Advertisement

ಬಾಂದ್ರಾ –ಕುರ್ಲಾ ನಡುವೆ ಪ್ರಯಾಣ; ಯೂಲು ಇ- ಬೈಕ್‌ ಸೇವೆ ಆರಂಭ

01:56 PM Sep 03, 2020 | Nagendra Trasi |

ಮುಂಬಯಿ ಸೆ. 2: ನವಿಮುಂಬಯಿಯಲ್ಲಿ ಯೂಲು ಇ-ಬೈಕ್‌ಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತ ಬಳಿಕ ಈಗ ಬಾಂದ್ರಾ ಮತ್ತು ಕುರ್ಲಾ ನಡುವೆಯ ಪ್ರಯಾಣಿಕರಿಗಾಗಿ ಮುಂಬಯಿ ಮೆಟ್ರೋಪಾಲಿಟನ್‌ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ)ವು ಯುಲು ಇ- ಬೈಕ್‌ ಸೌಲಭ್ಯವನ್ನು ಪ್ರಾರಂಭಿಸಿದೆ.

Advertisement

ಸೋಮವಾರ ಎಂಎಂಆರ್‌ಡಿಎ ಆಯುಕ್ತ ಆರ್‌. ಎ. ರಾಜೀವ್‌ ಉಪಸ್ಥಿತಿಯಲ್ಲಿ ಈ ಸೌಲಭ್ಯವನ್ನು ಉದ್ಘಾಟಿಸಲಾಯಿತು. ಈ ವೇಳೆ ಮಾತನಾಡಿದ ಎಂಎಂಆರ್‌ಡಿಎ ಆಯುಕ್ತ ಆರ್‌. ಎ. ರಾಜೀವ್‌ ಅವರು, ಪ್ರತಿದಿನ ಸುಮಾರು ಮೂರು ಲಕ್ಷ ಪ್ರಯಾಣಿಕರು ಬಾಂದ್ರಾ ಮತ್ತು ಕುರ್ಲಾ ನಿಲ್ದಾಣಗಳಲ್ಲಿ
ಇಳಿಯುತ್ತಾರೆ. ಇವರಲ್ಲಿ ಸುಮಾರು ಶೇ.75 ಮಂದಿಯು ರಿಕ್ಷಾಗಳನ್ನು ಬಳಸಿಕೊಂಡು ಬಾಂದ್ರಾ-ಕುರ್ಲಾ ಸಂಕೀರ್ಣವನ್ನು ತಲುಪುತ್ತಾರೆ. ಅವರು ಈ ಬೈಕ್‌ ಸೌಲಭ್ಯದ ಲಾಭವನ್ನು ಪಡೆಯಬಹುದು ಎಂದಿದ್ದಾರೆ.

ಪ್ರಸ್ತುತ ಬಾಂದ್ರಾ ರೈಲ್ವೇ ನಿಲ್ದಾಣ ಮತ್ತು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ ಸೇರಿ 9 ಒಂಬತ್ತು ಸ್ಥಳಗಳಲ್ಲಿ ಈ ಸೌಲಭ್ಯಗಳನ್ನು ಪ್ರಾರಂಭಿಸಿದ್ದು, ಈವರೆಗೆ ಸುಮಾರು 100 ಇ-ಬೈಕ್‌ಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ 18 ಸ್ಥಳಗಳಲ್ಲಿ 500 ಇ-ಬೈಕ್‌ಗಳನ್ನು ಲಭ್ಯವಾಗುವಂತೆ ಮಾಡುವುದು ಇದರ
ಉದ್ದೇಶವಾಗಿದೆ.

ಪ್ರಸ್ತುತ ಕುರ್ಲಾ ರೈಲ್ವೇ ನಿಲ್ದಾಣದ ಬಳಿ ಇ-ಬೈಕ್‌ ನಿಲ್ದಾಣವಿಲ್ಲದಿದ್ದರೂ ಮುನ್ಸಿಪಲ್‌ ಕಾರ್ಪೊರೇಷನ್‌ ವತಿಯಿಂದ ಅಂತಹ ನಿಲ್ದಾಣವನ್ನು ಶೀಘ್ರದಲ್ಲೇ ನಿರ್ಮಿಸಲಾಗುವುದು. ಈ ಸೌಲಭ್ಯವು ಅಪ್ಲಿಕೇಶನ್‌ ಆಧಾರಿತವಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next