Advertisement

ಮಾಸ್ಕ್, ಸ್ಯಾನಿಟೈಸರ್‌ ಹಸ್ತಾಂತರ

03:55 PM Jul 10, 2021 | Team Udayavani |

ಬೆಂಗಳೂರು: ಎಸ್ಸೆಸ್ಸೆಲ್ಲಿ ಪರೀಕ್ಷೆಯು ಸುರಕ್ಷಿತ ವಾತಾವರಣದಲ್ಲಿ ನಡೆಸಲು ಭಾರತ್‌ಸ್ಕೌಟ್ಸ್‌ ಮತ್ತು ಗೈಡ್ಸ್‌, ಯುತ್‌ ಫಾರ್‌ ಸೇವಾ ಸೇರಿ ಹಲವು ಸಂಘ ಸಂಸ್ಥೆಗಳು ಮಾಸ್ಕ್,ಸ್ಯಾನಿಟೈಸರ್‌ಗಳನ್ನುಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ನೀಡಿವೆ.

Advertisement

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯು ಪರೀಕ್ಷಾರ್ಥಿಗಳಿಗೆ ಬಟ್ಟೆಯಿಂದ ಮಾಡಿದಮಾಸ್ಕ್ ಮತ್ತು ಸಿಬ್ಬಂದಿಗೆ ಎನ್‌-95 ಮಾಸ್ಕ್ ನೀಡಿದರು.

ಯೂತ್‌ ಫಾರ್‌ ಸೇವಾ ಸಂಸ್ಥೆ1.10 ಲಕ್ಷ ಎನ್‌-95 ಮಾಸ್ಕ್ಗಳನ್ನು, ರೋಟರಿ ಇಂಟರ್‌ನ್ಯಾಷನಲ್‌ ಸಂಸ್ಥೆ 1.34 ಲಕ್ಷಎನ್‌-95 ಮಾಸ್ಕ್ಗಳನ್ನು, ಅಡ್ವಾನ್ಸಡ್‌ ಎಜುಕೇಷನಲ್‌ ಸರ್ವೀಸಸ್‌ ಮತ್ತು ರೈನ್‌ಬೋಮಕ್ಕಳ ಆಸ್ಪತ್ರೆಯವರು ಮೂರು ಪದರದ 1 ಲಕ್ಷ ಸರ್ಜಿಕಲ್‌ ಮಾಸ್ಕ್ಗಳು, ಎಂಬೆಸ್ಸಿಗ್ರೂಪ್‌ ಸಂಸ್ಥೆ 10 ಲಕ್ಷ ರೂ. ಮೌಲ್ಯದ ಸ್ಯಾನಿಟೈಸರ್‌ಗಳನ್ನು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಮೂಲಕ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಹಸ್ತಾಂತರಿಸಿವೆ.

ಈವೇಳೆ ಭಾರತ್‌ ಸ್ಕೌಟ್‌ ಮತ್ತು ಗೈಡ್ಸ್‌ನ ಮುಖ್ಯ ಆಯುಕ್ತ ಪಿ.ಜಿ.ಆರ್‌.ಸಿಂಧ್ಯಾ,ಮಂಡಳಿಯ ನಿರ್ದೇಶಕಿ ವಿ.ಸುಮಂಗಳಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next