Advertisement

Bandipur: 65 ವರ್ಷದ ಹೆಣ್ಣಾನೆ ಮೃತ್ಯು

08:53 PM Jun 17, 2023 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದ ಚಿಕ್ಕತೋಟದಕ್ಕೆ ಶನೇಶ್ವರ ತೋಪಿನ ಬಳಿ 65 ವರ್ಷದ ಹೆಣ್ಣಾನೆ ಮೃತ ಪಟ್ಟಿದೆ.

Advertisement

ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಗಡಿ ದಾಟಿ ಬಂಡೀಪುರ ವ್ಯಾಪ್ತಿಯ ಕುಂದಕೆರೆ ವಲಯಕ್ಕೆ ಬಂದಿದ್ದ ಹೆಣ್ಣಾನೆಯೊಂದು ವಯೋ ಸಹಜವಾಗಿ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳ‌ ಹಿಂದೆ ಬಂಡೀಪುರ ಅರಣ್ಯಕ್ಕೆ ನುಸುಳಿದ್ದ ಆನೆಯು ಕುಂದಕೆರೆ ವಲಯದ ಕಡಬೂರು ಗ್ರಾಮದ ಸುತ್ತಲು ಸಂಚರಿಸುತ್ತಿರುವ ವಿಚಾರ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ದಿಕ್ಕು ತಪ್ಪಿ ಬಂದಿದ್ದ ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ ಆನೆಗೂ ಕಾಡಿಗೆ ಹಿಂದಿರುಗದೆ ಪೋತರಾಜು ಎಂಬುವವರ ಜಮೀನಿನಲ್ಲಿ ಬೀಡು ಬಿಟ್ಟಿತ್ತು. ಬಳಿಕವು ಸಹ ರಾತ್ರಿ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಚುರುಕು ಗೊಳಿಸಿದರು‌ ಸಹ ಸಫಲವಾಗಲಿಲ್ಲ. ಮರುದಿನ ಮಧ್ಯಾಹ್ನದ ವೇಳೆ ಚಿರಕನಹಳ್ಳಿ ಗ್ರಾಮದ ಸಮೀಪ ಸಾವನ್ನಪ್ಪಿರುವುದಾಗಿ ಬಂಡೀಪುರ ಸಿಎಫ್ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಆನೆ ಸಾವನ್ನಪ್ಪಿದ ಸ್ಥಳಕ್ಕೆ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ರವೀಂದ್ರ, ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸೀಂ, ಕುಂದಕೆರೆ ಆರ್ಎಫ್ ಓ ಶ್ರೀನಿವಾಸ್ ತೆರಳಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ಹೆಣ್ಣಾನೆಯ ಅಂಗಾಂಗ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ನಂತರ ಪ್ರಕರಣ ಬಗ್ಗೆ ನೈಜ ಮಾಹಿತಿ ತಿಳಿದು ಬರಲಿದೆ‌.

Advertisement

Udayavani is now on Telegram. Click here to join our channel and stay updated with the latest news.

Next