ಕೊಚ್ಚಿ: ಇತ್ತೀಚೆಗೆ ಮಾಲಿವುಡ್ ಸಿನಿಮಾವೊಂದಕ್ಕೆ ನೆಗೆಟಿಬ್ ರಿವ್ಯೂ ನೀಡಿದ ಕಾರಣಕ್ಕೆ ಯೂಟ್ಯೂಬರ್ಸ್ ಹಾಗೂ ವ್ಲಾಗರ್ ಗಳ ವಿರುದ್ಧ ಚಿತ್ರತಂಡವೊಂದು ದೂರು ದಾಖಲಿಸಿತ್ತು. ಇದೀಗ ಮತ್ತೊಂದು ಚಿತ್ರತಂಡ ಇಂಥದ್ಧೇ ಪ್ರಕರಣವನ್ನು ದಾಖಲಿಸಿದೆ.
ನಟ ದಿಲೀಪ್ ಹಾಗೂ ತಮನ್ನಾ ಅಭಿನಯದ ʼಬಾಂದ್ರಾʼ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾ ಮಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದಾಗಿದೆ. ಅರುಣ್ ಗೋಪಿ ನಿರ್ದೇಶನದ ಈ ಸಿನಿಮಾ ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆ ಪಡೆಯುವಲ್ಲಿ ವಿಫಲವಾಗಿದೆ. ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಿನಿಮಾ ತಾಂತ್ರಿಕವಾಗಿ ಸಿನಿಮಾ ಸದ್ದು ಮಾಡಿದ್ದು, ಸ್ಕ್ರಿಪ್ಟ್ ವಿಚಾರವಾಗಿ ನೆಗೆಟಿವ್ ಅಭಿಪ್ರಾಯವನ್ನು ಪಡೆದುಕೊಂಡಿದೆ.
ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಅಜಿತ್ ವಿನಾಯಕ ಫಿಲಂಸ್ ಸಿನಿಮಾದ ಬಗ್ಗೆ ನೆಗೆಟಿವ್ ರಿವ್ಯೂ ನೀಡಿದ್ದಕ್ಕಾಗಿ 7 ಯೂಟ್ಯೂಬ್ ವ್ಲಾಗರ್‌ಗಳ ವಿರುದ್ಧ ತಿರುವನಂತಪುರಂ ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ.
ಸಿನಿಮಾ ರಿಲೀಸ್ ಆದ ಮೂರು ದಿನಗಳಲ್ಲಿ ಯೂಟ್ಯೂಬ್ ವ್ಲಾಗರ್ಸ್ ಗಳಾದ ಅಶ್ವಂತ್ ಕೋಕ್, ಉನ್ನಿ ವ್ಲಾಗ್ಸ್, ಶಿಹಾಬ್, ಶಾಜ್ ಮೊಹಮ್ಮದ್, ಅರ್ಜುನ್, ಶಿಜಾಜ್ ಟಾಕ್ಸ್, ಮತ್ತು ಸಾಯಿ ಕೃಷ್ಣ ಸಿನಿಮಾದ ಬಗ್ಗೆ ನೆಗೆಟಿವ್ ರಿವ್ಯೂ ನೀಡಿದ್ದಾರೆ. ಇದರಿಂದ ನಮ್ಮ ಚಿತ್ರಕ್ಕೆ ಕೋಟಿ ರೂಪಾಯಿಗಳ ನಷ್ಟ ಆಗಿದೆ ಎಂದು ನಿರ್ಮಾಣ ಸಂಸ್ಥೆ ದೂರಿನಲ್ಲಿ ಹೇಳಿದೆ.
ವ್ಲಾಗರ್‌ಗಳ ಕ್ರಮಕೈಗೊಳ್ಳುವಂತೆ ತಿರುವನಂತಪುರಂ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಬೇಕು ಎಂದು ನಿರ್ಮಾಣ ಸಂಸ್ಥೆ ಒತ್ತಾಯಿಸಿದೆ ಎಂದು ಕೇರಳ ಕೌಮುದಿ ವರದಿ ಮಾಡಿದೆ.
ʼಬಾಂದ್ರಾʼ ದಲ್ಲಿ ದಿಲೀಪ್, ತಮನ್ನಾ ಲೀನಾ, ಮಮತಾ ಮೋಹನ್‌ದಾಸ್, ಡಿನೋ ಮೋರಿಯಾ, ಕಲಾಭವನ್ ಶಾಜೋನ್ ಮುಂತಾದವರು ನಟಿಸಿದ್ದಾರೆ. ನ.10 ರಂದು ಸಿನಿಮಾ ರಿಲೀಸ್ ಆಗಿದೆ.