Advertisement

ಬಾಣಗಂಗಾ: ವಾಲ್ಕೇಶ್ವರದ ಮಠ;ಗಣೇಶೋತ್ಸವ ಪೂರ್ವಭಾವಿ ಸಭೆ

04:33 PM Aug 24, 2018 | Team Udayavani |

ಮುಂಬಯಿ: ದಕ್ಷಿಣ ಮುಂಬಯಿಯ ಬಾಣಗಂಗಾ ಪರಿಸರದ ವಾಲ್ಕೇಶ್ವರದ ಕೈವಲ್ಯ ಮಠ ಶಾಂತಾದುರ್ಗಾ ದೇವಸ್ಥಾನದಲ್ಲಿ ವಾರ್ಷಿಕ ಗಣೇಶೋತ್ಸವವು ಸೆ. 13 ರಿಂದ ಸೆ. 19 ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, ಇದರ ಪೂರ್ವಸಿದ್ಧತಾ ಸಭೆಯು ಆ. 12 ರಂದು ಪೂರ್ವಾಹ್ನ ನಡೆಯಿತು.

Advertisement

ವಾಲ್ಕೇಶ್ವರ ಕವಳೆ ಮಠದ ಸ್ಥಳೀಯ ನೂತನ ಸಮಿತಿಯ ಪದಾಧಿಕಾರಿಗಳಾದ ಗೌರವ ಕಾರ್ಯದರ್ಶಿ ಪ್ರಮೋದ್‌ ಗಾಯೊ¤ಂಡೆ, ಜತೆ ಕಾರ್ಯದರ್ಶಿಗಳಾದ ಭೂಷಣ್‌ ಜೇಕ್‌, ಗೌರವ ಕೋಶಾಧಿಕಾರಿ ಚಿಂತಾಮಣಿ ನಾಡಕರ್ಣಿ, ಸಮಿತಿಯ ಸದಸ್ಯರುಗಳಾದ ಫಡ್ನವೀಸ್‌,  ಜಯಂತ್‌ ಗಾಯೊ¤ಂಡೆ, ಕಮಲಾಕ್ಷ ಸರಾಫ್‌ ಅವರು ನೇತೃತ್ವದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು.

ಪೂಜ್ಯನೀಯ ಗುರುವರ್ಯ ಕೈವಲ್ಯ ಮಠಾಧೀಶ ಶ್ರೀಮದ್‌ ಶಿವಾನಂದ ಸರಸ್ವತಿ ಸ್ವಾಮೀಜಿ ಅವರ ದಿವ್ಯ ಅನುಗ್ರಹ ಹಾಗೂ ಆದೇಶದ ಮೇರೆಗೆ ರಚಿಸಲ್ಪಟ್ಟ ನೂತನ ಪ್ರಧಾನ ಸ್ಥಳೀಯ ಸಮಿತಿ ಹಾಗೂ ಸಂಚಾಲಕ ಮಂಡಳಿ ಮತ್ತು ಸ್ವಯಂ ಸೇವಕರು ಉಪಸ್ಥಿತರಿದ್ದರು. ಸಭೆಯಲ್ಲಿ 7 ದಿನಗಳ ಕಾಲ ನಡೆಯಲಿರುವ ಗಣೇಶೋತ್ಸವವನ್ನು ಅದ್ದೂರಿಯಾಗಿ ನಡೆಸಲು ಹಲವು ನೂತನ ವಿಚಾರಗಳನ್ನು, ಸಲಹೆಗಳನ್ನು ಮಂಡಿಸಲಾಯಿತು. ಸದಸ್ಯರು ಹಾಗೂ ಸ್ವಯಂ ಸೇವಕರು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.

ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ಪ್ರಮೋದ್‌ ಗಾಯೊ¤ಂಡೆ ಅವರು ಪೂಜಾ ವಿಧಿ-ವಿಧಾನಗಳ ಬಗ್ಗೆ ಹಾಗೂ ಪರವೂರಿನಿಂದ ಬರುವ ಅರ್ಚಕರ ವ್ಯವಸ್ಥೆಯ ಕುರಿತು ಸವಿಸ್ತಾರವಾಗಿ ತಿಳಿಸಿದರು. ಉತ್ಸವದ ಯಶಸ್ಸಿಗೆ ಎಲ್ಲಾ ಕಾರ್ಯಕರ್ತರು ಪರಿಶ್ರಮಿಸಬೇಕು ಎಂದು ನುಡಿದರು.

ಭೂಷ್‌ ಜೇಕ್‌ ಅವರು ಮಾತನಾಡಿ, ಉತ್ಸವಕ್ಕೆ ಆಗಮಿಸಿದ ಸೇವಾದಾರರನ್ನು, ಅತಿಥಿಗಳನ್ನು ಪ್ರತೀ ದಿನ ಆದರಪೂರ್ವಕವಾಗಿ ಸ್ವಾಗತಿಸುವ ವಿಷಯದಲ್ಲಿ ಮಾತನಾಡಿದರು. ಉತ್ಸವದ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಡಾ| ರಮಾನಿಯರ ಉದಾತ್ತ ನೆರವಿನಿಂದ ಕೈಗೊಳ್ಳುವ ಬಗ್ಗೆ ವಿಶ್ಲೇಷಿಸಿದರು.

Advertisement

ಕಮಲಾಕ್ಷ ಸರಾಫ್‌ ಅವರು ಉತ್ಸವದ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸುವ ಬಗ್ಗೆ ಹಾಗೂ ನಿಧಿ ಸಂಗ್ರಹ ಮತ್ತು ಪೂಜಾ ನೋಸಂದಣಿ ಕುರಿತು ಸಲಹೆ ನೀಡಿದರು. ನವೀನ್‌ ನಾಡಕರ್ಣಿ, ಚಿಂತಾಮಣಿ ನಾಡಕರ್ಣಿ, ಪ್ರತೀಕ್‌ ಗಾಯೊ¤ಂಡೆ, ಪ್ರಸಾದ್‌ ಮಯೂರ ದಾರ್‌, ಶಶಿಕಾಂತ ಭಟ್‌   ಸೂಕ್ತ ಸಲಹೆ ನೀಡಿದರು. ಸಭೆಯ ಬಳಿಕ ಶಾಂತಾದುರ್ಗಾ ದೇವಿಯ ಮಹಾಮಂಗಳಾರತಿ ನಡೆಯಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next