Advertisement
ಅವರು ಶನಿವಾರ ಹನಗಂಡಿ ಗ್ರಾಮದ ಶಾಲಾ ಆವರಣದಲ್ಲಿ ಪತ್ರಿಕೆಯ ಜೊತೆಗೆ ಮಾತನಾಡಿ, ಅತಿಕ್ರಮಣದ ಕುರಿತು ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ಜಮಖಂಡಿ ಉಪವಿಭಾಗಾಧಿಕಾರಿಗಳಿಗೆ, ತಾಲ್ಲೂಕಿನ ತಹಶೀಲ್ದಾರ್, ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಸರ್ವೆ ಅಧಿಕಾರಿಗಳಿಗೆ 2019 ರಿಂದ ದಿ. 8.04. 2022 ರವರೆಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೆ ಪ್ರಯೋಜನವಾಗಿಲ್ಲ. ಈ ಕುರಿತು ಸರ್ವೆ ಅಧಿಕಾರಿಯನ್ನು ಶಾಲೆಯ ಜಾಗದ ಸರ್ವೆ ಮಾಡಿ ಎಂದು ಕೇಳಿದರೆ ಅವರು ನಾನು ಮಾಡುವುದಿಲ್ಲ ಎನ್ನುತ್ತಾರೆ ಎಂದು ಶಿವಾನಂದ ಕುಂಟಶೆಟ್ಟಿ ತಿಳಿಸಿದರು.
Related Articles
Advertisement
ಶಾಲೆಯ ಜಾಗ ಅತಿಕ್ರಮಣವಾಗಿದೆ. ಆದಷ್ಟು ಬೇಗನೆ ಸರ್ವೆ ಕಾರ್ಯವನ್ನು ಕೈಗೊಳ್ಳಲಾಗುವುದು. ಈ ಕುರಿತು ಅಧಿಕಾರಿಗಳಿಗೆ ತಿಳಿಸುತ್ತೇನೆ.– ಸಿದ್ದು ಸವದಿ, ಶಾಸಕರು ತೇರದಾಳ ಅತಿಕ್ರಮಣ ಕುರಿತು ತಹಶೀಲ್ದಾರ್ ಕಾರ್ಯಾಲಯಕ್ಕೆ ಎಸ್ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಸರ್ವೆ ಕಾರ್ಯಕ್ಕೆ ಆಗ್ರಹಿಸಿ ಮನವಿ ನೀಡಿದ್ದಾರೆ. ಈ ಕುರಿತು ತಹಶೀಲ್ದಾರ್ ಅವರ ಗಮನಕ್ಕೂ ತರಲಾಗಿದೆ. ಆದಷ್ಟು ಬೇಗನೆ ಸರ್ವೆ ಕಾರ್ಯ ನಡೆಸಬೇಕು ಮತ್ತು ಶಾಲೆ ಪ್ರದೇಶಕ್ಕೆ ಬೌಂಡರಿಗಳನ್ನು ಹಾಕಿಕೊಡಬೇಕು ಎಂದು ತಹಶೀಲ್ದಾರ್ ಅವರಿಗೆ ಒತ್ತಾಯಿಸುತ್ತೇನೆ.
– ಸಿ.ಎಂ.ನ್ಯಾಮಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಜಮಖಂಡಿ