Advertisement

ಬೆಂಗಳೂರು ಸೆಂಟ್ರಲ್‌; ತ್ಯಾಜ್ಯ,ಸಂಚಾರ ದಟ್ಟಣೆ ನಿತ್ಯ ನರಕ

02:04 AM Mar 03, 2019 | Team Udayavani |

ಬೆಂಗಳೂರು: “ಮಿನಿ ಇಂಡಿಯಾ’ ಖ್ಯಾತಿಯ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಮತ್ತೂಂದು ಚುನಾವಣೆ ಎದುರಾಗಿದೆ. ಕಳೆದ ಐದು ವರ್ಷಗಳಲ್ಲಿ ಆಗಿರುವ ಸಾಧನೆ ಹಾಗೂ ಬಗೆಹರಿಯದ ಸಮಸ್ಯೆಗಳು ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿವೆ.

Advertisement

ಒಂದೆಡೆ, ಕೊಳಗೇರಿಗಳು ಹೆಚ್ಚಾಗಿರುವ ಹಾಗೂ ತ್ಯಾಜ್ಯವಿಲೇವಾರಿ ಸಮಸ್ಯೆಯೇ ಸವಾಲಾಗಿರುವ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದಿಟಛಿ ವಿಚಾರದಲ್ಲಿ “ಇಲ್ಲ’ಗಳೇ ಹೆಚ್ಚು. ಮತ್ತೂಂದೆಡೆ ಮಹದೇವಪುರ, ಸರ್‌. ಸಿ.ವಿ.ರಾಮನ್‌ನಗರ ವ್ಯಾಪ್ತಿಯಲ್ಲಿ ಸೇನಾ ಇಲಾಖೆಗಳು, ಡಿಆರ್‌ಡಿಓ ಸೇರಿ ಸಂಶೋಧನಾ ಸಂಸ್ಥೆಗಳು, ಐಟಿ ಕಂಪನಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದು ಸಂಚಾರ ದಟ್ಟಣೆ ಆ ಭಾಗದ ನಿತ್ಯ ನಿರಂತರ ಸಮಸ್ಯೆಯಾಗಿ ಉಳಿದಿದೆ. ಮೆಟ್ರೋ ರೈಲು ಕೆಲವೆಡೆ ಸಂಚಾರ ದಟ್ಟಣೆಗೆ ಪರಿಹಾರ ಕಲ್ಪಿಸಿದೆಯಾದರೂ ಪೂರ್ಣ ಪ್ರಮಾಣದ ರಿಲೀಫ್ ಮರೀಚಿಕೆಯಾಗಿದೆ. ಸಬ್‌ ಅರ್ಬನ್‌ ರೈಲು ಯೋಜನೆಯ ಅನುಷ್ಟಾನ ಈಗಷ್ಟೇ ಘೋಷಣೆ ಯಾಗಿರುವುದರಿಂದ ಆಶಾಭಾವನೆ ಇಟ್ಟುಕೊಳ್ಳುವಂತಾಗಿದೆ. ಬೆಂಗಳೂರು ಸೆಂಟ್ರಲ್‌ ಕ್ಷೇತ್ರವನ್ನು ಬಿಜೆಪಿ ಸಂಸದ ಪಿ.ಸಿ.ಮೋಹನ್‌ ಪ್ರತಿನಿಧಿಸುತ್ತಿದ್ದು, ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಮೊದಲ ಅವಧಿಯಲ್ಲಿ 25 ಕೋಟಿ ರೂ.ಸಂಸದರ ನಿಧಿಯಲ್ಲಿ 19 ಕೋಟಿ ರೂ. ವಿನಿಯೋಗಿಸಿದ್ದರೆ ಎರಡನೇ ಅವಧಿಯಲ್ಲಿ 25 ಕೋಟಿ ರೂ. ಪೈಕಿ 24.32 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಸಮುದಾಯ ಭವನ ನಿರ್ಮಾಣ, ಉದ್ಯಾನವನ ಅಭಿವೃದ್ಧಿ, ಶಾಲಾ ಕಟ್ಟಡ, ಕುಡಿಯುವ ನೀರಿನ ಘಟಕ, ಶೌಚಾಲಯ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಲೋಕಸಭೆಯ ಅಧಿವೇಶನದಲ್ಲಿ ಪಾಲ್ಗೊಳ್ಳುವಿಕೆ ಯಲ್ಲೂ ಶೇ.83ರಷ್ಟು ಹಾಜರಾತಿ ಸಂಸದರಿಗಿದೆ. ಸಬ್‌ ಅರ್ಬನ್‌ ರೈಲು ಸೇರಿ ಹಲವು ವಿಚಾರಗಳನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ಕ್ಷೇತ್ರವ್ಯಾಪ್ತಿ
ಕ್ಷೇತ್ರದ ವ್ಯಾಪ್ತಿಗೆ ಎಂಟು ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಸಂಸದರು, ಶಾಸಕರು, ಮಹಾನಗರ ಪಾಲಿಕೆ ಸದಸ್ಯರ ನಡುವೆ ಸಮನ್ವಯತೆಯ ಕೊರತೆಯೂ ಇರುವುದರಿಂದ ಅಭಿವೃದ್ಧಿಯಲ್ಲಿ ಹಿನ್ನಡೆಯುಂಟಾಗಿದೆ. ಜತೆಗೆ, ಸಂಸದರು ಕ್ಷೇತ್ರದಲ್ಲಿ ಹೆಚ್ಚು ಸಂಪರ್ಕಕ್ಕೆ ಸಿಗುವುದಿಲ್ಲ ಎಂಬ ಅಸಮಾಧಾನವೂ ಇದೆ.

