Advertisement

ಬಿಜೆಪಿ ಕಾರ್ಯಕಾರಿಣಿ ಸದಸ್ಯತ್ವಕ್ಕೆ ಬಂಡಿ ರಾಜೀನಾಮೆ

04:44 PM Jan 23, 2018 | |

ಲಿಂಗಸುಗೂರು: ಬಿಜೆಪಿ ವರಿಷ್ಠರು ತಮ್ಮನ್ನು ಕಡೆಗಣಿಸಿದ್ದಕ್ಕೆ ಮನನೊಂದು ರಾಜ್ಯ ಕಾರ್ಯಕಾರಿಣಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಮುಖಂಡ ಸಿದ್ಧು ವೈ.ಬಂಡಿ ಹೇಳಿದರು. ಸೋಮವಾರ ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಒಂದು ದಶಕದಲ್ಲಿ ರೈತ ಚೈತನ್ಯ ಯಾತ್ರೆ, ಬಿಜೆಪಿ ಸದಸ್ಯತ್ವ ಅಭಿಯಾನದಡಿ 1.04 ಲಕ್ಷ ಸದಸ್ಯರ ನೊಂದಣಿ, ಎಸ್‌ಟಿ ಸಮಾವೇಶ, ಜಿಲ್ಲಾ ಮಹಿಳಾ ಸಮಾವೇಶ, ಪರಿವರ್ತನೆ ಯಾತ್ರೆ ಸೇರಿದಂತೆ ಪಕ್ಷದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಗ್ರಾಮೀಣ ಮಟ್ಟದಲ್ಲಿ ಪಕ್ಷ ಸಂಘಟನೆಯಾಗಲು ಶ್ರಮಿಸಿದ್ದೇನೆ. 

Advertisement

ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾದ್ದ ಮಾನಪ್ಪ ವಜ್ಜಲ್‌ ಸೋಲುವ ಭೀತಿಯಿಂದ ಈಗ ಬಿಜೆಪಿ ಸೇರಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಮಾನಪ್ಪ ವಜ್ಜಲ್‌ರನ್ನು ಮನೆಗೆ ಕಳುಹಿಸಲು ತೀರ್ಮಾನಿಸಿದ್ದು, ತಾವು ಸ್ಪರ್ಧಿಸಿ ವಜ್ಜಲ್‌ರನ್ನು ಸೋಲಿಸುವುದಾಗಿ ಹೇಳಿದರು. 

ಬಿಜೆಪಿ ವರಿಷ್ಠರು ತಮ್ಮನ್ನು ಕಡೆಗಣಿಸಿದ್ದಕ್ಕೆ ಕಾರ್ಯಕರ್ತರ ಒತ್ತಡಕ್ಕೆ ಮಣಿದು ರಾಜ್ಯ ಕಾರ್ಯಕಾರಿಣಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಮತ್ತು ನನ್ನ ಜತೆಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಮಾಕಾಪುರ, ಯುವ ಮೋರ್ಚಾ ಸದಸ್ಯ ಸೋಮಲಿಂಗಪ್ಪ ಜೂಲಗುಡ್ಡ, ತಾಲೂಕು ಪ್ರಧಾನ ಕಾರ್ಯದರ್ಶಿ ಬಸನಗೌಡ ಚಿತ್ತಾಪುರ, ಎಸ್ಟಿ
ಮೋರ್ಚಾ ಅಧ್ಯಕ್ಷ ಬಸವರಾಜ ಅಡವಿಬಾವಿ, ಎಸ್ಸಿ ಮೋರ್ಚಾ ಕಾರ್ಯದರ್ಶಿ ಬೋದು ನಾಯ್ಕ, ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದುರುಗಣ್ಣ ನಾಯಕ, ಹನುಮಂತ ನಾಯಕ, ಉಪಾಧ್ಯಕ್ಷ ಮೌನೇಶ ನಾಯಕ, ರೈತ ಮೋರ್ಚಾ
ಉಪಾಧ್ಯಕ್ಷ ಶೇಖರಗೌಡ ಪಾಟೀಲ್‌, ಶಕ್ತಿ ಕೇಂದ್ರದ ಉಪಾಧ್ಯಕ್ಷ ಸೂಗೂರು, ಯುವ ಮೋರ್ಚಾ ಉಪಾಧ್ಯಕ್ಷ ನಂದೀಶ ಪೂಜಾರಿ, ನಗರ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ದ್ರಾಕ್ಷಾಯಿಣಿ, ತಾಲೂಕು ಮಹಿಳಾ ಮೋರ್ಚಾ ಉಪಾಧ್ಯಕ್ಷೆ ನಾಗರತ್ನ ಕುಲಕರ್ಣಿ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸುತ್ತಿದ್ದೇವೆ
ಎಂದು ಹೇಳಿದರು.

ವೆಂಕಟರಾವ್‌ ಜಹಾಗೀರದಾರ, ಬಸನಗೌಡ ಚಿತ್ತಾಪುರ, ಬಸವರಾಜ ಮಾಕಾಪುರ, ಬಸವರಾಜ ನಾಯಕ
ಅಡವಿಬಾವಿ, ನಾಗರತ್ನ ಕುಲಕರ್ಣಿ, ದ್ರಾಕ್ಷಾಯಿಣಿ ರಾಜಪ್ಪ, ಯಮನೂರು ಸೇರಿದಂತೆ ನೂರಾರು ಜನ ಬೆಂಬಲಿಗರು
ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next