Advertisement

ಬೆಂಗಳೂರು –ಬೆಳಗಾವಿ ರೈಲಿಗೆ ಸುರೇಶ ಅಂಗಡಿ ಹೆಸರಿಡಿ: ನಿರಾಣಿ

05:27 PM Sep 25, 2020 | sudhir |

ಬೀಳಗಿ: ರೈಲ್ವೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಒಂದೇ ವಾರದಲ್ಲಿ ಸುರೇಶ ಅಂಗಡಿ ಅವರು ಬೆಂಗಳೂರು-ಬೆಳಗಾವಿ ಮಧ್ಯೆ ಹೊಸ ರೈಲು ಆರಂಭಿಸಿದ್ದಾರೆ. ಈ ಹೊಸ ರೈಲು ಆರಂಭವಾದ ಮೊದಲ ದಿನ ನಾನು ಮತ್ತು ಅಂಗಡಿ ಅವರು ಕೂಡಿ ಪ್ರವಾಸ ಮಾಡಿದ್ದೆವು. ಕಾರಣ ಈ ಹೊಸ ರೈಲಿಗೆ “ಸುರೇಶ ಅಂಗಡಿ ಎಕ್ಸಪ್ರಸ್‌’ ನಾಮಕರಣ ಮಾಡಬೇಕೆಂದು ಸದನದಲ್ಲಿ ಒತ್ತಾಯಿಸಿರುವುದಾಗಿ ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಗುರುವಾರ ಸದನದಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಈ ಕುರಿತು ಮಾತನಾಡಿದ್ದೇನೆ. ಹೊಸದಾಗಿ ಆರಂಭವಾದ ರೈಲಿನಲ್ಲಿ ಸಚಿವ ಅಂಗಡಿ ಅವರೊಂದಿಗೆ ಪ್ರವಾಸ ಮಾಡಿದ ಮತ್ತು ಚರ್ಚಿಸಿದ ವಿಷಯಗಳನ್ನು ಸ್ಮರಿಸಿಕೊಂಡಾಗ ಬದಿಗೆ ಕುಳಿತ ಗೆಳೆಯನೊಬ್ಬ ಚಟ್ಟನೆ ಎದ್ದು ಹೋದಂತೆ ನೋವಾಗುತ್ತಿದೆ. ಬೆಂಗಳೂರು- ಬೆಳಗಾವಿ ಹೊಸ ರೈಲು ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 6ಕ್ಕೆ ಬೆಳಗಾವಿ ತಲುಪುತ್ತದೆ. ಬೆಳಗಾವಿಯಿಂದ ಬೆಳಗ್ಗೆ 6 ಗಂಟೆಗೆ ಬಿಟ್ಟ ರೈಲು ಸಂಜೆ 8ಕ್ಕೆ ಬೆಂಗಳೂರು ತಲುಪುತ್ತದೆ. ಈ ಹೊಸ ರೈಲಿಗೆ “ಸುರೇಶ ಅಂಗಡಿ ಎಕ್ಸಪ್ರಸ್‌’ ರೈಲು ಎಂದು ನಾಮಕರಣ ಮಾಡಲು ಸೂಚನೆ ಮಾಡಿರುವುದಕ್ಕೆ ಸದನದಲ್ಲಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬೆಳಗಾವಿಯ ಕೆಲ ಸಂಘಟನೆಗಳು ಕೂಡ ಈ ಪ್ರಸ್ತಾಪವನ್ನು ಹಾರ್ದಿಕವಾಗಿ ಸ್ವಾಗತಿಸಿವೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next