Advertisement

ಬನಹಟ್ಟಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ವೃಕ್ಷೋದ್ಯಾನ ಕಾಮಗಾರಿ ಶರವೇಗದಲ್ಲಿ ಪ್ರಾರಂಭ

09:27 PM Jul 25, 2022 | Team Udayavani |

ರಬಕವಿ-ಬನಹಟ್ಟಿ: ಜಮಖಂಡಿಯ ಪ್ರಾದೇಶಿಕ ಅರಣ್ಯ ಇಲಾಖೆಯ ಆಶ್ರಯದಲ್ಲಿ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಡೆಂಪೋ ಡೈರಿಯ ಮುಂಭಾಗದಲ್ಲಿರುವ ಅಂದಾಜು 42 ಎಕರೆ ಭೂ ಪ್ರದೇಶದಲ್ಲಿ ಸಾರ್ವಜನಿಕರ ಮತ್ತು ಮಕ್ಕಳ ಅನುಕೂಲಕ್ಕಾಗಿ ವೃಕ್ಷ ಉದ್ಯಾನ ವನವನ್ನು ಕಳೆದ ತಿಂಗಳು ಚಾಲನೆ ನೀಡಲಾಗಿತ್ತು. ಈ ಕಾಮಗಾರಿ ವೃಕ್ಷೋದ್ಯಾನಕ್ಕೆ 2 ಕೋಟಿ ಹಣ ಈಗಾಗಲೇ ಬಿಡುಗಡೆ ಆಗಿದ್ದು, ಈಗ ರೂ. 25 ಲಕ್ಷ ವೆಚ್ಚದ ಮೊದಲ ಹಂತದ ಕಾಮಗಾರಿ ಅತೀ ಶರವೇಗದಲ್ಲಿ ಪ್ರಾರಂಬಿಸಿದ್ದು ತಾಲೂಕಿನ ಜನರಲ್ಲಿ ಸಂತಸವನ್ನುಂಟು ಮಾಡಿದೆ.

Advertisement

ಈ ಮೊದಲು ಇಲ್ಲಿ ಬಿಸಿಲು ಬಿಸಿ ನೋಡಲಾಗುತ್ತಿರಲಿಲ್ಲ, ಈಗ ಇಲ್ಲಿ ಗಿಡಗಳನ್ನು ನೆಡುತ್ತಿರುವುದರಿಂದ ತಂಪು ಗಾಳಿ ಬಿಸುವ ಮತ್ತು ಅನುಭವಿಸುವ ಅವಕಾಶ ಇಲ್ಲಿನ ಜನರಿಗೆ ದೊರಕಲಿದೆ.

