Advertisement

ಬಂಡೀಪುರ: ಲಾರಿ ಡಿಕ್ಕಿ ಹೆಣ್ಣಾನೆ ಸಾವು ಪ್ರಕರಣ; ಲಾರಿ ಚಾಲಕ, ಕ್ಲೀನರ್ ಬಂಧನ

03:14 PM Dec 14, 2022 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮದ್ದೂರು ವಲಯದಲ್ಲಿ ಲಾರಿ ಡಿಕ್ಕಿ ಹೊಡೆದು ಹೆಣ್ಣಾನೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಹಾಗೂ ಕ್ಲೀನರ್ ಅನ್ನು ಬಂಧಿಸಲಾಗಿದೆ.

Advertisement

ತಮಿಳುನಾಡು ಮೂಲದ ಲಾರಿ ಚಾಲಕ ಅಯ್ಯಪ್ಪಸ್ವಾಮಿ, ಕ್ಲೀನರ್ ಆನಂದ್ ಬಂಧಿತ ಆರೋಪಿಗಳು.‌ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಮಿಳುನಾಡು ನೋಂದಣಿಯ ಲಾರಿ ಮಂಗಳವಾರ ರಾತ್ರಿ 8:30ರ ಸುಮಾರಿಗೆ ಅತೀ ವೇಗದಿಂದ ಬಂದ ಪರಿಣಾಮ ಸುಮಾರು 25-30 ವರ್ಷದ ಹೆಣ್ಣಾನೆ ಡಿಕ್ಕಿ ಹೊಡೆದಿದೆ. ಇದರಿಂದ ಆನೆ ಸ್ಥಳದಲ್ಲೇ ಸಾವನ್ನಪ್ಪಿತ್ತು.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅರಣ್ಯ ವೈದ್ಯ ವಾಸಿಂ ಮಿರ್ಜಾ ಸಮ್ಮುಖದಲ್ಲಿ ಆನೆ ಮೃತ ದೇಹವನ್ನು ಸುಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next