Advertisement
ಬಂದ್ ಹಿನ್ನಲೆಯಲ್ಲಿ ಶಾಲಾ, ಕಾಲೇಜುಗಳು, ಸಿನೆಮಾ ಮನೆಗಳು, ವ್ಯಾಪಾರ ವಹಿವಾಟು, ಸಾರಿಗೆ ಹಾಗೂರೈಲು ಮತ್ತು ಇತರೆ ಎಲ್ಲ ಚಟುವಟಿಕೆಗಳು ಎಂದಿನಂತೆ ನಡೆದವು. ಯಾವುದೇ ಹಂತದಲ್ಲೂ ಕಲಬುರಗಿಯಲ್ಲಿ ಬಂದ್
ನಡೆಯುತ್ತಿದೆ ಎನ್ನುವುದು ಗಮನಕ್ಕೆ ಬರದೇ ಇರುವಷ್ಟು ಜನಜೀವನ ಹಾಗೂ ವ್ಯಾಪಾರ ವಹಿವಾಟು ಸಹಜವಾಗಿತ್ತು.
ಆದರೂ, ಕರವೇ, ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಗಳ ಸದಸ್ಯರು
ಮಾತ್ರವೇ ರಸ್ತೆಗಿಳಿದು ಬಂದ್‌ಗೆ ಬೆಂಬಲಿಸಿ ಪ್ರತ್ಯೇಕವಾಗಿ ಪ್ರತಿಭಟನೆ ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಿವೆ. ಕರವೇಯ ಮಂಜುನಾಥ ನಾಲವಾರಕರ್, ಕರ್ನಾಟಕ ನವ ನಿರ್ಮಾಣ ಸೇನೆಯ ರವಿ ದೇಗಾಂವ, ಪ್ರಶಾಂತ ಮಠಪತಿ, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಆನಂದಕುಮಾರ ತೆಗನೂರ ಹೋರಾಟ ಮಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಿರುವುದು ಒಕ್ಕೂಟ ವ್ಯವಸ್ಥೆಗೆ ಶೋಭೆಯಲ್ಲ. ಕೇಂದ್ರ ಸರ್ಕಾರ ಸಹ ಬೆಂಕಿಗೆ ತುಪ್ಪ ಸುರಿಯುವ ಮೂಲಕ ವಿವಾದ ಪರಿಹಾರವಾಗದೇ ಇರುವಂತೆ ನೋಡಿಕೊಳ್ಳುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ರಾಜ್ಯಕ್ಕೆ ತನ್ನ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಬಂದ್‌ಗೆ ನೈತಿಕ ಬೆಂಬಲ: ಪ್ರತ್ಯೇಕ ಪ್ರತಿಭಟನೆ
ಆಳಂದ: ಕಳಸಾ ಬಂಡೂರಿ ಯೋಜನೆ ಹಾಗೂ ಮಹಾದಾಯಿ ನದಿ ನೀರು ಹಂಚಿಕೆ ವಿಷಯ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಕರೆ ನೀಡಲಾಗಿದ್ದ ಬಂದ್ ಕರೆಗೆ ಇಲ್ಲಿನ ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನೈತಿಕವಾಗಿ ಬೆಂಬಲಿಸಿ, ಪಟ್ಟಣದ ಬಸ್ ನಿಲ್ದಾಣ ಹಾಗೂ ಖಜೂರಿ ಬಾರ್ಡ್‌ರ ಹೆದ್ದಾರಿ ತಡೆದು ಪ್ರತ್ಯೇಕ ಪ್ರತಿಭಟನೆ ನಡೆಸಿದರು. ಇದರಿಂದ ದಿನದ ವಹಿವಾಟಿಕೆಗೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ಎಂದಿನಂತೆ ವಾರದ ಗುರುವಾರ ಸಂತೆ ಪಟ್ಟಣದಲ್ಲಿ ನಡೆಯಿತು. ಬೆಳಗಿನ ಜಾವ ನಾಗರಿಕರು ಮತ್ತು ವ್ಯಾಪಾರಿಗಳಲ್ಲಿ ಗೊಂದಲ ಉಂಟಾಗಿತ್ತು. ನೆಗಳಿಗೆಯಲ್ಲಿ ಪರಿಸ್ಥಿತಿ ಯಥಾವತ್ತಾಗಿ ಸಾಗಿದ್ದರಿಂದ ವಾಹನ ಹಾಗೂ ಜನ ಸಂಚಾರ ಎಂದಿನಂತೆ ನಡೆದಿತ್ತು.
ಪಟ್ಟಣದ ಬಸ್ ನಿಲ್ದಾಣ ಬಳಿ ನಡೆದ ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ, ನವನಿರ್ಮಾಣ ಸೇನೆ ಅಧ್ಯಕ್ಷ ರಮೇಶ ಜಗತಿ ನೇತೃತ್ವದಲ್ಲಿ ಕಾರ್ಯಕರ್ತರು ಕೆಲಕಾಲ ರಸ್ತೆ ತಡೆ ನಡೆಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ತಹಶೀಲ್ದಾರ್ ಬಸವರಾಜ ಎಂ. ಬೆಣ್ಣೆಶಿರೂರ ಭೇಟಿ ನೀಡಿ ಮನವಿ ಸ್ವೀಕರಿಸಿದರು. ನಂತರ
Related Articles
ಚಿತ್ತಾಪುರ: ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್ ನಿಮಿತ್ತ ಕರವೇ (ಶಿವರಾಮೆಗೌಡ ಸಾರಥ್ಯ) ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಲಾಡಿಜಿಂಗ್ ಕ್ರಾಸ್‌ನಿಂದ ತಹಶೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು
ಮಹದಾಯಿ, ಕಳಸಾ ಬಂಡೋರಿ ನೀರಿನ ಸಮಸ್ಯೆ ಬಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ ಪರಿಕರ್ ತಳೆದಿರುವ ನಿಲುವು ಖಂಡಿಸಿ, ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
Advertisement
ಪ್ರಧಾನಮಂತ್ರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಶೀಲ್ದಾರ್ ರವೀಂದ್ರ ದಾಮಾ ಅವರಿಗೆ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಕರವೇ ತಾಲೂಕು ಅಧ್ಯಕ್ಷ ತಾಯಣ್ಣ ತಾಂಡೂರಕರ್, ಕಾಯಾಧ್ಯಕ್ಷ ತಿಪ್ಪಣ್ಣ, ಪ್ರಧಾನ ಕಾಯದರ್ಶಿ ಸಿದ್ರಾಮ ಆಲಮೇಲ್ಕರ್, ನಗರಾಧ್ಯಕ್ಷ ರಾಜಶೇಖರ ರಾಜಾಪುರ, ಗಿರೀಶರೆಡ್ಡಿ, ಶಶಿಕಾಂತ ಭಂಡಾರಿ, ಚಂದ್ರಕಾಂತ ನಾಟೀಕಾರ್, ಸುನೀಲ ರಾಠೊಡ, ಅಂಬು ಭೋವಿ, ಶ್ರವಣ ಪವಾರ್, ಶರಣು ಯಾಧವ್, ಮಹೇಶ ಭೋವಿ, ಸಾಬು ಬೆನಕನಳ್ಳಿ, ಸದಾನಂದ ಎದರುಮನಿ, ಭೀಮಶಾ ಚೌದ್ರಿ, ಜಗು ಕರದಳ್ಳಿ ಇದ್ದರು.