Advertisement
ಏರೋ ಇಂಡಿಯಾ-2017ಕ್ಕೆ ಚಾಲನೆ ನೀಡಿ ಮಾತನಾಡಿದ ಪರಿಕ್ಕರ್, ಏಷ್ಯಾದ ಅತಿ ದೊಡ್ಡ ಮತ್ತು ವಿಶ್ವದ ಎರಡನೇ ವೈಮಾನಿಕ ಪ್ರದರ್ಶನದಲ್ಲಿ ರಕ್ಷಣಾ ಕ್ಷೇತ್ರ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರಗಳನ್ನು ಒಂದೇ ವೇದಿಕೆಯಡಿ ತರುವ ಮೂಲಕ ಉತ್ಪಾದನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮುಂದಿನ ವರ್ಷಗಳಲ್ಲಿ ಉತ್ತಮ ಸಾಧನೆ ತೋರುವ ಪ್ರಯತ್ನಕ್ಕೆ ಕೈಹಾಕಲಾಗಿದೆ ಎಂದರು. ಮೇಕ್ ಇನ್ ಇಂಡಿಯಾದಲ್ಲಿ ವಿದೇಶಿ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಿಕೆಗೆ ವಿದೇಶಿ ಹೂಡಿಕೆ ನೀತಿಯನ್ನು ಸರಳೀಕರಣಗೊಳಿಸಲಾಗಿದ್ದು, ವಿದೇಶಿ ಮತ್ತು ಭಾರತೀಯ ಕಂಪನಿಗಳು ಜತೆಯಾಗಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸ್ಟಾಟ್ ìಅಪ್‌ಗ್ಳಲ್ಲೂ ಆವಿಷ್ಕಾರಗಳನ್ನು ಕೈಗೊಳ್ಳುವವರಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
Related Articles
ಎಂಐ-17, ಎಲ್‌ಯುಎಚ್ (ಲಘು ಬಹುಪಯೋಗಿ ಹೆಲಿಕಾಪ್ಟರ್), ಅವಾಕ್ಸ್ ಅಳವಡಿಸಿದ ವಿಮಾನ, ಹಾಕ್-1 ಯುದ್ಧ ವಿಮಾನ, ಎಚ್‌ಟಿಟಿ-40 ಯುದ್ಧ ವಿಮಾನ, ತೇಜಸ್ ಲಘು ಯುದ್ಧ ವಿಮಾನ, ಅಮೆರಿಕದ ಎಫ್-16, ಸುಖೋಯ್
ಸು-30, ಪಿಲಾಟಸ್ ಪಿಸಿ-7 ಯುದ್ಧ ವಿಮಾನ, ಎಎಲ್‌ಎಚ್, ಧ್ರುವ (ಲಘು ಯುದ್ಧ ಹೆಲಿಕಾಪ್ಟರ್), ಸ್ವಿಡನ್‌ನ ಸ್ವಿಂಗ್ ರೋಡ್ ಫೈಟರ್ ಯುದ್ಧ ವಿಮಾನ, ರಫೇಲ್, ಸೂರ್ಯಕಿರಣ್, ಸಾರಂಗ್, ಟೈಗರ್ ಮಾತ್ ಹೆಲಿಕಾಪ್ಟರ್.
Advertisement
ಪಿಎಂ-ಸಿಎಂ ಗೈರುವೈಮಾನಿಕ ಪ್ರದರ್ಶನದ ಉದ್ಘಾಟನೆಯಲ್ಲಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರುಹಾಜರಾಗಿದ್ದರು. ಇವರ ಅನುಪಸ್ಥಿತಿ ಉದ್ಘಾಟನಾ ಸಮಾರಂಭದಲ್ಲಿ ಎದ್ದು ಕಾಣುತ್ತಿತ್ತು. ಮುಖ್ಯಮಂತ್ರಿಗಳ ಪರವಾಗಿ ಪ್ರದರ್ಶನಕ್ಕೆ ಆಗಮಿಸಿದ್ದ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬರಲು ಸಾಧ್ಯವಾಗಿಲ್ಲ ಎಂದರಲ್ಲದೆ, ಮುಖ್ಯಮಂತ್ರಿಗಳ ಸಂದೇಶ ಮತ್ತು ಭಾಷಣವನ್ನು ಓದಿದರು. ಕೈಕೊಟ್ಟ ಕರೆಂಟ್
ನೂರಾರು ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲೂ ಕರೆಂಟ್ ಕೈಕೊಟ್ಟಿದ್ದು ತುಸು ಮುಜುಗರ ಉಂಟಾಯಿತು. ಕಾರ್ಯಕ್ರಮದ ಆರಂಭದಲ್ಲಿ ನಿರೂಪಕರು ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಗುಪ್ತ ಅವರನ್ನು ಸ್ವಾಗತ ಭಾಷಣಕ್ಕೆ ಆಗಮಿಸುವ ಮೊದಲೇ ಧ್ವನಿವರ್ಧಕ ಸ್ಥಗಿತಗೊಂಡಿತು. ಎರಡು ನಿಮಿಷಗಳ ನಂತರ ಪುನರಾರಂಭಗೊಂಡಿತು. ತಾಂತ್ರಿಕ ದೋಷದಿಂದ ಅಡಚಣೆ ಉಂಟಾಯಿತು ಎಂದು ನಿರೂಪಕರು ಸಮಜಾಯಿಷಿ ನೀಡಿದರು. – “ಏರೋ ಇಂಡಿಯಾ-2017’ಕ್ಕೆ ಅದ್ದೂರಿ ಚಾಲನೆ
– ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