ಅದರಂತೆ ಕಳೆದ ಒಂದು ವಾರದಿಂದ ಅರಣ್ಯ ಇಲಾಖೆ ಜಾಗೆಯಲ್ಲಿ ಮೊದಲ ಹಂತದಲ್ಲಿ 2600 ಕ್ಕೂ ಅಧೀಕ ಗಿಡಗಳನ್ನು ನೆಡಲಾಗಿದೆ. ಇಲ್ಲಿ ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಿಸಿ ರಸ್ತೆ ನಿರ್ಮಾಣ, ಮಕ್ಕಳು ಆಡುವ ಸಲಕರಣೆಗಳು, ಜೊತೆಗೆ ಇಲ್ಲಿ ಇರುವ ಬಾಂದಾರವನ್ನು ಅಭಿವೃದ್ಧಿಗೊಳಿಸಿ ಅಲ್ಲಿ ದೋಣಿ ವಿಹಾರಕ್ಕೂ ಅವಕಾಶವನ್ನು ನೀಡುವ ಯೋಜನೆ ಕೂಡಾ ಅತಿ ಶೀಘ್ರದಲ್ಲಿ ಪ್ರಾರಂಭಿಸಲಾಗುತ್ತಿದೆ. ಇಲ್ಲಿ ನೆಟ್ಟ ಗಿಡಗಳಿಗೆ ಹನಿ ನೀರಾವರಿಯ ಮೂಲಕ ನೀರು ನೀಡುವ ಸೌಕರ್ಯವನ್ನು ಕೂಡಾ ಮಾಡಲಾಗುವುದು. ಹಂತ ಹಂತವಾಗಿ ಈ ವೃಕ್ಷೋದ್ಯಾನವನ್ನು ಅಭಿವೃದ್ಧಿ ಪಡಿಸಲಾಗುವುದು. ಅದೇ ರೀತಿಯಾಗಿ ಬನಹಟ್ಟಿಯ ಕೆಎಚ್‌ಡಿಸಿ ರಸ್ತೆಯಲ್ಲಿರುವ ನಾಲ್ಕು ಅರಣ್ಯ ಪ್ರದೇಶದ ಭೂಮಿಯಲ್ಲಿಯೂ ಕೂಡಾ ಅರಣ್ಯೀಕರಣಗೊಳಿಸಿ ಅಲ್ಲಿಯೂ ಮಕ್ಕಳಿಗೆ ಅನುಕೂಲವಾಗುವು ನಿಟ್ಟಿನಲ್ಲಿ ಅಭಿವೃದ್ಧಿಗೊಳಿಸುವ ಯೋಜನೆ ಕೂಡಾ ಇದರಲ್ಲಿ ಅಳವಡಿಸಲಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಗಿಡ ಮರಗಳನ್ನು ರಕ್ಷಿಸುವುದರ ಜೊತೆಗೆ ಸುಂದರ ಪರಿಸರವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಗಳು ಅಗತ್ಯವಾಗಿವೆ. ಮುಂದಿನ ಪಿಳಿಗೆಯ ಅರೋಗ್ಯದ ಹಿತದೃಷ್ಟಿಯಿಂದು ನಾವೆಲ್ಲರು ಗಿಡಮರಗಳನ್ನು ಬೆಳೆಸಿದರೆ ಅದೆ ಅವರಿಗೆ ಕೊಡುವ ಕೊಡುಗೆ.
– ಸಿದ್ದು ಸವದಿ. ಶಾಸಕರು ತೇರದಾಳ ಮತಕ್ಷೇತ್ರ.

ಈ ಪ್ರದೇಶದಲ್ಲಿ ಈಗಾಗಲೇ 10 ಸಾವಿರಕ್ಕೂ ಅಧೀಕ ಬೇವಿನ ಮರಗಳನ್ನು ನೆಟ್ಟಿದ್ದು, ಅವೆಲ್ಲ ಈಗ ಆಳೆತ್ತರಕ್ಕೆ ಬೆಳೆದು ನಿಂತಿವೆ. ಸಾರ್ವಜನಿಕರು ಈ ಜಾಗೆಯನ್ನು ಒತ್ತುವರಿಮಾಡಬಾರದು, ಮತ್ತು ಅರಣ್ಯದಲ್ಲಿರುವ ಗಿಡಮರಗಳಗೆ ಹಾನಿ ಮಾಡಬಾರದು.
– ವಾಸಿಂ ತೇನಗಿ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಮಖಂಡಿ.

Advertisement

ಈ ಪ್ರದೇಶವನ್ನು ಜಿಲ್ಲೆಯಲ್ಲಿಯೇ ಅತೀ ಸುಂದರವಾದ ವೃಕ್ಷೋಧ್ಯಾನವನವನ್ನಾಗಿಸಲಾಗುವುದು. ಮಕ್ಕಳು ವಯೋವರದ್ದರು ಇಲ್ಲಿ ಸುತ್ತಾಡಿದರೆ ಮನಸ್ಸಿಗೆ ಮದುನೀಡುವಂತಾಗಬೇಕು. ಹಾಗೆ ಈ ಪ್ರದೇಶದಲ್ಲಿ ಅಬಿವೃದ್ಧಿ ಪಡಿಸಲಾಗುತ್ತಿದೆ. ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ವಿಜಯಕುಮಾರ ಕಾಳಪ್ಪನವರ ಹಾಗೂ ತೇರದಾಳ ವಲಯ ಅರಣ್ಯ ಅಧಿಕಾರಿ ಮಲ್ಲು ನಾವಿ.

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next