Advertisement
ಕಳೆದ ಎರಡು ವಾರಗಳ ಹಿಂದೆ ಕೆಜಿ ಬಾಳೆಹಣ್ಣಿಗೆ ಕೇವಲ 60ರಿಂದ 70 ರೂ.ಗಳವರೆಗೆ ಇದ್ದ ಏಲಕ್ಕಿ ಬಾಳೆ ದರ ಇದ್ದಕ್ಕಿದ್ದಂತೆ 115ಕ್ಕೆ ಏರಿದೆ. ಶ್ರಾವಣ ಆರಂಭಗೊಂಡು ವರಮಹಾಲಕ್ಷ್ಮೀ ಹಬ್ಬದಿಂದಲೇ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ಇದೀಗ ಇದು ನೂರರ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಪೂರೈಕೆ ಕೊರತೆ ಕಂಡುಬಂದಲ್ಲಿ ಮತ್ತಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬುದು ಬಾಳೆ ಮಂಡಿ ಮಾಲೀಕರ ಲೆಕ್ಕಾಚಾರ.
ಬೆಂಗಳೂರು ನಗರಕ್ಕೆ ಪ್ರತಿದಿನ ಸುಮಾರು 1500 ಟನ್ ಬಾಳೆಹಣ್ಣಿನ ಅವಶ್ಯಕತೆ ಇದೆ. ಆದರೆ, ಪ್ರಸ್ತುತ ಕೇವಲ 300ರಿಂದ 400 ಟನ್ ಮಾತ್ರ ಸರಬರಾಜಾಗುತ್ತಿದೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ ರಾಜ್ಯಗಳಿಗೆ ಹೆಚ್ಚಾಗಿ ಬಾಳೆ ಹಣ್ಣನ್ನು ರಫ್ತು ಮಾಡುವ ತಮಿಳುನಾಡಿನಲ್ಲಿ ಮಳೆ ಕೊರತೆಯಿಂದ ಬಾಳೆ ಬೆಳೆ ನೆಲಕ್ಕಚ್ಚಿದ್ದು, ಕೊರತೆಗೆ ಕಾರಣ. ರಾಜ್ಯದ ಶಿವಮೊಗ್ಗ, ಶಿಕಾರಿಪುರ, ಕೊಳ್ಳೇಗಾಲ, ಕನಕಪುರ, ಚಾಮರಾಜನಗರ, ಹೊಸಪೇಟೆ ಸೇರಿ ಹಲವೆಡೆಯಿಂದ ಬೆಂಗಳೂರು ಮಾರುಕಟ್ಟೆಗೆ ಬಾಳೆ ಸರಬರಾಜಾಗುತ್ತದೆ. ಇಲ್ಲಿಯೂ ಮಳೆ ಕೊರತೆ ಬಾಧಿಸಿದ್ದು, ಸಮರ್ಪಕವಾಗಿ ಬಾಳೆ ಬೆಳೆದಿಲ್ಲ ಎನ್ನುತ್ತಾರೆ ಶ್ರೀಸರಸ್ವತಿ ಬನಾನಾ ಮರ್ಜೆಂಟ್ ಮಾಲೀಕ ಎಸ್.ಚಕ್ರಪಾಣಿ.
Related Articles
ಬಾಳೆ ತಳಿ ಹೋಲ್‌ಸೇಲ್ ರೀಟೆಲ್ ಹಾಪ್‌ಕಾಮ್ಸ್
ಏಲಕ್ಕಿ ಬೆಳೆ 90 120 105
ಚಂದ್ರಬಾಳೆ 60 80 78
ಪಚ್ಚಬಾಳೆ 25 37 33
ನೇಂದ್ರ ಬಾಳೆ 60 80 78
Advertisement