Advertisement

ಮಳೆ, ಗಾಳಿಗೆ ಧರೆಗುರುಳಿದ ಬಾಳೆ ಮರ

11:16 AM Jun 04, 2018 | |

ನಾಲತವಾಡ: ಪಟ್ಟಣ ಸೇರಿದಂತೆ ರವಿವಾರ ಮಧ್ಯಾಹ್ನ ಏಕಾಏಕಿ ವಿಪರಿತ ಗಾಳಿ ಹಾಗೂ ಗುಡುಗು ಸಮೇತ ಸುರಿದ ಭಾರಿ ಮಳೆಗೆ ಸಮೀಪದ ಹಿರೇಮುರಾಳ ಗ್ರಾಮದಲ್ಲಿ ಸಿಡಿಲಿನ ಅಬ್ಬರಕ್ಕೆ ಎರಡು ಕುರಿಗಳು ಮೃತಪಟ್ಟಿದ್ದು ತೆಂಗಿನ ಮರ ಉರುಳಿ ಬಿದ್ದಿದೆ.

Advertisement

ಗ್ರಾಮದ ಶಿವಾಜಿ ಬೈಲಪತ್ತಾರ ಎಂಬುವರಿಗೆ ಸೇರಿದ ಕುರಿಗಳು ಹಾಗೂ ದಾವಲಸಾಬ್‌ ಎಂಬುವರಿಗೆ ತೆಂಗಿನ ಮರ ಸೇರಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಎ.ಐ. ಸಾಲಿಮಠ ಹಾಗೂ ಪಶು ವೈದ್ಯರಾದ ಸೀತಿಮನಿ ರಾಮಣ್ಣ ವಾಲೀಕಾರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಅಸ್ತವ್ಯಸ್ತ: ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಸುರಿದ ಮಳೆಯಿಂದ ಚರಂಡಿ ನೀರು ರಸ್ತೆಯಲ್ಲಿ ಹರಿದಾಡಿ ಅಂಗಡಿಯೊಳಗೆ ನುಗ್ಗಿ ವ್ಯವಹಾರಕ್ಕೆ ಕೆಲ ಹೊತ್ತು ಅಡಚಣೆಯಾಯಿತು. ಇನ್ನೊಂದೆಡೆ ಬಸ್‌ ನಿಲ್ದಾಣದಲ್ಲೂ ಸಹ ಹರಿದ ಮಳೆ ನೀರು ಪ್ರಯಾಣಿಕರಿಗೂ ತೀವ್ರ ಪರದಾಡಬೇಕಾಯಿತು.

ಮಾರುಕಟ್ಟೆಯ ಮುಖ್ಯ ರಸ್ತೆಯಲ್ಲೆಲ್ಲಾ ಹರಿದಾಡಿದ ವಿಪರಿತ ನೀರಿನ ಪರಿಣಾಮ ವಾಹನ ಹಾಗೂ ಬೈಕ್‌ ಸವಾರರು ಸಂಕಷ್ಟ ಅನುಭವಿಸಿದ ಪ್ರಸಂಗ ನೆಡೆಯಿತು. ಮಳೆ ಗಾಳಿಗೆ ಪಟ್ಟಣದ ಹಲವು ತೋಟಗಳಲ್ಲಿ ಬಾಳೆ ನೆಲಕ್ಕುರುಳಿತು. ರಮೇಶ ಗಂಗನಗೌಡ, ಅಮರಪ್ಪ ಗಂಗನಗೌಡ, ತಿಪ್ಪಣ್ಣ ಕೆಂಭಾವಿ, ರೆವಣೆಪ್ಪ ಕೆಂಭಾವಿ ಅವರಿಗೆ ಸೇರಿದ ಬಾಳೆ ನೆಲಕ್ಕುರುಳಿದ ಪರಿಣಾಮ ರೈತರು ಹಾನಿ ಅನುಭವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next