Advertisement

ಬನಹಟಿಯಲ್ಟಿ ನಿಷೇಧಾಜ್ಞೆ ಮುಂದುವರಿಕೆ

06:09 PM Feb 11, 2022 | Team Udayavani |

ರಬಕವಿ-ಬನಹಟ್ಟಿ: ಹಿಜಾಬ್‌ ಮತ್ತು ಕೇಸರಿ ಶಾಲು ವಿವಾದ ಹಿಂಸೆಗೆ ತಿರುಗಿದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 6ಗಂಟೆವರೆಗೆ ಜಾರಿಗೊಳಿಸಿದ್ದ 144 ನಿಷೇಧಾಜ್ಞೆಯನ್ನು ಶನಿವಾರ ಬೆಳಗ್ಗೆ 6 ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ತಹಶೀಲ್ದಾರ್‌ ಸಂಜಯ ಇಂಗಳೆ ಸ್ಪಷ್ಟಪಡಿಸಿದ್ದಾರೆ.

Advertisement

ಬನಹಟ್ಟಿ ಹಾಗೂ ರಬಕವಿ ಪಟ್ಟಣದಲ್ಲೂ ನಿಷೇಧಾಜ್ಞೆ ಮುಂದುವರಿಸಿದ್ದು, ರ್ಯಾಲಿ ಹಾಗೂ ಕಾರ್ಯಕ್ರಮಗಳಿಗೆ ನಿಷೇಧ ಹೇರಿರುವ ಹಿನ್ನೆಲೆ ಈಗಷ್ಟೇ ಪೊಲೀಸರ ಹತೋಟಿಯಲ್ಲಿ ಬನಹಟ್ಟಿ ನಗರವಿದ್ದು, ಎಲ್ಲೆಂದರಲ್ಲಿ ಪೊಲೀಸ್‌ ಕಣ್ಗಾವಲು ಹೆಚ್ಚಾಗಿದ್ದು, ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾದ ಸ್ಥಳಗಳಲ್ಲಿ ಪೊಲೀಸ್‌ ಹೆಚ್ಚಿನ ಬಂದೋಬಸ್ತ್ ಒದಗಿಸಿ ಚಿತ್ರೀಕರಣಗಳೂ ಸಹಿತ ನಡೆಯುತ್ತಿವೆ.

ಮತ್ತೋರ್ವನ ಬಂಧನ: ಮಂಗಳವಾರ ಮಧ್ಯಾಹ್ನ ಶಿಕ್ಷಕನೋರ್ವನ ಮೇಲೆ ನಡೆದ ಮಾರಣಾಂತಿಕ ಹಲ್ಲೆಯಲ್ಲಿ ಭಾಗಿಯಾದ ಆರೋಪಿತರಲ್ಲಿ ಮತ್ತೋರ್ವನನ್ನು ಬಂಧಿಸಿದ್ದು, ಇದೀಗ ಒಟ್ಟು 14 ಜನರನ್ನು ಬಂಧಿಸಲಾಗಿದೆ.

ಮಾರುಕಟ್ಟೆ ಸಂಪೂರ್ಣ ಬಂದ್‌: ನಿಷೇಧಾಜ್ಞೆ ಜಾರಿಯಲ್ಲಿ ರಬಕವಿ ಹಾಗೂ ಬನಹಟ್ಟಿ ಪಟ್ಟಣಗಳ ಮಾರುಕಟ್ಟೆ ಸಂಪೂರ್ಣ ಬಂದ್‌ ಆಗಿ ಬಿಕೋ ಎನ್ನುತ್ತಿದ್ದವು. ಎಂದಿನಂತೆ ಸರ್ಕಾರಿ ಕಚೇರಿ, ಶಾಲೆ, ಖಾಸಗಿ ಹಣಕಾಸು, ಆಸ್ಪತ್ರೆ, ಮೆಡಿಕಲ್‌ ಹಾಗೂ ಅಗತ್ಯ ವಸ್ತುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು.

ಬಸ್‌ ಸಂಚಾರ ಸೇರಿದಂತೆ ಖಾಸಗಿ ವಾಹನಗಳ ಓಡಾಟಕ್ಕೆ ಯಾವದೇ ನಿರ್ಭಂಧ ಹೇರದೆ ರಾಜ್ಯ ಹೆದ್ದಾರಿಯಲ್ಲಿನ ಸಂಚಾರ ದೈನಂದಿನದಂತೆ ಕಾರ್ಯನಿರ್ವಹಿಸುತ್ತಿದ್ದವು.ಸೂಕ್ಷ್ಮವಾಗಿ ಗಮನಿಸುತ್ತಿರುವ ಜಿಲ್ಲಾಡಳಿತ: ಬನಹಟ್ಟಿಯಲ್ಲಿ ನಡೆದ ಘಟನೆಯನ್ನು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿದೆ.

Advertisement

ಖಾಸಗಿ ಸಮಾರಂಭಕ್ಕೆ ಅವಕಾಶ: ಮದುವೆ-ಮುಂಜಿವೆ, ವಾಸ್ತು ಶಾಂತಿ ಸೇರಿದಂತೆ ವೈಯಕ್ತಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸದೆ ಸರಾಗವಾಗಿ ಕಾರ್ಯಕ್ರಮಗಳು ನಡೆದಿರುವುದು ಜನರಲ್ಲಿ ನೆಮ್ಮದಿ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next