Advertisement

ಬೆಂಗಳೂರು: ತಾಯಿ ಜತೆ ಆತ್ಮೀಯವಾಗಿದ್ದ ಬಾಣಸಿಗನನ್ನು ಯುವಕನೋರ್ವ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಹೊನ್ನಾವರ ರವಿ ಭಂಢಾರಿ (44) ಕೊಲೆಯಾದ ಬಾಣಸಿಗನ. ಆರೋಪಿ ಗೋಪಾಲಪುರ ನಿವಾಸಿ ರಾಹುಲ್‌ ಎಂಬಾತನ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಹೊನ್ನಾವರದಲ್ಲಿ ಪತ್ನಿ, ಮಗನ ಜತೆಗಿದ್ದ ರವಿ ಭಂಡಾರಿ ವಿಪರೀತ ಮದ್ಯ ವ್ಯಸನಿಯಾಗಿದ್ದ. ಆತನನ್ನು ದೊಡ್ಡಪ್ಪನ ಪುತ್ರ ಸುರೇಶ್‌ ಭಂಡಾರಿ ಬಸವೇಶ್ವರ ನಗರದಲ್ಲಿರುವ ತಮ್ಮ ಪಿಜಿಗೆ ಕರೆದುಕೊಂಡು ಬಂದಿದ್ದು, ಇಲ್ಲಿಯೇ ಅಡುಗೆ ಕೆಲಸ ಮಾಡಿಕೊಂಡಿದ್ದ. ಈ ಮಧ್ಯೆ ಪಿಜಿಯಲ್ಲಿ ಸಹಾಯಕಿಯಾಗಿರುವ ಪದ್ಮಾವತಿ ಎಂಬವರ ಜತೆ ಆತ್ಮೀಯವಾಗಿದ್ದ ಎಂದು ಹೇಳಲಾಗಿದೆ. ಈ ವಿಚಾರ ತಿಳಿದ ಪದ್ಮಾವತಿಯ ಪುತ್ರ ರಾಹುಲ್‌ ಶುಕ್ರವಾರ ಸಂಜೆ ಮಾತನಾಡಬೇಕೆಂದು ಮನೆಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಚಾಕುವಿನಿಂದ ಎದೆ ಹಾಗೂ ಇತರ ಭಾಗಗಳಿಗೆ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next