ನಿ ಕೌಟುಂಬಿಕ ವಿಚಾರವಾಗಿ ದೂರವಾಗಿದ್ದು, ಬೇರೆ ಊರಿನಲ್ಲಿ ಮಕ್ಕಳ ಜತೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಹೀಗಾಗಿ ಗಣೇಶ್‌, ಮಲ್ಲೇಶ್‌ ಮನೆಯಲ್ಲಿ ಮದ್ಯದ ಪಾರ್ಟಿ ಮಾಡಿಕೊಂಡು ಅಲ್ಲೇ ಮಲಗುತ್ತಿದ್ದ. ಈ ವಿಚಾರ ತಿಳಿದ ನಾರಾಯಣ ನಾಯಕ್‌, ಗಣೇಶ್‌ಗೆ ಮತ್ತೂಮ್ಮೆ ಸಹೋದರನ ಮನೆಗೆ ಬರದಂತೆ ಎಚ್ಚರಿಕೆ ನೀಡಿದ್ದ ಎಂಬುದು ಗೊತ್ತಾಗಿದೆ.

ಆರೋಪಿ ನಾರಾಯಣ ನಾಯಕ್‌ ಆಟೋ ಚಾಲಕನಾಗಿದ್ದು, ತಾತಗುಣಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾನೆ. ಆದರೂ ಆಗಾಗ್ಗೆ ಶಾರಾದನಗರದಲ್ಲಿರುವ ಸ್ವಂತ ರಾತ್ರಿ ವೇಳೆ ಮಲಗುತ್ತಿದ್ದ. ಎಚ್ಚರಿಕೆ ನಡುವೆಯೂ ಗಣೇಶ್‌, ಭಾನುವಾರ ರಾತ್ರಿ ಮದ್ಯ ಸೇವಿಸಿ ಮಲ್ಲೇಶ್‌ ಮನೆಯಲ್ಲಿ ಮಲಗಿದ್ದ. ಮಲ್ಲೇಶ್‌ ಬೇರೊಂದು ಕೋಣೆಯಲ್ಲಿ ಮಲಗಿದ್ದ. ಮತ್ತೂಂದೆಡೆ ಮದ್ಯ ಸೇವಿಸಿ ಮನೆಗೆ ಬಂದಿದ್ದ ನಾರಾಯಣ ನಾಯಕ್‌, ಸಹೋದರ ಮಲ್ಲೇಶ್‌ ಜತೆ ಜಗಳ ತೆಗೆದಿದ್ದಾನೆ. ಆಗ ಗಣೇಶ್‌ ಮಧ್ಯ ಪ್ರವೇಶಿಸಿದ್ದು, ಗಲಾಟೆ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ನಾರಾಯಣ ನಾಯಕ್‌ ಕಬ್ಬಿಣದ ರಾಡ್‌ ನಿಂದ ಗಣೇಶ್‌ ತಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next