Advertisement

ಸುರತ್ಕಲ್ ನಲ್ಲಿ ಬಂದ್ ವಾತಾವರಣ: ಪಂಜಿಮೊಗರಿನಲ್ಲಿಂದು ಜಲೀಲ್ ದಫನ ಕ್ರಿಯೆ

09:30 AM Dec 25, 2022 | Team Udayavani |

ಸುರತ್ಕಲ್: ಇಲ್ಲಿನ ಕೃಷ್ಣಾಪುರದಲ್ಲಿ ತನ್ನ ಅಂಗಡಿಯಲ್ಲಿ ದುಷ್ಕರ್ಮಿಗಳ ಕೃತ್ಯಕ್ಕೆ ಬಲಯಾದ ಜಲೀಲ್ ಅವರ ಅಂತ್ಯಕ್ರಿಯೆ ಇಂದು ಕೂಳೂರು ಪಂಜಿಮೊಗರು ದಫನ ಭೂಮಿಯಲ್ಲಿ ನಡೆಯಲಿದೆ.

Advertisement

ಮಂಗಳೂರಿನಲ್ಲಿ ಜಲೀಲ್ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ನಂತರ ಪಾರ್ಥೀವ ಶರೀರವನ್ನು ಕೃಷ್ಣಾಪುರ 9ನೇ ಬ್ಲಾಕ್ ಮನೆಗೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ವರದಿಯಾಗಿದೆ. ಇದರ ಬಳಿಕ ಕೂಳೂರು ಪಂಜಿಮೊಗರಿನಲ್ಲಿ ಸಕಲ ವಿಧಿವಿಧಾನಗಳೊಂದಿಗೆ ದಫನ ಕ್ರಿಯೆ ನಡೆಯಲಿದೆ.

ಪೊಲೀಸ್ ಸರ್ಪಗಾವಲು: ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಸುರತ್ಕಲ್ ನಲ್ಲೇ ಬೀಡು ಬಿಟ್ಟಿದ್ದು, ಪೊಲೀಸ್ ಭದ್ರತೆಯ ಮೇಲ್ವಿಚಾರಣೆ ನಡೆಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಸುರತ್ಕಲ್ ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಸೆಕ್ಷನ್ 144: ರವಿವಾರ ಬೆಳಗ್ಗೆ 6 ರಿಂದ ಡಿ.27ರ ಬೆಳಗ್ಗೆ 6 ರವರೆಗೆ ಸುರತ್ಕಲ್, ಪಣಂಬೂರು, ಬಜಪೆ, ಕಾವೂರು ಠಾಣಾ ವ್ಯಾಪ್ತಿಗಳಲ್ಲಿ ಸೆಕ್ಷನ್‌144 ನಂತೆ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಲಾಗಿದೆ.

Advertisement

ಮದ್ಯ ಮಾರಾಟ ನಿಷೇಧ: ಈ ಸಮಯದಲ್ಲಿ ನಗರ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ರಾತ್ರಿ ಸಂಚಾರ ನಿಷೇಧ: ಮುಂಜಾಗೃತಾ ಕ್ರಮವಾಗಿ ದಿನಾಂಕ 25 ಮತ್ತು 26ರಂದು ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಠಾಣಾ ವ್ಯಾಪ್ತಿಯ ಎಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಕರ್ತವ್ಯದ ಪಾಳಿಯನ್ನು ಸಂಜೆ 6 ಗಂಟೆಯ ಒಳಗಾಗಿ ಬದಲಾಯಿಸುವಂತೆ ಮತ್ತು ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಸಿಬ್ಬಂದಿಯವರು ರಸ್ತೆಯಲ್ಲಿ ಸಂಚರಿಸಬಾರದು ಎಂದು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next