ಬೆಂಗಳೂರು: ಬಿಬಿಎಂಪಿಯಿಂದ ಬಾಣಸವಾಡಿ ಐಒಸಿ ಮೇಲ್ಸೇತುವೆಯ ಮೇಲ್ಪದರ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಮೇಲ್ಸೇತುವೆಯಲ್ಲಿ ಶುಕ್ರವಾರ (ಮೇ 19) ರಿಂದ ಮೇ 24ರವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಪಾಲಿಕೆಯ ರಸ್ತೆ ಮೂಲಭೂತ ಸೌಕರ್ಯ ಹಾಗೂ ಟಿಇಸಿ ಭಾಗದಿಂದ ಐದು ದಿನಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ಕುರಿತು ಬಾಣಸವಾಡಿ ಸಂಚಾರಿ ಪೊಲೀಸರಿಂದ ಅನುಮತಿ ಪಡೆಯಲಾಗಿದೆ. ಜತೆಗೆ ನಗರದಿಂದ ಬರುವ ಹಾಗೂ ನಗರಕ್ಕೆ ಈ ಮಾರ್ಗದಲ್ಲಿ ಬರುತ್ತಿದ್ದ ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
ನಗರದಿಂದ ಫ್ರೆàಜರ್‌ಟೌನ್, ಶಿವಾಜಿನಗರ, ಹಲಸೂರು ಕಡೆಯಿಂದ ಬಾಣಸವಾಡಿ ಕಡೆಗೆ ಸಂಚರಿ ಸುವಂತಹ ವಾಹನಗಳು ಬಾಣಸವಾಡಿ ಐಒಸಿ ಮೇಲ್ಸೇ ತುವೆ ಬದಲಾಗಿ, ಫ್ರೆàಜರ್‌ಟೌನ್ ಸಂಚಾರ ಪೊಲೀಸ್ ಠಾಣೆ ಬಳಿ ಎಡ ತಿರುವು ಪಡೆದು ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಚಲಿಸಿ ಕಾಚರಕನಹಳ್ಳಿಯ ಜ್ಯೋತಿ ಸ್ಕೂಲ್ ಬಳಿ ಬಲ ತಿರುವು ಪಡೆದು, ನೆಹರೂ ರಸ್ತೆ ಮೂಲಕ ನೇರವಾಗಿ ಕಲ್ಯಾಣ ನಗರ 80 ಅಡಿ ರಸ್ತೆಯ ಮೂಲಕ ಉತ್ತಮ್ ಸಾಗರ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಬಾಣಸವಾಡಿ ರಸ್ತೆಯನ್ನು ಸಂಪರ್ಕಿಸಬಹುದಾಗಿದೆ.
ಇಲ್ಲವೆ, ಜೀವನಹಳ್ಳಿ ಕ್ರಾಸ್ ಬಳಿ ಎಡತಿರುವು ಪಡೆದು ಬಾಣಸವಾಡಿ ರೈಲ್ವೆ ಸ್ಟೇಷನ್ ರಸ್ತೆ ಮೂಲಕ ಚಲಿಸಿ ಜಾನಕಿರಾಮ್ ಬಡಾವಣೆಯ ಮೂಲಕ ಕಮ್ಮನಹಳ್ಳಿ ಮುಖ್ಯ ರಸ್ತೆ ಮೂಲಕ ಸಂಚರಿಸಿ ನೆಹರೂ ರಸ್ತೆ ತಲುಪಿ ಕುಳ್ಳಪ್ಪ ವೃತ್ತದ ಮೂಲಕ ಕಲ್ಯಾಣನಗರ 80 ಅಡಿ ರಸ್ತೆಯಿಂದ ಉತ್ತಮ್ ಸಾಗರ್ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಬಾಣಸವಾಡಿ ರಸ್ತೆ ತಲುಪಬಹುದಾಗಿದೆ.
ಇನ್ನು ರಾಮಮೂರ್ತಿ ನಗರ ಹೊರ ವರ್ತುಲ ರಸ್ತೆ, ಚಿಕ್ಕಬಾಣಸವಾಡಿ, ಕಸ್ತೂರಿನಗರ, ಬಾಣಸವಾಡಿ ಕಡೆಯಿಂದ ಐಒಸಿ ಮೇಲ್ಸೇತುವೆ ಬಳಿಸಿ ಹೋಗುತ್ತಿದ್ದ ಸವಾರರು, ಉತ್ತಮ ಸಾಗರ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು 80 ಅಡಿ ರಸ್ತೆ, ಕಲ್ಯಾಣನಗರ ಮುಖಾಂತರ ಚಲಿಸಿ ಕುವೆಂಪು ವೃತ್ತದ ಬಳಿ ಎಡ ತಿರುವು ಪಡೆದುಕೊಂಡು ನೆಹರೂ ರಸ್ತೆ ಮೂಲಕ ಹೆಣ್ಣೂರು ಮುಖ್ಯ ರಸ್ತೆಗೆ ಸೇರಿ ಶಿವಾಜಿನಗರದ ಮೂಲಕ ನಗರವನ್ನು ತಲುಪಬಹುದು.
ಜತೆಗೆ, ಹೊರ ವರ್ತುಲ ರಸ್ತೆ ಮೂಲಕ ಬಾಬೂಸಾಪಾಳ್ಯ ಮೂಲಕ ಕಲ್ಯಾಣನಗರ, ಕಮ್ಮನಹಳ್ಳಿ ಮಾರ್ಗವಾಗಿ, ಹೆಣ್ಣೂರು ಬಳಿ ಎಡತಿರುವು ಪಡೆದು ಹೆಣ್ಣೂರು ಮುಖ್ಯ ರಸ್ತೆ ಮೂಲಕ ಸಂಚರಿಸಿ ಲಿಂಗರಾಜಪುರ ಮೇಲ್ಸೇತುವೆ ಮೂಲಕ ಶಿವಾಜಿನಗರವನ್ನು ತಲುಪುಬಹುದಾಗಿದೆ ಎಂದು ರಸ್ತೆ ಮೂಲಭೂತ ಸೌಕರ್ಯ – ಟಿಇಸಿ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.