ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
Advertisement
ಭಟ್ಕಳ ಮೂಲದ ಶರೀಫ್ ಹಸನ್ ಮಸೂರಿ ಅಲಿಯಾಸ್ ಮೆಸ್ಸಿ(35) ಬಂಧಿತ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಕೊಂಡಿದ್ದ. ಆದರೆ, ಮೆಸ್ಸಿ 2018ರಲ್ಲಿ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದ ಆರೋಪಿಗಳಾದ ಪ್ರತೀಕ್ ಶೆಟ್ಟಿ ಸೇರಿ ಇಬ್ಬರು ವಿದೇಶಿ ಪ್ರಜೆಗಳ ಜತೆ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಸ್ಯಾಂಡಲ್‌ವುಡ್ ಡ್ರಗ್ಸ್ ಆರೋಪಿಗಳ ಜತೆ ಸಂಪರ್ಕ: ಬೆಂಗಳೂರಿನಲ್ಲಿ ನಡೆಯುತ್ತಿದ್ದ ಐಷಾರಾಮಿ ಪಾರ್ಟಿಗಳನ್ನು ಮೆಸ್ಸಿಯೇ ಆಯೋಜಿಸು
ತ್ತಿದ್ದ. ಈ ಪಾರ್ಟಿಗಳಿಗೆ ಬರುತ್ತಿದ್ದ ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕಾರಣಿಗಳ ಮಕ್ಕಳಿಗೆ ಡ್ರಗ್ಸ್ ಪೆಡ್ಲರ್‌ಗಳ ಮೂಲಕ ಮಾದಕ ವಸ್ತುಗಳಾದ ಕೋಕೇನ್, ಗಾಂಜಾ, ಎಂಡಿಎಂಎ ಹಾಗೂ ಇತರೆ ಐಷಾರಾಮಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ.
Related Articles
Advertisement
ಆರೋಪಿ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಗಳ ಎಲ್ಲ ಆರೋಪಿಗಳ ಜತೆ ಸಂಪರ್ಕದಲ್ಲಿರುವ ಮಾಹಿತಿ ಸಿಕ್ಕಿದ್ದು, ಅವರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳು ಲಭ್ಯವಾಗಿದೆ. ರಾಗಿಣಿ,ಸಂಜನಾ ಗಲ್ರಾನಿ ಮತ್ತು ಆಫ್ರಿಕಾದ ಲೂಮ್ ಪೆಪ್ಪರ್ ಸಾಂಬಾ ಹಾಗೂ ಆದಿತ್ಯಾ ಆಳ್ವ, ರವಿ
ಶಂಕರ್ ಇತರೆ ಆರೋಪಿಗಳ ಜತೆ ಸಂಪರ್ಕದಲ್ಲಿದ್ದ. ಮುಖ್ಯವಾಗಿ ಸಂಜನಾ ಗಲ್ರಾನಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ.
ಆರೋಪಿ ಪ್ರಕರಣದಲ್ಲಿ ತನ್ನ ಸ್ನೇಹಿತರು ಬಂಧನವಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ. ಆದರೆ, ಸಿಸಿಬಿ ಪೊಲೀಸರು ಇತ್ತೀಚೆಗೆ ಸಲ್ಲಿಸಿದ ಆರೋಪಪಟ್ಟಿಯಲ್ಲೂ ಆತನ ಹೆಸರು ಉಲ್ಲೇಖಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. 2018ರ ಪ್ರಕರಣದಲ್ಲಿ ಭಾಗಿ: ಸ್ಯಾಂಡಲ್‌ವುಡ್ ಪ್ರಕರಣದಲ್ಲಿ ಆರೋಪಿ ಪಾತ್ರ ಖಚಿತವಾಗಿತ್ತು. ಆದರೆ, ಆರೋಪಿ ನಿರೀಕ್ಷಣಾ ಜಾಮೀನು
ಪಡೆದುಕೊಂಡಿದ್ದ. ಈತನ ಬಗ್ಗೆ ತನಿಖೆ ನಡೆಸುವಾಗ 2018ರ ಪ್ರಕರಣದ ಆರೋಪಿಗಳಿಗೆ ಡ್ರಗ್ಸ್ ಪೂರೈಕೆ ಮಾಡಿರುವುದು, ಪ್ರತೀಕ್ ಶೆಟ್ಟಿ
ಹಾಗೂ ಇಬ್ಬರು ವಿದೇಶಿ ಪ್ರಜೆಗಳ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನುಬಂಧಿಸಲಾಗಿದೆ ಎಂದು ಸಿಸಿಬಿಪೊಲೀಸರು
ಹೇಳಿದರು. ಡ್ರಗ್ಸ್ ಪೆಡ್ಲರ್‌ಗಳ ಮುಖ್ಯಸ್ಥ ಮೆಸ್ಸಿ ನಗರದಲ್ಲಿದ್ದ ಸ್ಥಳೀಯ ಪೆಡ್ಲರ್‌ಗಳು ಮತ್ತು ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್‌ಗಳನ್ನು ಮಾಸಿಕ ಇಂತಿಷ್ಟು ಹಣ ನಿಗದಿ ಮಾಡಿ ನೇಮಿಸಿಕೊಂಡಿದ್ದ. ಹೀಗಾಗಿ ಈತನನ್ನು ಡ್ರಗ್ಸ್ ಪೆಡ್ಲರ್‌ಗಳ ಮುಖ್ಯಸ್ಥ ಎಂದು ಕರೆಯುತ್ತಿದ್ದರು. ತಾನೂ ಆಯೋಜನೆ ಮಾಡುತ್ತಿದ್ದ ಪಾರ್ಟಿಗಳಿಗೆ ಅವರಿಂದ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ನೋಡಲು ಸ್ಮಾರ್ಟ್ ಆಗಿದ್ದರಿಂದ ಡ್ರಗ್ಸ್ ಪಡೆಯುತ್ತಿದ್ದ ಕೆಲವರು ಈತನನ್ನು ಮೆಸ್ಸಿ ಎಂದು ಕರೆಯುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