Advertisement

ಬಂಡೀಪುರ: ಆನೆ ಹೊಟ್ಟೆಗೆ ಅರೆಕಾಸಿನ ಊಟ

06:00 AM Jan 17, 2018 | Team Udayavani |

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಅಭಯಾರಣ್ಯದ ಸಾಕಾನೆಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಗುತ್ತಿಗೆಯ ಅವಧಿ ಮುಗಿದಿದ್ದರಿಂದ ಕಳೆದ ಹದಿನೈದು ದಿನಗಳಿಂದ ಸಮರ್ಪಕವಾಗಿ ಪೌಷ್ಟಿಕ ಆಹಾರವಿಲ್ಲದೆ ಸಾಕಾನೆ ಶಿಬಿರದ ಆನೆಗಳು ಸೊರಗಲಾಂಭಿಸಿವೆ. ಆಹಾರಕ್ಕಾಗಿ ಕಾಡನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಬಂಡೀಪುರದ ಶಿಬಿರದಲ್ಲಿ ಸಾಕಾನೆಗಳಾದ ಜಯಪ್ರಕಾಶ್‌, ಲಕ್ಷ್ಮೀ, ಚೈತ್ರಾ ಹಾಗೂ ಎರಡು ಮರಿಗಳು ಮತ್ತು ಕಲ್ಕೆರೆ ವಲಯದ ರಾಂಪುರ ಸಾಕಾನೆ ಶಿಬಿರದಲ್ಲಿನ 22 ಆನೆಗಳಿಗೆ ಪ್ರತಿನಿತ್ಯವೂ ಪೌಷ್ಟಿಕ ಆಹಾರವಾಗಿ ಭತ್ತದ  ಹುಲ್ಲು, ಮೊಳಕೆ ಕಾಳು, ಕಾಯಿ, ಬೆಲ್ಲ, ಹುರುಳಿ ಕಾಳನ್ನು ನಿಗದಿತ ಪ್ರಮಾಣದಲ್ಲಿ ನೀಡಲಾಗುತ್ತಿತ್ತು. ಇವುಗಳಿಗೆ ಆಹಾರ ಸರಬರಾಜು ಮಾಡುವ ಗುತ್ತಿಗೆದಾರ ಕಳೆದ ಬಾರಿ ಸರಿಯಾದ ಪ್ರಮಾಣದಲ್ಲಿ ಆಹಾರ ವಿತರಿಸಿಲ್ಲ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರಿಗೆ ಈ ಬಾರಿ ಟೆಂಡರ್‌ ನೀಡದೆ ಹೊಸದಾಗಿ ಟೆಂಡರ್‌ ಕರೆಯಲಾಗಿದೆ. ಆದರೆ ಟೆಂಡರ್‌ ಇನ್ನೂ ಅಂತಿಮವಾಗದೆ ಇರುವುದರಿಂದ ಕಳೆದ ಹದಿನೈದು ದಿನಗಳಿಂದ ಸಾಕಾನೆಗಳಿಗೆ ಪೌಷ್ಟಿಕ ಆಹಾರ ವಿತರಣೆಯಾಗುತ್ತಿಲ್ಲ.

ಬಂಡೀಪುರ ಶಿಬಿರದ 3 ಆನೆಗಳಿಗೆ ಪ್ರತಿ ತಿಂಗಳು ಒಟ್ಟು 600 ಕೆ.ಜಿ.ಭತ್ತದ ಹುಲ್ಲು, 950 ಕೆ.ಜಿ. ಭತ್ತ, 25 ಕೆ.ಜಿ ಬೆಲ್ಲ, 25 ಕೆ.ಜಿ.ಉಪ್ಪು, ಎರಡು ಮರಿಯಾನೆಗಳಿಗೆ 25 ಕೆ.ಜಿ.ಅಕ್ಕಿಯನ್ನು ಒಳಗೊಂಡ ಪೌಷ್ಟಿಕ ಆಹಾರವನ್ನು ನೀಡಬೇಕಾಗಿದೆ. ಆದರೆ ಪೌಷ್ಟಿಕ ಆಹಾರವಿಲ್ಲದ ಕಾರಣ ಆನೆಗಳು ಕಾಡಿನಲ್ಲಿ ಇರುವ ಒಣ ಮೇವು, ಪೊದೆ ಹಾಗೂ ಗಿಡ-ಗಂಟಿಗಳನ್ನೇ ತಿಂದು ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಅಲ್ಲದೆ ಶಿಬಿರದಲ್ಲಿದ್ದ 5 ಸಾಕಾನೆಗಳನ್ನು ಅರಣ್ಯ ಪ್ರದೇಶಕ್ಕೆ ಮೇಯಲು ಬಿಡಲಾಗಿದೆ.

– ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next