ಸಂಸದರ ಆದರ್ಶ ಗ್ರಾಮ
ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಕಣ್ಣೂರು ಗ್ರಾಮ ಪಂಚಾಯಿತಿಯ ಯರಪ್ಪನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿ ಕೊಂಡಿದ್ದು, ಇಲ್ಲಿ ಶೌಚಾಲಯ, ನೀರಿನ ಟ್ಯಾಂಕ್‌, ಶುದಟಛಿ ಕುಡಿಯುವ ನೀರಿನ ಘಟಕ, ರಂಗಮಂದಿರ, ಸಮುದಾಯ ಭವನ ನಿರ್ಮಿಸಲಾಗಿದೆ ಎಂದು ಸಂಸದರು ಹೇಳುತ್ತಾರೆ. ಆದರೆ, ನಿರ್ವ ಹಣಾ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬ ದೂರು ಸ್ಥಳೀಯರದ್ದು.

ದೊಡ್ಡ ಮಟ್ಟದ ಯೋಜನೆಗಳೇ ಇಲ್ಲ
ಮೋಹನ್‌ ಅವರು ಕಳೆದ ಹತ್ತು ವರ್ಷಗಳಿಂದ ಸಂಸದರಾಗಿ ಕ್ಷೇತ್ರದಲ್ಲಿ ಶಾಶ್ವತವಾಗಿ ಜನರ ನೆನಪಿನಲ್ಲಿ ಉಳಿಯುವಂತಹ ಯೋಜನೆ ರೂಪಿಸಿಲ್ಲ.ಕೇಂದ್ರದಲ್ಲಿ ಐದು ವರ್ಷ ಬಿಜೆಪಿಯದೇ ಸರ್ಕಾರ ಇದ್ದರೂ ದೊಡ್ಡ ಮಟ್ಟದ ಯೋಜನೆಗಳನ್ನು ಕ್ಷೇತ್ರಕ್ಕೆ ತರಲಿಲ್ಲ. ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಐಟಿ ವಲಯದ ಬೇಡಿಕೆಗೆ ಸ್ಪಂದಿಸಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಡಯಾಲಿಸಿಸ್‌ ಕೇಂದ್ರ ತೆರೆಯುವ ಭರವಸೆ ಈಡೇರಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಬೆಂಗಳೂರು ಅಭಿವೃದಿಟಛಿಗೆ ಒತ್ತು ನೀಡುವ ಹಲವು ಘೋಷಣೆಗಳನ್ನು ಮಾಡಲಾಗಿತ್ತು. ಆದರೆ, ಅದು ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ರಸ್ತೆಗಳ ಅಭಿವೃದ್ಧಿ ಆಯ್ದ ಪ್ರದೇಶಗಳಿಗಷ್ಟೇ ಸೀಮಿತವಾಗಿದೆ ಎಂಬ ಅಸಮಾಧಾನಗಳು ಕ್ಷೇತ್ರದ ಜನರಲ್ಲಿವೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ನಾಯಕರು, ಮೂಲಭೂತ ಸೌಕರ್ಯಗಳ ಕೊರತೆಯನ್ನೇ ಚುನಾವಣಾ ಅಸ್ತ್ರವನ್ನಾಗಿಸಲು ಮುಂದಾಗಿವೆ.

Advertisement

ಅನುದಾನ ಬಳಕೆ 2014ರಿಂದ 19: 25 ಕೋಟಿ ರೂಪಾಯಿ

ಅನುದಾನದಲ್ಲಿ 24.32 ಕೋಟಿ ರೂಪಾಯಿ ವೆಚ್ಚ
ಸಂಸತ್‌ನಲ್ಲಿ ಹಾಜರಾತಿ ಶೇ.83

ಒಬ್ಬ ಸಂಸದನಾಗಿ ಶಾಸನಸಭೆಯಲ್ಲಿ ನನ್ನ ಕ್ಷೇತ್ರದ ಜನರ ಧ್ವನಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ಜನರಿಗೆ ನೆರವಾಗಿರುವ ಎಲ್ಲ ಕೆಲಸಗಳೂ ನನ್ನ ಪಾಲಿಗೆ ಪ್ರಮುಖ ಸಾಧನೆಗಳೇ ಸರಿ. ಸಬ್‌ ಅರ್ಬನ್‌ ರೈಲು ವಿಚಾರದಲ್ಲಿ ನಿರಂತರವಾಗಿ ಲೋಕಸಭೆಯ ಒಳಗೆಹಾಗೂ ಹೊರಗೆ ಧ್ವನಿ ಎತ್ತುತ್ತಲೇ ಬಂದಿದ್ದೇನೆ. ಸಂಸದರ ಪ್ರದೇಶಾಭಿವೃದ್ಧಿ   ನಿಧಿಯಲ್ಲಿ 3.01 ಕೋಟಿ ರೂ.ವೆಚ್ಚದಲ್ಲಿ ಹೂಡಿಯಲ್ಲಿ ರೈಲು ನಿಲ್ದಾಣ ಸ್ಥಾಪಿಸಲು ಶ್ರಮಿಸಿದ್ದೇನೆ.
● ಪಿ.ಸಿ.ಮೋಹನ್‌, ಸಂಸದ

ಎನ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next