ದೇವನಹಳ್ಳಿ: ಜಿಲ್ಲೆಯಲ್ಲಿ ಈವರೆಗೂ ಒಟ್ಟು 14 ಕೋವಿಡ್ 19 ಸೋಂಕಿತ ಪ್ರಕರಣಗಳಿದ್ದು, ವಾರದಲ್ಲೇ 9 ಸೋಂಕಿತ ಪ್ರಕರಣಗಳು ಹೆಚ್ಚಿವೆ. ಹೊರ ಜಿಲ್ಲೆ ಹಾಗೂ ಅನ್ಯ ರಾಜ್ಯದ ವಲಸಿಗರನ್ನು ಹೊರತು ಪಡಿಸಿ ಸ್ಥಳೀಯ ರಲ್ಲಿಯೇ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜಿಲ್ಲೆಯ ಜನರ ಆತಂಕ ಹೆಚ್ಚಿಸಿದೆ. ದೊಡ್ಡಬಳ್ಳಾಪುರ 06, ಹೊಸಕೋಟೆ 05, ನೆಲಮಂಗಲ 02 ಹಾಗೂ ದೇವನಹಳ್ಳಿಯಲ್ಲಿ 1 ಪ್ರಕರಣ ಕಂಡು ಬಂದಿದ್ದು, ಒಟ್ಟು 14 ಪ್ರಕರಣಗಳಿವೆ. ಪ್ರಸ್ತುತ ಮುಂಬೈ ಇನ್ನಿತರೆ ಕಡೆಗಳಿಂದ ಬಂದವರಿಗೆ ಮಾತ್ರ ಕಾಣಿಸಿಕೊಂಡಿದೆ.
ಸೋಂಕು ಕಾಣಿಸಿಕೊಂಡಿರುವ ಕಡೆಗಳಲ್ಲಿ ಈಗಾಗಲೇ ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ದೇವನಹಳ್ಳಿ ತಾಲೂಕಿನಲ್ಲಿ ಇಲ್ಲತೊರೆ ಗ್ರಾಮದ ವ್ಯಕ್ತಿ ಯಿಂದ ಮೊದಲ ಸೋಂಕು ಕಾಣಿಸಿಕೊಂಡಿತ್ತು. ಜಿಲ್ಲಾಡಳಿತ ಕೋವಿಡ್ 19 ತಡೆಗಟ್ಟಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಕೋವಿಡ್ 19 ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ.
ಜಿಲ್ಲೆಯಲ್ಲಿನ ಐಸೋಲೇಷನ್ ಕೇಂದ್ರಗಳು: ದೇವನಹಳ್ಳಿ ಆಕಾಶ್ ಆಸ್ಪತ್ರೆ, ದೇವನಹಳ್ಳಿ ತಾಲೂಕು ಆಸ್ಪತ್ರೆ, ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆ, ನೆಲಮಂಗಲದ ತಾಲೂಕು ಆಸ್ಪತ್ರೆ, ಶ್ರೀಧರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಹೊಸಕೋಟೆ ಎಂವಿಜೆ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಐಸೋಲೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಸಂಗ್ರಹಿಸಲಾದ ಮಾದರಿ ಸಂಖ್ಯೆ: 2006 ಪಾಸಿಟಿವ್ 26, ನೆಗಟಿವ್ 1791, ಫಲಿತಾಂಶ ಬರಬೇಕಾಗಿರುವುದು 199, ಕಡ್ಡಾಯ ದಿಗ್ಬಂ ಧನಕ್ಕೆ ಒಳಗಾಗಿಸಿದವರ ವಿವರ 791 ಮಂದಿ, 28 ದಿನಗಳ ಕಡ್ಡಾಯ ದಿಗ್ಬಂಧನ ಗೃಹ ಬಂಧನ 228, ಆಸ್ಪತ್ರೆ, ಸಂಸ್ಥೆಯಲ್ಲಿ ಕ್ವಾರಂ ಟೈನ್‌ಗೆ ಒಳಪಟ್ಟಿರುವ ಸಂಖ್ಯೆ 150 ಮಂದಿ, 28 ದಿನಗಳ ಕಡ್ಡಾಯ ದಿಗ್ಬಂಧನಕ್ಕೆ ಪೂರ್ಣ ಗೊಳಿಸಿದವರ ಸಂಖ್ಯೆ 136,
ಪ್ರಸ್ತುತ ವೀಕ್ಷಣೆ ಯಲ್ಲಿ ಇರು ವವರ ವಿವರ 286 ಮಂದಿಯಿದ್ದಾರೆ. ಮನೆಯಲ್ಲಿ ಕ್ವಾರಂಟೈನ್ ತಾಲೂಕುವಾರು: ದೇವನಹಳ್ಳಿ 146, ದೊಡ್ಡಬಳ್ಳಾಪುರ 119, ನೆಲಮಂಗಲದ 123, ಹೊಸಕೋಟೆ 136 ಒಟ್ಟು 524 ಮಂದಿ ಇದ್ದು ಅವರ ಮೇಲೆ ನಿಗಾ ವಹಿಸಲಾಗಿದೆ. ರೋಗಿ ಸಂಖ್ಯೆ 1,686 ಉಸಿರಾಟದ ತೊಂದರೆಯಿಂದಾಗಿ ಸಾವನ್ನಪ್ಪಿ ದ್ದಾರೆ. ಒಟ್ಟು 5 ಜನರು ಗುಣ ಮುಖರಾಗಿದ್ದಾರೆ.
ಜಿಲ್ಲಾಡಳಿತದಿಂದ ಕೋವಿಡ್ 19 ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರದ ಪ್ರತಿಯೊಂದು ಆದೇಶ ಪಾಲಿಸಲಾಗುತ್ತಿದೆ. ಸೋಂಕಿತರು ಪತ್ತೆಯಾದ ಕೂಡಲೇ ವಿಕ್ಟೋರಿಯಾ ಆಸ್ಪತ್ರೆ ಹಾಗೂ ರಾಜೀವ್ ಗಾಂಧಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಸ್ಥಿರವಾಗಿದೆ.
-ಪಿ.ಎನ್. ರವೀಂದ್ರ , ಜಿಲ್ಲಾಧಿಕಾರಿ
ಸೋಂಕಿತರು ಪತ್ತೆಯಾದರೆ ಸರ್ಕಾರ ಮಾರ್ಗಸೂಚಿ ಅನ್ವಯ ಜಿಲ್ಲಾ ಆರೋಗ್ಯ ಇಲಾಖೆ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ. ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗುತ್ತಿದೆ. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.
-ಡಾ.ಮಂಜುಳಾ ದೇವಿ, ಜಿಲ್ಲಾ ಆರೋಗ್ಯಾಧಿಕಾರಿ